Advertisement

ಷರತ್ತಿನ ವರ್ಗಾವಣೆಗೆ ವಿರೋಧ

11:21 AM Jul 14, 2017 | |

ಬೆಂಗಳೂರು: ಅಂತರ ಸಾರಿಗೆ ನಿಗಮಗಳ ವರ್ಗಾವಣೆ ಬಯಸುವವರಿಗೆ ಸೇವಾ ಹಿರಿತನ ಅಥವಾ ಮುಂಬಡ್ತಿ ಇಲ್ಲ ಎಂಬ ಷರತ್ತು ನೌಕರರಿಗೆ ಪ್ರತಿಕೂಲವಾಗಿದ್ದು, ಕೂಡಲೇ ಈ ಷರತ್ತು ಕೈಬಿಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಆಗ್ರಹಿಸಿದೆ. 

Advertisement

ಅಂತರ ಸಾರಿಗೆ ನಿಗಮಗಳ ವರ್ಗಾವಣೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ಈ ವರ್ಗಾವಣೆ ಬಯಸಿದವರಿಗೆ ವಿಧಿಸಿರುವ ಷರತ್ತುಗಳು ಏಕಪಕ್ಷೀಯ. ಅದರ ಪ್ರಕಾರ ಸಾರಿಗೆ ನೌಕರರಿಗೆ ಮುಂಬಡ್ತಿಯನ್ನೇ ತಡೆಹಿಡಿಯಲಾಗುತ್ತದೆ. ಇಂತಹ ಷರತ್ತುಗಳನ್ನು ತಕ್ಷಣ ಕೈಬಿಡಬೇಕು ಎಂದು ಮಹಾಮಂಡಳಿ ಕಾರ್ಯಾಧ್ಯಕ್ಷ ಎ.ಎಸ್‌. ರಾಮಣ್ಣ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.  

ಇದಲ್ಲದೆ, ಕಳೆದ ವರ್ಷ ಜುಲೈನಲ್ಲಿ ನಡೆದ ಬಸ್‌ ಮುಷ್ಕರದ ವೇಳೆ ಕಾರ್ಮಿಕರ 41 ಬೇಡಿಕೆಗಳನ್ನು ನಿಗಮದ ಆಡಳಿತ ಮಂಡಳಿಯು ತಿಂಗಳಲ್ಲಿ ಈಡೇರಿಸುವ ಭರವಸೆ ನೀಡಿತ್ತು. ಆದರೆ, ಇದುವರೆಗೆ ಹಲವು ಬೇಡಿಕೆಗಳು ಈಡೇರಿಲ್ಲ. ಅಲ್ಲದೆ, ಕಳೆದೊಂದು ವರ್ಷದಿಂದ ಮಹಾಮಂಡಳಿಯೊಂದಿಗೆ ಯಾವುದೇ ಸಭೆ ಕರೆದು ಚರ್ಚಿಸಿಲ್ಲ. ಇದೇ ಧೋರಣೆ ಮುಂದುವರಿದರೆ, ಹೋರಾಟ ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next