Advertisement
ನಗರದ ಗಾಂಧಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಪುನೀತ್‌ರಾಜಕುಮಾರ ವೃತ್ತದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯಾಗಿ ಮಾರ್ಪಟ್ಟಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಕೃಷಿಯಿಂದ ಹೊರ ಹಾಕುವ ನೀತಿಯನ್ನು ಜಾರಿಗೆ ತಂದು ಈ ಕೃಷಿ ಮಾರುಕಟ್ಟೆಯನ್ನು ರೈತರಿಂದ ಕಸಿದು ಕಂಪನಿಗಳಿಗೆ ನೀಡಲು ಮತ್ತು ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡು ಹಣವಂತರು, ಕಾರ್ಪೋರೇಟ್ ಕಂಪನಿಗಳಿಗೆ ನೀಡಲು ಕಂದಾಯ ಕಾಯ್ದೆ 1961 ಮತ್ತು 1964 ಕಾನೂನಿಗೆ ತಿದ್ದುಪಡಿ ತಂದು ದೇಶದಲ್ಲಿ ಎಲ್ಲಿ ಇಲ್ಲದ ಕಾನೂನು ರಾಜ್ಯದಲ್ಲಿ ಜಾರಿಗೆ ತಂದು ರೈತರನ್ನು ನಾಶಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ದೂರಿದರು.
Related Articles
Advertisement
ಕೆರೆ ಒತ್ತುವರಿ ಮಾಡಿದವರನ್ನು ತೆರವುಗೊಳಿಸಿ ಹದ್ದುಬಸ್ತು ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ 3 ಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಆದ ಕಾರಣ ರೈತರ ಪಂಪ್‌ಸೆಟ್‌ಗಳಿಗೆ 12 ತಾಸು 3 ಫೇಸ್ ಪೂರೈಕೆ ಮಾಡಬೇಕು. ಕಂದಾಯ ಸಚಿವ ಆರ್. ಅಶೋಕ್ ಅವರು ನಮ್ಮ ಹತ್ತಿರ ಸರ್ಕಾರದ ಜಮೀನು 22 ಲಕ್ಷ ಎಕರೆ ಇದೆ ಎಂದು ಹೇಳಿದ್ದಾರೆ. ಈಗಿರುವ 22 ಲಕ್ಷ ಜಮೀನನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಆಗಮಿಸಿ ರೈತರ ಸಮಸ್ಯೆ ಆಲಿಸಿ, ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ರೈತ ಮುಖಂಡರಿಗೆ ಭರವಸೆ ನೀಡಿದರು. ಸಂಘದ ರಾಜ್ಯ ಪ್ರ. ಕಾರ್ಯದರ್ಶಿ ಜೆ. ಕಾರ್ತಿಕ್, ಮುಖಂಡರಾದ ಸಣ್ಣಕ್ಕಿ ರುದ್ರಪ್ಪ, ಟಿ. ನಾಗರಾಜ, ತಾಯಪ್ಪ, ಮಲ್ಲಿಕಾರ್ಜುನ, ರೇವಣಸಿದ್ದಪ್ಪ, ಮಹಾಂತೇಶ, ಜೆ. ನಾಗರಾಜ, ಹೇಮರೆಡ್ಡಿ, ಗಾಳೆಪ್ಪ, ಕೆ.ಎಂ. ಕೊಟ್ರೇಶ, ಕೆ. ಹನುಮಂತಪ್ಪ, ಅಕ್ಬರ್, ಅಯ್ಯಣ್ಣ,ನವೀನ್, ನವಾಜ್, ಎಲ್.ಎಸ್. ರುದ್ರಪ್ಪ, ಜಗನ್, ಜೆ. ಬಸವರಾಜ, ಬಿ. ಬಸವರಾಜ ಇದ್ದರು.