Advertisement

ಪ್ರಾಣಿ ದಯೆ ತೋರದ ಸಂಘಟನೆಗಳು

11:08 AM Aug 24, 2018 | |

ಬೆಂಗಳೂರು: ಪಾರಂಪರಿಕ ಹಬ್ಬಗಳು, ಉತ್ಸವಗಳ ಸಂದರ್ಭದಲ್ಲಿ ಪ್ರಾಣಿಗಳನ್ನು ಬಳಸಿಕೊಂಡಾಗ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂದು ಬೀದಿಗಿಳಿದು ಹೋರಾಟ ಮಾಡುವ ಪ್ರಾಣಿದಯಾ ಸಂಘಗಳಿಗೆ ಕೊಡಗಿನಲ್ಲಿ ಪ್ರವಾಹ, ಗುಡ್ಡಕುಸಿತದಿಂದ ಅನಾಥವಾಗಿರುವ ಪ್ರಾಣಿಗಳ ಮೂಕರೋದನೆ ಕೇಳಿಸದಂತಾಗಿದೆ.

Advertisement

ಕೊಡಗಿನಲ್ಲಿ ಸಂಭವಿಸಿರುವ ಅನಾಹುತದಿಂದ ನೂರಾರು ಮೂಕ ಜೀವಿಗಳು ಸಮಸ್ಯೆಯಲ್ಲಿ ಸಿಲುಕಿ ಸಹಾಯಕ್ಕಾಗಿ ಮೊರೆಯಿಡುತ್ತಿವೆ. ಆಹಾರ ಇಲ್ಲದೆ ನರಳುತ್ತಿವೆ. ಹೀಗಿದ್ದರೂ ಪ್ರಾಣಿಗಳ ರಕ್ಷಣೆಗೆ ಪ್ರಾಣಿದಯಾ ಸಂಘಟನೆಗಳು ಮುಂದಾಗಿರುವ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರಾಣಿದಯಾ ಸಂಘಟನೆಗಳು ಎಂದು ಹೇಳಿಕೊಳ್ಳುವ ಹಾಗೂ ಪ್ರಾಣಿಗಳಿಗೆ ಸ್ವಲ್ಪ ಹಿಂಸೆಯಾದರೂ ಬೀದಿಗಿಳಿದು ಪ್ರತಿಭಟನೆ ನಡೆಸುವ ಸಂಘಟನೆಗಳು ಕೊಡಗಿನ ಕಡೆಗೆ ಮುಖ ಮಾಡದಿರು ವುದು ವಿಪರ್ಯಾಸದ ಸಂಗತಿಯಾಗಿದ್ದು, ಸಂಘಟನೆಗಳ ನಿಲುವು ಪ್ರಾಣಿಗಳ ರಕ್ಷಣೆಯ ಕುರಿತು ಸಂಸ್ಥೆಗಳು ಹೊಂದಿರುವ ಕಾಳಜಿಯನ್ನು ಪ್ರಶ್ನೆ ಮಾಡುವಂತಿವೆ.

ಮಳೆಯಿಂದ ಕೊಡಗು ಜಿಲ್ಲೆಯ ಬಹುತೇಕ ಭಾಗಗಳ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ಪರಿಣಾಮ ಮತ್ತೂಂದು ಭಾಗದಲ್ಲಿರುವ ನಾಯಿ, ಬೆಕ್ಕು ಸೇರಿದಂತೆ ಇತರೆ ಜಾನುವಾರುಗಳು ಸಮಸ್ಯೆ ಅನುಭವಿಸುತ್ತಿವೆ. ಜತೆಗೆ ಆಹಾರಕ್ಕಾಗಿ ಕೂಗುವಂತಹ ದೃಶ್ಯಗಳು ಕಂಡುಬರುತ್ತಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳ ಸಿಬ್ಬಂದಿ ಅಂತಹ ಪ್ರಾಣಿಗಳ ರಕ್ಷಣೆಗೆ ಮುಂದಾಗುತ್ತಿದ್ದಾರೆ. ಆದರೆ, ಪ್ರಾಣಿದಯಾ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್ಅ ನಿಮಲ್ಸ್‌ (ಪೇಟಾ) ಇಂಡಿಯಾ ಸಂಸ್ಥೆಯ ಸದಸ್ಯರೊಬ್ಬರು, ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪೇಟಾ ಸಂಸ್ಥೆಯ ಸ್ವಯಂ ಸೇವಕರು ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ.

Advertisement

ಹೀಗಾಗಿ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಪ್ರಾಣಿಗಳ ರಕ್ಷಣೆಯನ್ನು ವಿವಿಧ ಪ್ರಾಣಿದಯಾ ಸಂಘಟನೆಗಳ ಸಹಭಾಗಿತ್ವದಲ್ಲಿ ಕೈಗೊಂಡಿದ್ದು, ಸಂಸ್ಥೆಯ ಕಾಲ್‌ಸೆಂಟರ್‌ಗೆ ಕರೆ ಮಾಡಿ ಪ್ರಾಣಿಗಳು ತೊಂದರೆಯಲ್ಲಿರುವುದು ತಿಳಿಸಿದರೆ ಕೂಡಲೇ ಸಂಸ್ಥೆಗಳು ರಕ್ಷಣೆಗೆ ಮುಂದಾಗಲಿದ್ದಾರೆ ಎಂದು ಹೇಳಿದರು.

60 ಪ್ರಾಣಿಗಳ ರಕ್ಷಣೆ: ನಗರದ ಕ್ಯೂಪ ಸಂಸ್ಥೆಯ ವತಿಯಿಂದ 10 ಜನರ ತಂಡವೊಂದು ಕೊಡಗು ಜಿಲ್ಲೆಯ ಬೈಲುಕುಪ್ಪೆಯಲ್ಲಿ ಪ್ರಾಣಿಗಳ ಪುನರ್‌ವಸತಿ ಕೇಂದ್ರವನ್ನು ತೆರೆಯಲಾಗಿದ್ದು, ತಂಡದಲ್ಲಿ ಇಬ್ಬರು ಪಶು ವೈದ್ಯರಿದ್ದಾರೆ. ಕಳೆದ 3 ದಿನಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ವಯಂ ಸೇವಕರು ಸ್ಥಳೀಯರ ನೆರವಿನೊಂದಿಗೆ ಸುಮಾರು 20 ಹಸುಗಳು ಹಾಗೂ 40 ನಾಯಿಗಳನ್ನು ರಕ್ಷಣೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.  

ಕೆಲ ಸಂಸ್ಥೆಗಳ ಸಹಾಯ ದಿಂದ ಕೊಡಗಿನಲ್ಲಿ ಪ್ರಾಣಿಗಳನ್ನು ರಕ್ಷಣೆ ಕಾರ್ಯ ಕೈಗೊಂಡಿದ್ದು, ಬೈಲುಕುಪ್ಪೆಯಲ್ಲಿ ಪ್ರಾಣಿ ಪುನರ್‌ವಸತಿ ಕಲ್ಪಿಸಲು ಮುಂದಾಗಿದ್ದು, 10 ಜನರ ತಂಡ ಈಗಾಗಲೇ 60 ಪ್ರಾಣಿಗಳನ್ನು ರಕ್ಷಿಸಿದ್ದಾರೆ.  
 ಡಾ.ಶೀಲಾರಾವ್‌, ಕ್ಯೂಪಾ ಅಧ್ಯಕೆ

ನಮ್ಮ ಸಂಘಟನೆಯ ಕಾರ್ಯಕರ್ತರು ಯಾರೂ ಹೋಗಿಲ್ಲ. ಆದರೆ, ಕೊಡಗಿನಲ್ಲೇ ಇರುವ ಕಾರ್ಯಕರ್ತರು ಕೂಡ ಘಟನೆಗಳ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ಪ್ರಾಣಿಗಳ ಸಾವು-ನೋವಿನ ಬಗ್ಗೆ ಮಾಹಿತಿ ಸಿಗುತ್ತಿಲ್ಲ.
 ಪುಷ್ಪವತಿ, ಕಾರ್ಯದರ್ಶಿ ಪ್ರಾಣಿದಯಾ ಸಂಘ, ಹೆಬ್ಟಾಳ

Advertisement

Udayavani is now on Telegram. Click here to join our channel and stay updated with the latest news.

Next