Advertisement

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

03:30 PM Apr 09, 2020 | Hari Prasad |

ನವದೆಹಲಿ: ನಿಮಗೆ ನನ್ನ ಮೇಲೆ ತುಂಬಾ ಪ್ರೀತಿ ಮತ್ತು ಗೌರವ ಇದ್ದರೆ, ನೀವು ಈ ಕೋವಿಡ್ ಬಿಕ್ಕಟ್ಟು ಅಂತ್ಯಗೊಳ್ಳುವವರೆಗೂ ಕನಿಷ್ಠ ಒಂದು ಬಡ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಅದುವೇ ನನಗೆ ನೀವು ಸಲ್ಲಿಸುವ ಒಂದು ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಅವರ ಈ ಹೇಳಿಕೆಗೆ ಕಾರಣ, ‘ನಾಗರಿಕರು ತಮ್ಮ ಬಾಲ್ಕನಿಗಳಲ್ಲಿ ಭಾನುವಾರ (ಏ.12) ಸಂಜೆ 5 ಗಂಟೆಗೆ ನಿಂತು ಗೌರವದಿಂದ ನಮ್ಮ ಪ್ರಧಾನಿಗೆ ನಮಸ್ಕರಿಸಬೇಕು. ಈ ಮನುಷ್ಯ ನಮಗಾಗಿ ಮತ್ತು ನಮ್ಮ ರಾಷ್ಟ್ರಕ್ಕಾಗಿ ತುಂಬಾ ಶ್ರಮಿಸಿದ್ದಾರೆ’ ಎಂಬ ಒಕ್ಕಣೆಯುಳ್ಳ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಹರಿದಾಡುತ್ತಿರುವುದು. ಮತ್ತು ಈ ಪೋಸ್ಟರ್‌ ಅನ್ನು ಸಾಧ್ಯವಾದಷ್ಟು ಜನರಿಗೆ ಫಾರ್ವರ್ಡ್ ಮಾಡುವಂತೆಯೂ ಮನವಿ ಮಾಡಿಕೊಳ್ಳಲಾಗಿತ್ತು.

ಈ ಕುರಿತು ಟ್ವೀಟ್‌ ಮಾಡಿರುವ ಮೋದಿ ‘5 ನಿಮಿಷಗಳ ಕಾಲ ನಿಂತು ಮೋದಿಯನ್ನು ಗೌರವಿಸುವ ಅಭಿಯಾನವನ್ನು ಕೆಲವರು ನಡೆಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಮೊದಲ ನೋಟದಲ್ಲಿ ಮೋದಿಯನ್ನು ವಿವಾದಗಳಿಗೆ ಎಳೆಯುವ ಕಿಡಿಗೇಡಿತನದ ವರ್ತನೆಯಂತೆ ಇದು ತೋರುತ್ತಿದೆ’ ಎಂದು ಪ್ರಧಾನಿಯವರು ಈ ಅಭಿಯಾನದ ವಿಷಯಕ್ಕೆ ಸಂಬಂಧಿಸಿದ ತಮ್ಮ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next