Advertisement

ವಿದ್ಯುತ್‌ ಕಾಯ್ದೆ ತಿದ್ದುಪಡಿಗೆ ವಿರೋಧ

10:29 AM Jun 02, 2020 | Suhan S |

ಮೂಡಲಗಿ: ಕೇಂದ್ರ ಸರಕಾರವು 2003ರ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ಮತ್ತು ವಿದ್ಯುತ್‌ ಕ್ಷೇತ್ರದ ವಿತರಣಾ ವ್ಯವಸ್ಥೆಯನ್ನು ಖಾಸಗಿಕರಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಇಲ್ಲಿಯ ಹೆಸ್ಕಾಂ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

Advertisement

ಸೋಮವಾರ ಹೆಸ್ಕಾಂ ಕಚೇರಿ ಆವರಣದಲ್ಲಿ ಸೇರಿದ ಹೆಸ್ಕಾಂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಖಾಸಗೀಕರಣದಿಂದ ನಮಗೆ, ರಾಜ್ಯ ಸರಕಾರಕ್ಕೆ ಹಾಗೂ ಎಲ್ಲ ರೈತಾಪಿ ವರ್ಗಕ್ಕೂ ತೊಂದರೆ ಆಗಲಿದೆ. ಆದ್ದರಿಂದ ಕೇಂದ್ರ ಸರಕಾರ ಖಾಸಗೀಕರಣ ಮತ್ತು ತಿದ್ದುಪಡಿ ಕಾಯ್ದೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿದರು. ಗ್ರಾಮೀಣ ಶಾಖಾಧಿ ಕಾರಿ ಆರ್‌.ಡಿ. ಪಿಡಾಯಿ, ಸಿಬ್ಬಂದಿ ಮೆಹಬೂಬ ಶೇಖಬಡೆ ಮಾತನಾಡಿದರು. ಪಟ್ಟಣ ಶಾಖಾಧಿಕಾರಿ ಪಿ.ಅರ್‌. ಯಡಹಳ್ಳಿ, ಸಿಬ್ಬಂದಿಗಳಾದ ಎಸ್‌.ಡಿ. ದ್ಯಾಮಪ್ಪಗೋಳ, ಎಸ್‌.ಐ.ನದಾಫ, ಎಸ್‌.ಎಸ್‌.ಕೊಣ್ಣೂರ, ಬಿ.ಜಿ.ಪಾಟೀಲ, ನಾಗೇಶ ಬಂಗೆನ್ನವರ, ಶಂಕರ ಮರಗನ್ನ ವರ, ಎಸ್‌.ಎಸ್‌.ಮುಗುಳಖೋಡ, ಆರ್‌.ಎ.ಶೇಡಬಾಳ, ಎನ್‌.ಎ.ಕತ್ತಿ, ಜೆ.ಎಸ್‌.ಪುಣೇದ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next