Advertisement

ಕಟ್ಟಡಪರವಾನಿಗೆ ಶುಲ್ಕ ಹೆಚ್ಚಳಕ್ಕೆ ವಿರೋಧ:ಮುಂದಿನ ಬಾರಿ ಕಡಿತದ ಭರವಸೆ

01:41 PM Jul 01, 2018 | Team Udayavani |

ಮೂಡಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಉದ್ಯಮಗಳ ಪರವಾನಗಿ ಶುಲ್ಕವನ್ನು ವಿಪರೀತ ಹೆಚ್ಚಿಸಿರುವುದು ಏಕಪಕ್ಷೀಯವಾಗಿದೆ; ಇದನ್ನು ಇಳಿಸ ಬೇಕು ಎಂದು ಪುರಸಭಾ ಮಾಸಿಕ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸಿದರು. ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್‌. ಸುವರ್ಣ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆದು ಕೊನೆಗೆ ಮುಖ್ಯಾಧಿಕಾರಿ ಶೀನ ನಾಯ್ಕ, ಇದನ್ನು ಮುಂದಿನ ಸಾಲಿನ ಶುಲ್ಕದಲ್ಲಿ ಕಡಿತಗೊಳಿಸುವ ಭರವಸೆ ನೀಡಿದರು.

Advertisement

ಅಪಾಯಕಾರಿ ಟವರ್‌
ಸ್ವರಾಜ್ಯ ಮೈದಾನದಲ್ಲಿರುವ ಬಿಎಸ್‌ ಎನ್‌ಎಲ್‌ ಟವರ್‌ ನಾದುರಸ್ತಿಯಲ್ಲಿರುವ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯಬೇಕು ಎಂಬ ವಿಚಾರದಲ್ಲಿ ಚರ್ಚೆ ನಡೆಯಿತು. ಕೇವಲ ಪತ್ರ ಬರೆದು ಪ್ರಯೋಜನವಿಲ್ಲ; ಅವರಿಂದ ಸರ್ಟಿಫಿಕೇಟ್‌ ಪಡೆದುಕೊಳ್ಳ ಬೇಕು. ಮುಂದೇನಾದರೂ ಹೆಚ್ಚುಕಡಿಮೆಯಾದರೆ ಪುರಸಭೆ ಹೊಣೆಯಾಗ ಬೇಕಾದೀತು ಎಂದು ಬಿಜೆಪಿಯ ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ, ಬಾಹು ಬಲಿ ಪ್ರಸಾದ್‌, ಪ್ರಸಾದ್‌ ಕುಮಾರ್‌, ದಿನೇಶ್‌, ಜೆಡಿಎಸ್‌ನ ಹನೀಫ್‌ ಅಲಂಗಾರು, ಕಾಂಗ್ರೆಸ್‌ನ ಪಿ.ಕೆ. ಥಾಮಸ್‌ ಎಚ್ಚರಿಸಿದರು.

ಎಸ್‌ಸಿಎಸ್‌ಟಿ ನಿಧಿ ಕಾಂಗ್ರೆಸ್‌ಗೆ ಸಿಂಹಪಾಲು!
ಎಸ್‌ಸಿಎಸ್‌ಟಿ ನಿಧಿಯಿಂದ ಬಂದಿರುವ 1 ಕೋ.ರೂ. ನಲ್ಲಿ ಕಾಂಗ್ರೆಸ್‌ ಸದಸ್ಯರ ವಾರ್ಡ್‌ಗಳೇ ಸಿಂಹಪಾಲನ್ನು ಪಡೆದಿವೆ. ಇದಕ್ಕೆ ನಮ್ಮ ಆಕ್ಷೇಪವಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡುವುದಾಗಿ ಎಂದು ಬಿಜೆಪಿಯ ಸದಸ್ಯರು, ಜೆಡಿಎಸ್‌ನ ಹನೀಫ್‌ ಅಲಂಗಾರು ಹೇಳಿದರು.

ವಿದ್ಯುತ್‌ ಸಮಸ್ಯೆ
ಹತ್ತು ವರ್ಷಗಳ ಹಿಂದೆ ಪುರಸಭಾ ವ್ಯಾಪ್ತಿಯಲ್ಲಿ ಒಂದು ಸಾವಿರ ಬೀದಿ ದೀಪಗಳಿದ್ದರೆ ಈಗ ಅದು ಮೂರು ಸಾವಿರಕ್ಕಿಂತಲೂ ಹೆಚ್ಚಾಗಿದೆ. ದುರಸ್ತಿ ವಹಿಸಿಕೊಂಡವರಿಗೆ ಹಳೆಯ ಮೊತ್ತವನ್ನೇ ಒದಗಿಸಿದರೆ ಅವರು ಹೇಗೆ ಕೆಲಸ ಮಾಡಿಯಾರು? ಎಂಬುದು ಪ್ರಶ್ನೆ.

ಒಂದು ಕಡೆಯಿಂದ ತೆಗೆದು ಇನ್ನೊಂದು ಕಡೆ ಸಿಕ್ಕಿಸುತ್ತಾರೆ. ಸೂಕ್ತ ಮೊತ್ತವನ್ನು ನಿಗದಿಪಡಿಸಿ ಕೆಲಸ ಮಾಡಿಸಿ, ಇಲ್ಲವೇ ಬೇರೆ ದಾರಿ ಕಂಡುಕೊಳ್ಳಿ ಎಂದು ಬಿಜೆಪಿಯ ಪ್ರಸಾದ್‌, ಜೆಡಿಎಸ್‌ನ ಹನೀಫ್‌, ಕಾಂಗ್ರೆಸ್‌ನ ಸುರೇಶ್‌ ಕೋಟ್ಯಾನ್‌, ರೂಪಾ ಶೆಟ್ಟಿ, ಕೊರಗಪ್ಪ, ಸುಪ್ರಿಯಾ ಆಗ್ರಹಿಸಿದರು. ಮಾರ್ಪಾಡಿ, ಪ್ರಾಂತ್ಯ ಮತ್ತು ಕರಿಂಜೆ, ಕಲ್ಲಬೆಟ್ಟು, ಮಾರೂರು ಹೀಗೆ ಎರಡು ವಿಭಾಗ ಮಾಡಿದರೆ ಕೆಲಸವೂ ಸುಲಭವಾಗುವುದು ಎಂದು ಅವರು ಸೂಚಿಸಿದರು. ಇದಕ್ಕೆ ಮುಖ್ಯಾಧಿಕಾರಿ ಸಮ್ಮತಿಸಿದರು.

Advertisement

ಚರಂಡಿ ದುರಸ್ತಿ ಕಾರ್ಯವನ್ನು ಇನ್ನಷ್ಟು ಮಂದಿಗೆ ಹಂಚಿ ಕೊಟ್ಟರೆ ತ್ವರಿತಗತಿಯಲ್ಲಿ ಕೆಲಸವಾದೀತು ಎಂದು ಕಾಂಗ್ರೆಸ್‌ನ ಸುಪ್ರಿಯಾ ಡಿ. ಶೆಟ್ಟಿ ಸೂಚಿಸಿದರು.ಡೆಂಗ್ಯೂ ಜ್ವರದ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ರಾಘವೇಂದ್ರ ಮಾಹಿತಿ ನೀಡಿದರು. ಉಪಾಧ್ಯಕ್ಷ ವಿನೋದ್‌ ಸೆರಾವೋ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್‌ ಬಶೀರ್‌, ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ, ಮೆನೇಜರ್‌ ಸೂರ್ಯಕಾಂತ್‌ ಇದ್ದರು.

ಕೆಎಸ್‌ ಆರ್‌ಟಿಸಿ ಬಸ್‌ ಡಿಪೋಗೆ ಜಾಗ
ರಿಂಗ್‌ ರೋಡ್‌ ಬಳಿ ಮರ್ಪಾಡಿ ಗ್ರಾಮದ ಸ.ನಂ. 192ರಲ್ಲಿ 7.99 ಎಕ್ರೆಜಾಗವನ್ನು ಭ್ರಷ್ಟಾಚಾರ ವಿರೋಧ ಜಾಗೃತ ಸೇವಾದಳದವರ ಕೋರಿಕೆಯಂತೆ ಕೆಎಸ್‌ಆರ್‌ ಟಿಸಿ ಬಸ್‌ ಡಿಪೋಗೆ ಕಾದಿರಿಸಲು ಸಭೆಯಲ್ಲಿ ಒಪ್ಪಿಗೆ ಲಭಿಸಿತು. ಆದರೆ, ಮೊದಲು ಈ ಭಾಗದಲ್ಲಿರುವ ಜಾಗವನ್ನು ಪುರಸಭೆಯ ಹೆಸರಿಗೆ ಮಾಡಿಸಿಕೊಳ್ಳಿ , ಮುಂದಿನ ಕ್ರಮ ಮತ್ತೆ ಜರಗಿಸಿ ಎಂದು ಕಾಂಗ್ರೆಸ್‌ನ ಪಿ.ಕೆ. ಥಾಮಸ್‌ ಸೂಚಿಸಿದರು.

ಮಾರೂರಿನಲ್ಲಿ ಪುರಸಭಾ ಜಾಗ ಅತಿಕ್ರಮಣ
ಮಾರೂರಿನಲ್ಲಿ ಪುರಸಭೆಯ ಹೆಸರಿಗಾದ ಜಾಗ ಅತಿಕ್ರಮಣವಾಗಿದೆ. ಗಡಿ ಗುರುತು ಅಗೆದುಹಾಕಿದ್ದಾರೆ. ಅಲ್ಲಿ ಪೊಲೀಸ್‌ ರಕ್ಷಣೆಯೊಂದಿಗೆ ಅಳತೆ ಮಾಡಿ, ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ಕೊಡಿಸಿ ಎಂದು ಬಿಜೆಪಿಯ ದಿನೇಶ್‌ ಕುಮಾರ್‌ ಆಗ್ರಹಿಸಿದರು. ಈಗ ಅಲ್ಲಿ ಮನೆ ಕಟ್ಟಿಕೊಂಡವರಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗದಷ್ಟು ಅಗಲ ಕಿರಿದಾದ ರಸ್ತೆಯ ಸಮಸ್ಯೆಯೂ ಇದೆ, ಅದರ ಬಗ್ಗೆಯೂ ಕ್ರಮ ಜರಗಿಸಿ ಎಂದು ಅವರು ಹೇಳಿದರು.

ಬಸ್‌ ಡಿಪೋಗೆ ಜಾಗ
ರಿಂಗ್‌ ರೋಡ್‌ ಬಳಿ ಮರ್ಪಾಡಿ ಗ್ರಾಮದ ಸ.ನಂ. 192ರಲ್ಲಿ 7.99 ಎಕ್ರೆಜಾಗವನ್ನು ಭ್ರಷ್ಟಾಚಾರ ವಿರೋಧ ಜಾಗೃತ ಸೇವಾದಳದವರ ಕೋರಿಕೆಯಂತೆ ಕೆಎಸ್‌ಆರ್‌ ಟಿಸಿ ಬಸ್‌ ಡಿಪೋಗೆ ಕಾದಿರಿಸಲು ಸಭೆಯಲ್ಲಿ ಒಪ್ಪಿಗೆ ಲಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next