Advertisement

ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ವಿರೋಧ

12:11 PM Aug 12, 2018 | Team Udayavani |

ಬೆಂಗಳೂರು: ಇಂದಿರಾನಗರದಲ್ಲಿ ಬಿಡಿಎ ಕಾಂಪ್ಲೆಕ್ಸ್‌ ಕಟ್ಟಡ ತೆರವುಗೊಳಿಸಿ ಶಾಪಿಂಗ್‌ ಮಾಲ್‌ ನಿರ್ಮಿಸುವ ಪ್ರಸ್ತಾಪ ವಿರೋಧಿಸಿ ಯುನೈಟೆಡ್‌ ಬೆಂಗಳೂರು ಸೇರಿದಂತೆ ಸ್ಥಳೀಯ ನಾಗರಿಕ ಸಂಘಟನೆ ಸದಸ್ಯರು ಶನಿವಾರ ಪ್ರತಿಭಟಿಸಿದರು.

Advertisement

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಪಿ.ಸಿ.ಮೋಹನ್‌, ಇಂದಿರಾನಗರ ಜನವಸತಿ ಪ್ರದೇಶವಾಗಿದ್ದು, ವಾಣಿಜ್ಯ ಚಟುವಟಿಕೆಗಳು ಮಿತಿಮೀರಿ ಬೆಳೆದಿವೆ. ಇಲ್ಲಿ ವಾಸಿಸುತ್ತಿರುವವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಈಗಿರುವ ಬಿಡಿಎ ಕಾಂಪ್ಲೆಕ್ಸ್‌ ಕೆಡವಿ, ಮಾಲ್‌ ಮಾದರಿಯ ಬಹುಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಒಂದೊಮ್ಮೆ ಮಾಲ್‌ ನಿರ್ಮಿಸಿದರೆ 171 ಮರಗಳು ನಾಶವಾಗಗುತ್ತವೆ. ಅಲ್ಲದೆ, ಇಂದಿರಾನಗರಕ್ಕೆ ಈ ಕಾಂಪ್ಲೆಕ್ಸ್‌ ಅಗತ್ಯವೂ ಇಲ್ಲ ಎಂದು ತಿಳಿಸಿದರು.

ಎನ್‌ಜಿಟಿ ನಿಯಮದ ಪ್ರಕಾರ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ. ಏಕೆಂದರೆ, ಈ ಕಾಂಪ್ಲೆಕ್ಸ್‌ನ ಸಮೀಪದಲ್ಲಿಯೇ ಬನ್ನಿಮಂಗಲ ಕೆರೆ, ರಾಜಕಾಲುವೆ ಇದೆ. ಈಗಿರುವ ಕಟ್ಟಡ ಕೂಡ ಬಫ‌ರ್‌ ಜೋನ್‌ನಲ್ಲಿ ಇದೆ. ಹೀಗಾಗಿ, ರಾಜ್ಯ ಸರ್ಕಾರ ಕೂಡಲೇ ಈ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಶಾಸಕ ರಘು  ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next