Advertisement

ಒಡೆತನದ ಹಕ್ಕು ಪತ್ರ ವಿತರಣೆಗೆ ಕ್ರಮ

01:11 PM Apr 21, 2017 | Team Udayavani |

ಹರಪನಹಳ್ಳಿ: ಅನೇಕ ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುವ ಬಡ ಜನರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸುಮಾರು 1200 ಫಲಾನುಭವಿಗಳಿಗೆ ಭೂಮಿ ಒಡೆತನದ  ಹಕ್ಕು ಪತ್ರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಪಿ.ರವೀಂದ್ರ ತಿಳಿಸಿದರು. 

Advertisement

ತಾಲೂಕಿನ ಅಡವಿಹಳ್ಳಿ ಗ್ರಾಪಂ ವ್ಯಾಪ್ತಿಯ ಚೆಕ್‌ಡ್ಯಾಂ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಲೇ 350 ಜನ ರೈತರ ಪಟ್ಟಾ ಸಿದ್ಧವಾಗಿವೆ. ಸುಮಾರು ಜನರು ಅರ್ಜಿ ಸಲ್ಲಿಸಿರುವುದರಿಂದ ಅವರ ಜಮೀನಿನ ಕುರಿತ ದಾಖಲೆ ಪತ್ರಗಳ ಪರಿಶೀಲನೆ ನಡೆಯುತ್ತಿದೆ. 

ಪರಿಶೀಲನೆ ಪೂರ್ಣಗೊಂಡ ನಂತರ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಆದರೆ ಜಮೀನಿನ ಪಟ್ಟಾ ಕೊಡಿಸುವುದಾಗಿ ಬಡ ರೈತರಿಂದ ಹಣ ವಸೂಲಿ ದಂಧೆ ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ರೈತರು ಯಾರಿಗೂ ನಯಾಪೈಸೆ ಕೊಡಬೇಡಿ ಎಂದು ಮನವಿ ಮಾಡಿದರು. 

ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್‌ ಯೋಜನೆ ಮುಂದಿನ ದಿನಗಳಲ್ಲಿ ಕ್ಯಾಬಿನೆಟ್‌ ಗೆ ಬರಲಿದೆ. 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ತೆಲಂಗಾಣ ಮಾದರಿಯ ಪೈಪ್‌ಗ್ಳನ್ನು ಅಳವಡಿಸಲು ರೂಪರೇಷೆ ತಯಾರಿಸಲಾಗಿದೆ. ಹಾಗಾಗಿ 257 ಕೋಟಿ ರೂ.ಗಳ ಬದಲಾಗಿ 312 ಕೋಟಿ ರೂ.ಗೆ ಅನುದಾನ ಹೆಚ್ಚಳವಾಗಿದೆ.

ಈ ಯೋಜನೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಶೀಘ್ರವೇ ಕ್ಯಾಬಿನೆಟ್‌ ಅನುಮತಿ ಪಡೆದು ಮುಖ್ಯಮಂತ್ರಿ, ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. 

Advertisement

ಪಟ್ಟಣದ ಕೆಇಬಿ ಹಿಂಭಾಗದ ಉಚ್ಚೆಂಗೆಮ್ಮದೇವಿ ದೇವಸ್ಥಾನವಿರುವ ಗುಡ್ಡದಲ್ಲಿ ಅರಣ್ಯ ಇಲಾಖೆ ವತಿಯಿಂದ 1.35 ಕೋಟಿ ರೂ.ವೆಚ್ಚದಲ್ಲಿ ನಗರ ಸಸ್ಯ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದ್ದು, ಸದ್ಯ 35 ಲಕ್ಷರೂ. ಗಳ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಭಕ್ತರಿಗೆ, ವಾಯು ವಿಹಾರಿಗಳಿಗೆ ವಾಕಿಂಗ್‌ ಪಾತ್‌, ಸಸಿ ನೆಡುವುದು, ಆಸನ ವ್ಯವಸ್ಥೆ, ಪರಗೋಲ ಸೇರಿದಂತೆ 25 ಎಕರೆ ಪ್ರದೇಶ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. 

ಜಿಗಟೇರಿ ಐಬಿ ಬಳಿರುವ ಜಿಂಕೆ ವಶ ಪುನರುಜ್ಜೀವನಗೊಳಿಸಲು ಅಲ್ಲಿಯೂ ನಾರದಮುನಿ ದೈವಿ ವನ ನಿರ್ಮಾಣ ಮಾಡಲಾಗುವುದು ಎಂದರು. ಉಚ್ಚೆಂಗೆಮ್ಮದೇವಿ ದೇವಸ್ಥಾನದ ಗುಡ್ಡದಲ್ಲಿ ನಡೆಯುತ್ತಿರುವ ಕಾಮಗಾರಿ, ಹೊಂಬಳಗಟ್ಟಿ ಗ್ರಾಮ, ತೋಗರಿಕಟ್ಟೆ ಗ್ರಾ.ಪಂ ವ್ಯಾಪ್ತಿಯ ಕಾಮಗಾರಿಗಳನ್ನು ಶಾಸಕರು ವೀಕ್ಷಿಸಿದರು.

ಮುಖಂಡರಾದ ಎಂ.ವಿ.ಅಂಜಿನಪ್ಪ, ಕೋಡಿಹಳ್ಳಿ ಭೀಮಪ್ಪ, ಕೆ.ಎಂ.ಬಸವರಾಜಯ್ಯ, ತಾಪಂ ಸದಸ್ಯೆ ಯಲಮ್ಮ, ಐ.ಎಂ. ಬಸವರಾಜ್‌, ಸಿದ್ದಲಿಂಗಸ್ವಾಮಿ, ಚನ್ನಪ್ಪ, ಪಿ.ಪ್ರೇಮಕುಮಾರಗೌಡ, ಅಲ್ಮರಸೀಕೆರೆ ರಾಜಣ್ಣ, ಪೂಜಾರ ಬಸಪ್ಪ, ದಕ್ಷಿಣಮೂರ್ತಿ, ಎಂ.ಹಾಲೇಶ್‌, ಮಲ್ಲೇಶ್‌, ದೊಡ್ಡ ಹಾಲಪ್ಪ, ಬಸಪ್ಪ, ರಾಮಪ್ಪ ಮತ್ತಿರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next