Advertisement

ಸಂಘಟಿತರಾಗಿ ಕಾರ್ಯ ನಿರ್ವಹಿಸಿ

10:47 AM Jan 21, 2019 | Team Udayavani |

ಚಳ್ಳಕೆರೆ: ಯಾವುದೇ ಸಮಾಜ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಸಂಘಟನೆ ಬಲಪಡಿಸಬೇಕಾಗಿದ್ದ್ದು, ಮಹಿಳೆಯರು ಹೆಚ್ಚು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. ಇಲ್ಲಿನ ಗಾಯತ್ರಿ ವಿಪ್ರ ಮಹಿಳಾ ಸಂಘದ ಕ್ರಿಯಾಶೀಲ ಚಟುವಟಿಕೆ ಪ್ರತಿಯ್ಬೊರಿಗೂ ಸ್ಫೂರ್ತಿದಾಯಕ ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಎಸ್‌. ಗುಂಡೂರಾವ್‌ ತಿಳಿಸಿದರು.

Advertisement

ಭಾನುವಾರ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗಾಯಿತ್ರಿ ವಿಪ್ರ ಮಹಿಳಾ ಸಂಘ ಹಮ್ಮಿಕೊಂಡಿದ್ದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಹಿಳೆಯರಲ್ಲಿ ಸಂಘಟದ ಚಟುವಟಿಕೆ ಬಗ್ಗೆ ವಿಶೇಷವಾಗಿ ಆಸಕ್ತಿ ಇದೆ. ಈ ನಿಟ್ಟಿನಲ್ಲಿ ಪ್ರತಿವರ್ಷವೂ ಮಹಿಳೆಯರು ಹಲವಾರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಗೌರವಾಧ್ಯಕ್ಷ ಎಂ. ವಾಸುದೇವರಾವ್‌ ಮಾತನಾಡಿ, ಕಳೆದ 10 ವರ್ಷಗಳಿಂದ ಗಾಯತ್ರಿ ವಿಪ್ರ ಮಹಿಳಾ ಸಂಘ ನಿರಂತರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಮಾಜಮುಖೀ ಕಾರ್ಯಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಸಹ ಮುನ್ನಡೆ ಸಾಧಿಸಿದೆ. ಪ್ರತಿ ತಿಂಗಳು ಎಲ್ಲರೂ ಸೇರಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಅನುಷ್ಠಾನಗೊಳಿಸುತ್ತಿದ್ದು, ಇದು ಮಹಿಳಾ ಸಂಘದ ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಯತ್ರಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ ವಾದಿರಾಜ್‌ ಮಾತನಾಡಿ, ನಮ್ಮ ಸಂಘ ಹತ್ತು ವರ್ಷಗಳಿಂದ ಹಲವಾರು ಸಮಾಜಿಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಘವು ದಶಮಾನೋತ್ಸವ ಕಾರ್ಯಕ್ರಮದತ್ತ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ. ನಮಗೆ ಸದಾಕಾಲ ಪ್ರೋತ್ಸಾಹ ನೀಡುವ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮಹಿಳಾ ಸಂಘದ ಎಲ್ಲ ಪದಾಧಿಕಾರಿಗಳು ನೀಡುವ ಸಹಕಾರವೇ ಪ್ರೇರಣೆಯಾಗಿದೆ ಎಂದರು.

Advertisement

ಮುಂಬರುವ ದಿನಗಳಲ್ಲಿ ಮತ್ತಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವನ್ನು ಸಂಘ ಹೊಂದಿದ್ದು, ಎಲ್ಲರೂ ಇದೇ ರೀತಿ ಸಹಕಾರ ನೀಡಬೇಕು. ದಶಮಾನೋತ್ಸವ ಹಿನ್ನೆಲೆಯಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಸಂಘದ ಸದಸ್ಯರು ನಡೆಸುತ್ತಿದ್ದು, ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಮಹಿಳಾ ಘಟಕದ ಗೌರವಾಧ್ಯಕ್ಷೆ ಅಶ್ವತಮ್ಮ, ಉಪಾಧ್ಯಕ್ಷರಾದ ಜಯಲಕ್ಷ್ಮೀ, ಶ್ಯಾಮಲಾ, ಕಾರ್ಯದರ್ಶಿ ಮಧುಮತಿ, ಸಹ ಕಾರ್ಯದರ್ಶಿ ಗೀತಾ, ಸುಚಿತ್ರ, ಖಜಾಂಚಿ ನಾಗಮಣಿ, ಲೆಕ್ಕಪರಿಶೋಧಕಿ ನಿರ್ಮಲಾ, ನಿರ್ದೇಶಕರಾದ ಇಂದಿರಾ, ಸುಮಾ, ಲತಾ, ಉಷಾ, ರಮಾಮಣಿ, ತ್ರಿವೇಣಿ, ಗಿರಿಜಾ, ಪ್ರಭಾ, ಲಲಿತಾ, ತಾಲೂಕು ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಟಿ. ಶಂಕರನಾರಾಯಣ, ನಿರ್ದೇಶಕರಾದ ಎಂ. ನಾಗರಾಜರಾವ್‌, ರಾಮಕೃಷ್ಣರಾವ್‌, ಎನ್‌. ಗೋಪಿನಾಥ, ಎಂ. ಸತ್ಯನಾರಾಯಣರಾವ್‌, ಎಂ.ಜೆ. ಶ್ರೀಧರಮೂರ್ತಿ, ಶೈಲಜಾ, ಶಾಂತಮ್ಮ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next