Advertisement
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಗುಡುಗಿನಿಂದ ಕೂಡಿದ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಜು.18 ಮತ್ತು 21ರವರೆಗೆ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೊಷಿಸಲಾಗಿದೆ.
Related Articles
ನೈರುತ್ಯ ಮುಂಗಾರು ಶನಿವಾರ ರಾಜ್ಯದ ಉತ್ತರ ಒಳನಾಡಿನಲ್ಲಿ ಚುರುಕು ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿ, ಉತ್ತರ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ವ್ಯಾಪಕ ಮಳೆಯಾಗಿದೆ. ಮುಖ್ಯವಾಗಿ, ಉತ್ತರ ಕನ್ನಡದ ಗೋಕರ್ಣದಲ್ಲಿ 11 ಸೆಂ.ಮೀ, ಆಗುಂಬೆಯಲ್ಲಿ 10 ಸೆಂ.ಮೀ, ಮಂಕಿ, ಕಾರವಾರ, ಬಸಗೋಡಿನಲ್ಲಿ ತಲಾ 9 ಸೆಂ.ಮೀ, ಉತ್ತರ ಕನ್ನಡದ ಬೇಲಿಕೇರಿಯಲ್ಲಿ 8 ಸೆಂ.ಮೀ. ಮಳೆಯಾಗಿದೆ. ಉಳಿದಂತೆ, ಮಂಗಳೂರು, ಕೋಟ, ಗಾಣಗಾಪುರದಲ್ಲಿ ತಲಾ 6 ಸೆಂ.ಮೀ, ಸುಬ್ರಮಣ್ಯ, ಕಾರ್ಕಳ, ಕೊಲ್ಲೂರು, ಕುಂದಾಪುರ, ಶಿರಾಲಿ, ಹೊನ್ನಾವರ, ಕಲಬುರ್ಗಿಯ ಗುಂಡುಗುರ್ತ್‌ನಲ್ಲಿ ತಲಾ 5 ಸೆಂ.ಮೀ, ಭಟ್ಕಳ, ಕದ್ರಾ, ಮುಲ್ಕಿ, ಉಡುಪಿಯ ಸಿದ್ದಾಪುರ, ಯಾದಗಿರಿಯ ಸೈದಾಪುರ, ಲಿಂಗನಮಕ್ಕಿ, ಸಾಗರ, ತಾಳಗುಪ್ಪದಲ್ಲಿ ತಲಾ 4 ಸೆಂಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.
Advertisement