Advertisement

ಹತ್ರಾಸ್‌ ಘಟನೆ ಖಂಡಿಸಿ ವಿವಿದ ಸಂಘಟನೆ ಪ್ರತಿಭಟನೆ

06:22 PM Oct 19, 2020 | Suhan S |

ಬಳ್ಳಾರಿ: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌, ಜನವಾದಿ ಮಹಿಳಾ ಸಂಘಟನೆಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

Advertisement

ಸಮಾಜದ ತಳವರ್ಗಗಳ ಸಮೂಹಗಳಮೇಲಿನ ದೌರ್ಜನ್ಯಗಳು, ಸಾಮೂಹಿಕ ಅತ್ಯಾಚಾರಗಳು, ಮತ್ತು ಬರ್ಬರ ಹತ್ಯೆಗಳು ಆಘಾತಕಾರಿಯಾಗಿ ಹೆಚ್ಚುತ್ತಿದ್ದು ಈ ಬೆಳವಣಿಗೆಸಮಾಜದ ದಲಿತ ದಮನಿತರನ್ನು ಆತಂಕಕ್ಕೆದೂಡಿದೆ. ಉತ್ತರಪ್ರದೇಶದ ಹತ್ರಾಸ್‌ ಎಂಬಲ್ಲಿಅಲ್ಲಿನ ಮೇಲ್ಜಾತಿ ಭೂಮಾಲಿಕರು 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕಅತ್ಯಾಚಾರವೆಸಗಿ ಅವಳನ್ನು ಬರ್ಬರವಾಗಿ ಕೊಲೆ ಮಾಡಿರುವುದು ಅತ್ಯಂತ ಅಮಾನುಷ ಕೃತ್ಯವಾಗಿದೆ. ಇಡೀ ದೇಶವನ್ನೇ ಅದು ಬೆಚ್ಚಿ ಬೀಳುವಂತೆ ಮಾಡಿದೆ. ಈ ಕ್ರೂರ ಕೃತ್ಯದ ವಿರುದ್ಧ ಇಡೀ ದೇಶದಲ್ಲಿ ಜನ ಬೀದಿಗಿಳಿದಿದ್ದಾರೆ.

ಆದರೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮಾತ್ರ ಕನಿಷ್ಟ ಮಾನ ಮರ್ಯಾದೆ ಇಲ್ಲದೆ ಅಪರಾಧಿಗಳಿಗೆ ರಕ್ಷಣೆ ನೀಡುವುದರಲ್ಲಿ ಸಾಕ್ಷಿ ಪುರಾವೆಗಳನ್ನು ನಾಶ ಮಾಡುವುದರಲ್ಲಿ ಮತ್ತು ನೊಂದ ಕುಟುಂಬವನ್ನು ಬೆದರಿಸುವ ಮೇಲ್ಜಾತಿ ಭೂಮಾಲಿಕ ಶಕ್ತಿಗಳಿಗೆ ಬಹಿರಂಗ ಬೆಂಬಲ ನೀಡುವುದರಲ್ಲಿ ಮಗ್ನವಾಗಿದೆ. ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟ ಯುವತಿಬಡ ಕೃಷಿ ಕೂಲಿಕಾರ ದಲಿತ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ ಎಂದರು.

ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಿಗದಿ ತ ಅವಧಿಯಲ್ಲಿ ಹತ್ರಾಸ್‌ ಪ್ರಕರಣದ ಪರಿಣಾಮಕಾರಿ ತನಿಖೆ ಮಾಡಬೇಕು. ಕರ್ತವ್ಯ ಉಲ್ಲಂಘಿಸಿರುವ ಪೊಲೀಸ್‌ ಮತ್ತು ಇತರ ಅಧಿಕಾರಿಗಳ ವಿರುದ್ಧ ಕಠಿಣ ಶಿಕ್ಷೆ ವಿ ಧಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ಗರಿಷ್ಠ ರಕ್ಷಣೆ ನೀಡಬೇಕು. ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕಿಸಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ದೌರ್ಜನ್ಯಕ್ಕೊಳಗಾದವರಕುಟುಂಬಗಳಿಗೆ ಕೃಷಿ ಭೂಮಿ ಮತ್ತು ವಾಸಕ್ಕೆಮನೆಗಳು ಒದಗಿಸಬೇಕು. ಎಲ್ಲರಿಗೂಉದ್ಯೋಗವನ್ನು ಮತ್ತು ಕನಿಷ್ಟ ವೇತನವನ್ನು ಖಚಿತಪಡಿಸಬೇಕು. ಮೀಸಲಾತಿ, ದಲಿತರದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳಾದೌರ್ಜನ್ಯ ವಿರೋ  ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದುಪ್ರತಿಭಟನಾಕಾರರು ಒತ್ತಾಯಿಸಿದರು.

ಬಳಿಕ ಜಿಲ್ಲಾಡಳಿದ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಕೆಪಿಆರ್‌ಎಸ್‌ ಕಾರ್ಯದರ್ಶಿ ಯು.ಬಸವರಾಜ, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ, ಕಿರಣ್‌ಕುಮಾರಿ, ಮಲ್ಲಮ್ಮ, ರಂಗನಾಥ (ಪಾಂಡು), ಅರುಣ, ಪ್ರಭಾವತಿ, ಓಂಕಾರಮ್ಮ, ಪಿ.ಆರ್‌.ವೆಂಕಟೇಶ್‌ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next