ಬೆಳ್ತಂಗಡಿ: ಅಲ್ಪಸಂಖ್ಯಾಕರಿಗೆ ಇತರ ಸಮುದಾಯದ ಹಣ ನೀಡುತ್ತಿರುವುದಾಗಿ ಅಪಪ್ರಚಾರ ಇದೆ. ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದ ಸದ್ಬಳಕೆ ಮಾತ್ರ ಮಾಡಲಾಗುತ್ತಿದೆ ಹಾಗೂ ವಕ್ಫ್ ಸಂಸ್ಥೆಗಳ ಅನುದಾನ ಮಾತ್ರ ಬಳಸಲಾಗುತ್ತಿದೆ ಎಂದು ವಕ್ಫ್ ಹಾಗೂ ಅಲ್ಪಸಂಖ್ಯಾಕ ಕಲ್ಯಾಣ ಸಚಿವ ತನ್ವೀರ್ ಸೇಠ್ ಹೇಳಿದರು.
ಅವರು ಮಂಗಳವಾರ ಗುರುವಾಯನಕೆರೆ ಹಜ್ರತ್ ಹಯಾತುಲ್ ಔಲಿಯಾ ದರ್ಗಾ ಮತ್ತು ಜುಮಾ ಮಸೀದಿ ಆವರಣದಲ್ಲಿ ಸರಕಾರಿ ಅನುದಾನದಲ್ಲಿ ನಿರ್ಮಾಣವಾದ ಶಾದಿ ಮಹಲ್ ಸಭಾಭವನ ಉದ್ಘಾಟಿಸಿ ಮಾತನಾಡಿದರು.
13-14 ರಲ್ಲಿ 8 ಲ.ರೂ. ಕಳೆದ ವರ್ಷ 14 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ದ.ಕ.ದಿಂದ 7 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ 55 ಲಕ್ಷ ರೂ ನೀಡಲಾಗಿದೆ ಎಂದರು. ಸಚಿವ ಬಿ. ರಮಾನಾಥ ರೈ, ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ವಸಂತ ಬಂಗೇರ ಮಾತನಾಡಿದರು.
ತಾಹಿರ್, ಯೂಸುಫ್ ಕನ್ನಡಿಕಟ್ಟೆ, ಸಾದಿಕ್, ರಿಯಾಜ್ ಅಹಮ್ಮದ್, ಯಾಕೂಬ್ ಮುಸ್ಲಿಯಾರ್, ಮಹಮ್ಮದ್
ಹನೀಫ್, ರಿಯಾಜ್ ಪೆರಾಲ್ದರಕಟ್ಟೆ, ಸುಲೈಮಾನ್ ಹಾಜಿ ಅವರನ್ನು ಸಮ್ಮಾನಿಸಲಾಯಿತು.
ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ಸದಸ್ಯ ಧರಣೇಂದ್ರ ಪಿ., ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಭಾರತ್ ಸೇವಾ ದಳದ ಅಲ್ಫೋನ್ಸ್ ಫ್ರಾಂಕೋ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ತೌಸಿಫ್ ಅಹ್ಮದ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ಗುರುವಾಯನಕೆರೆ ಮಸೀದಿ ಖತೀಬ ಅಬ್ದುರ್ರಹಮಾನ್ ಸಾದಾತ್ ತಂಙಳ್ ಬಾಅಲವಿ, ಅಲ್ಪ ಸಂಖ್ಯಾಕ ವ್ಯವಸ್ಥಾಪಕ ಶ್ರೀಧರ ಭಂಡಾರಿ, ಮುದರ್ರಿಸ್ ಸುಲೈಮಾನ್, ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ, ಯಾಕೂಬ್ ಮುಸ್ಲಿಯಾರ್, ಸುಲೆ„ಮಾನ್ ಹಾಜಿ, ಮಹಮ್ಮದ್ ರಫಿಕ್, ಉಸ್ಮಾನ್ ಬಳಂಜ, ಅಬೂಬಕ್ಕರ್, ಗ್ರಾ. ಪಂ. ಸದಸ್ಯ ರಿಯಾಜ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಹಸೈನಾರ್ ಶಾಫಿ ಸ್ವಾಗತಿಸಿ, ಪತ್ರಕರ್ತ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರ್ವಹಿಸಿದರು.
ಅನುದಾನ ಹೆಚ್ಚಳ
ಅಲ್ಪಸಂಖ್ಯಾಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ಅನೇಕ ಕಾರ್ಯಕ್ರಮ ಇಲಾಖೆ ಹಮ್ಮಿಕೊಂಡಿದೆ. ಶಾದಿ ಮಹಲ್ ಮಾಡಲು ತಾಲೂಕಿನ ಒಳಗೆ 1 ಕೋ. ರೂ., ಜಿಲ್ಲಾ ಕೇಂದ್ರದಲ್ಲಿ 2 ಕೋ.ರೂ. ನೀಡಲಾಗುತ್ತಿದೆ. ಮೊದಲಿದ್ದ ಅನುದಾನ ಹೆಚ್ಚಳವಾಗಿದೆ. ಒಂದು ವರ್ಷದಲ್ಲಿ ಅಪೂರ್ಣ ಶಾದಿಮಹಲ್ ನ ಕಾಮಗಾರಿ ಪೂರ್ಣಗೊಳಿಸಲು
113 ಕೋ.ರೂ. ನೀಡಲಾಗಿದೆ. ಅನುದಾನ ದುರ್ಬಳಕೆ ತಡೆಯಲು ಇಲಾಖೆ ಹಾಗೂ ವಕ್ಫ್ ಮಂಡಳಿಗೆ ಸೇರಿದ ಜಾಗದ ಕಾಮಗಾರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. 8 ಸಾವಿರದಿಂದ 4 ಸಾವಿರಕ್ಕೆ ಕುಸಿದ ಉರ್ದು ಶಾಲೆಗಳನ್ನು ಉಳಿಸಲು ಮುತುವರ್ಜಿ ವಹಿಸಲಾಗುತ್ತಿದೆ. ದ.ಕ. ಜಿಲ್ಲೆಗೆ 6 ಹಾಸ್ಟೆಲ್ ಮಂಜೂರು ಮಾಡಲಾಗಿದೆ. ಮುಂದಿನ ವರ್ಷದಿಂದ ಮೊರಾರ್ಜಿಶಾಲೆಗಳಲ್ಲಿ ಪಿಯುಸಿ ಆರಂಭಿಸಲಾಗುವುದು. ದ.ಕ.ದಲ್ಲಿ 2001ರಿಂದ 77 ಸಮುದಾಯ ಭವನ ನಿರ್ಮಿಸಲಾಗಿದ್ದು 10.97 ಕೋ.ರೂ ಅನುದಾನ ನೀಡಲಾಗಿದೆ ಎಂದು ಸಚಿವ ತನ್ವೀರ್ ಸೇಠ್ ಹೇಳಿದರು.