Advertisement

Complaint: ಯತ್ನಾಳ್‌ ವಿರುದ್ಧ ಸಚಿವ ದಿನೇಶ್‌ ಗುಂಡೂರಾವ್‌ ಪತ್ನಿ ಟಬು ದೂರು

12:33 PM Apr 08, 2024 | Team Udayavani |

ಬೆಂಗಳೂರು: ಗಾಂಧಿನಗರ ಶಾಸಕ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮತ್ತು ಅವರ ಕುಟುಂಬದ ಸದಸ್ಯರನ್ನು “ದೇಶ ವಿರೋಧಿಗಳು’ ಎಂದು ನಿಂದಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ದಿನೇಶ್‌ ಗುಂಡೂರಾವ್‌ ಪತ್ನಿ ಟಬು ರಾವ್‌ ಸಂಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಸಂಜಯನಗರ ಠಾಣೆಗೆ ಭಾನುವಾರ ಸಂಜೆ ಖುದ್ದು ತೆರಳಿದ ಟಬು ರಾವ್‌ ಅವರು,  ಏ.6ರಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು “ಸಚಿವ ದಿನೇಶ್‌ ಗುಂಡೂರಾವ್‌ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ದೇಶ ವಿರೋಧಿ ಹೇಳಿಕೆ ನೀಡುವುದು ಅವರ ಚಟವಾಗಿದೆ’ ಈ ಮೂಲಕ ಸಚಿವರು ಹಾಗೂ ಅವರ ಕುಟುಂಬವನ್ನು ಅವಹೇಳನ ಮಾಡಿ ನಿಂದಿಸಿದ್ದಾರೆ. ಜತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಟಬು ರಾವ್‌, ದಿನೇಶ್‌ ರಾಜಕೀಯದಲ್ಲಿ ಇದ್ದಾರೆ. ಅವರ ಬಗ್ಗೆ ಮಾತನಾಡಲಿ. ನಮ್ಮ ಬಗ್ಗೆ ಏಕೆ ಮಾತನಾಡಬೇಕು? ಎಂದು ಕಿಡಿಕಾರಿದರು.

ಇದೇ ವೇಳೆ ಕ್ರಿಮಿನಲ್‌ ಮಾನನಷ್ಟ ಮೊಕ್ಕದಮೆ ಹೂಡುತ್ತೇನೆ ಎಂದು ಟಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next