ಹೊಸೂರು(ತಮಿಳುನಾಡು): ಹೊಸೂರು ಬಳಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ವಿರೋ ಧಿಸಿ ಜಿಲ್ಲಾಡಳಿತ ಗ್ಯಾಸ್‌ಪೈಪ್ ಅಳವಡಿಕೆ ಕಾಮಗಾರಿ ನಿಲ್ಲಿಸಬೇಕು, ಇಲ್ಲವಾದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ರೈತರು ಪ್ರತಿಭಟನೆ ನಡೆಸಿದರು.
ಕೇರಳ ರಾಜ್ಯದಿಂದ ತಮಿಳುನಾಡು ಮೂಲಕ ಕರ್ನಾಟಕ ರಾಜ್ಯಕ್ಕೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಾಗಿಸ ಲಾಗುತ್ತಿದೆ. ಇದಕ್ಕಾಗಿ ತಮಿಳುನಾಡಿನ ವಿವಿಧೆಡೆ ಗ್ಯಾಸ್‌ಪೈಪ್ ಅಳವಡಿಸುವ ಕಾರ್ಯದಲ್ಲಿ ಗೈಲ್ ಕಂಪನಿ ನಿರತವಾಗಿದೆ. ಹೊಸೂರು ಸಮೀಪದ ಗ್ರಾಮಾಂತರ ವ್ಯವಸಾಯ ಭೂಮಿಗಳಲ್ಲಿ ಈ ಗ್ಯಾಸ್ ಪೈಪ್‌ಗ್ಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ರೈತರು ಆರೋಪಿಸಿದರು.
ಈ ಪರಿಸ್ಥಿತಿಯಲ್ಲಿ ಹೊಸೂರು ನಾಗುಂಡ ಹಳ್ಳಿ ಪಂಚಾಯಿತಿ ಎರಡೇ ನುಲ್ಲೂರು ವೆಂಕಟೇಶ್ವರ ಲೇಔಟ್ ಪ್ರದೇಶದ ಮಧ್ಯದಲ್ಲಿ ಅನಿಲ ಪೈಪ್‌ಲೈನ್‌ಗಳನ್ನು ಹಾಕುತ್ತಿದೆ ಮತ್ತು ಕಂಪನಿಯು ಹಲವೆಡೆ ಪೈಪ್ ಲೈನ್‌ಗಳನ್ನು ಹಾಕುತ್ತಿದೆ. ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದಾರೆ. ಜನವಸತಿ ಪ್ರದೇಶಗಳ ಮಧ್ಯೆ ಗ್ಯಾಸ್ ಪೈಪ್ ಹಾಕುವ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಮನೆ ಗಳ ಬಳಿ ಗ್ಯಾಸ್‌ಪೈಪ್ ಹಾಕಿದರೆ ಸಾರ್ವ ಜನಿಕರು ಭಯದಲ್ಲಿ ಬದುಕಬೇಕಾಗುತ್ತದೆ. ಈ ಭಾಗದ ನಿವಾಸಿಗಳು ತಮ್ಮ ನಿವಾಸದ ಮಧ್ಯದಲ್ಲಿ ಗ್ಯಾಸ್ ಪೈಪ್‌ಲೈನ್‌ಗಳನ್ನು ಅಳವಡಿಸಬಾರದು ಎಂದು ಹೊಸೂರು ತಹಶೀಲ್ದಾರ್, ಸಬ್ ಕಲೆಕ್ಟರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಮಧ್ಯಪ್ರವೇಶಿಸಿ ಈ ಕಾಮಗಾರಿಗಳನ್ನು ನಿಲ್ಲಿಸ ಬೇಕು, ಜನವಸತಿ ಪ್ರದೇಶದ ಬಳಿ ಇರುವ ಖಾಲಿ ಜಮೀನು ಹಾಗೂ ರಸ್ತೆಗಳ ಮೂಲಕ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ವಸತಿ ಪ್ರದೇಶಗಳಲ್ಲಿ ಗ್ಯಾಸ್ ಪೈಪ್ ಅಳವಡಿಸಲು ಜಿಲ್ಲಾ ಡಳಿತ ಅವಕಾಶ ನೀಡಬಾರದು. ಈ ಬಗ್ಗೆ ಮಧ್ಯಪ್ರವೇಶಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು 200ಕ್ಕೂ ಹೆಚ್ಚು ಕುಟುಂಬಗಳ ನಾಗರಿಕರು ಎಚ್ಚರಿಸಿದ್ದಾರೆ.