Advertisement
ಈ ಸಂಬಂಧ ಗ್ರಾ.ಪಂ. ಕೂಡ ತಾ.ಪಂ., ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಹಾಗೂ ಸರ್ವೇ ಇಲಾಖೆಯನ್ನು ಸಂಪರ್ಕಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದೆ. ಹಳೆ ನಕಾಶೆ ಸಿಗದಿರುವುದರಿಂದ ಹೊಸದಾಗಿ ನಕಾಶೆ ತಯಾರಿಸುವ ಸಲುವಾಗಿ ತಾ.ಪಂ.ಗೆ ಮನವಿ ಮಾಡಲಾಗಿದೆ. ಕಡತವು ಅಲ್ಲಿಂದ ಕಡಬ ತಹಶೀಲ್ದಾರ್ ಕಚೇರಿಗೆ ರವಾನೆಯಾಗಲಿದ್ದು, ಆಮೇಲಷ್ಟೇ ಗಡಿಗುರುತು ನಡೆಯಬೇಕಿದೆ.
ನಿವೇಶನ ನೀಡದೆ ಹಕ್ಕುಪತ್ರ ನೀಡಿದರೆ ಮನೆ ಕಟ್ಟುವುದಾದರೂ ಹೇಗೆ? ಹಲವು ವರ್ಷಗಳ ಬಳಿಕ ಹಕ್ಕುಪತ್ರ ಕೈಸೇರಿದೆ. ಗಡಿಗುರುತು ಮಾಡದೆ ತಮಗೆ ಯಾವ ನಿವೇಶನ ಎಂದು ತಿಳಿಯುತ್ತಿಲ್ಲ. ಸಮಸ್ಯೆ ಪರಿಹಾರವಾದರೆ 24 ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ. ಸೂಕ್ತ ದಾಖಲೆ
ನಿವೇಶನದ ಸೂಕ್ತ ದಾಖಲೆ ರಚನೆ ಮಾಡಿಕೊಡುವಂತೆ ಗ್ರಾ.ಪಂ.ಗೆ ತಿಳಿಸಲಾಗಿದ್ದು, ಕಡತ ವಿಲೇವಾರಿ ಕೆಲಸಗಳು ನಡೆಯುತ್ತಿವೆ. ದಾಖಲೆ ತಯಾರಾದ ಕೂಡಲೇ ಎಲ್ಲ ಫಲಾನುಭವಿಗಳಿಗೂ ಹಂಚಿಕೆಯಾದ ನಿವೇಶನದ ಗಡಿಗುರುತು ಮಾಡಲಾಗುವುದು ಎಂದು ಸರ್ವೇಯರ್ ಶಿವಣ್ಣ ಅವರು ತಿಳಿಸಿದ್ದಾರೆ.