Advertisement

ಕಲ್ಯಾಣ ಮಂಟಪಗಳಿಗೆ ನೀಡಿರುವ ಮುಂಗಡ ಹಣವನ್ನು ಹಿಂತಿರುಗಿಸಲು ಆದೇಶ

04:51 PM Jun 11, 2020 | keerthan |

ಬೆಂಗಳೂರು: ಈ ಬಾರಿ ಮದುವೆ ಮುಂತಾದ ಶುಭ ಸಮಾರಂಭಗಳಿಗಾಗಿ ಕಲ್ಯಾಣ ಮಂಟಪಗಳಿಗೆ ಜನರು ನೀಡಿರುವ ಮುಂಗಡ ಹಣವನ್ನು ಹಿಂತಿರುಗಿಸಬೇಕು ಎಂದು ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Advertisement

ಈ ವರ್ಷ ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ಸಾರ್ವಜನಿಕ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇದಕ್ಕೂ ಮೊದಲು ಮದುವೆ ಮುಂತಾದ ಶುಭ ಕಾರ್ಯಗಳಿಗಾಗಿ ಬಹಳಷ್ಟು ಮಂದಿ ಕಲ್ಯಾಣ ಮಂಟಪಗಳನ್ನು ನಿಗಧಿ ಪಡಿಸಿದ್ದರು. ಇದೇ ಕಾರಣಕ್ಕಾಗಿ ಮುಂಗಡ ಹಣವನ್ನೂ ಪಾವತಿ ಮಾಡಿದ್ದರು.

ಲಾಕ್ ಡೌನ್ ಆದ ಕಾರಣ ಕಲ್ಯಾಣ ಮಂಟಪಗಳಲ್ಲಿ ಸಮಾರಂಭಗಳು ನಡೆಯದ ಕಾರಣ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪಗಳು ಮುಂಗಡ ಹಣವನ್ನು ಮರುಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಕಲ್ಯಾಣ ಮಂಟಪ ಮಾಲೀಕರು ಮುಂಗಡ ಹಣ ಮರುಪಾವತಿ ಮಾಡದೇ ಇರುವ ಬಗ್ಗೆ ಈಗಾಗಲೇ ದೂರುಗಳು ಕೇಳಿ ಬಂದಿದೆ. ಸಾರ್ವಜನಿಕರು ಸಂದಾಯ ಮಾಡಿದ ಹಣದಲ್ಲಿ 5% ತೆರಿಗೆ ಕಡಿತ ಮಾಡಿ ಉಳಿದ ಹಣವನ್ನು ಹಿಂತುರಿಗಿಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next