Advertisement

Bengaluru ವಿಪಕ್ಷಗಳ ಸಭೆ; ಸೋನಿಯಾ ಸೇರಿ 24 ಪಕ್ಷಗಳ ನಾಯಕರಿಗೆ ಆಹ್ವಾನ

04:48 PM Jul 12, 2023 | Team Udayavani |

ಬೆಂಗಳೂರು: ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಕರೆದಿರುವ ಎರಡನೇ ಏಕತಾ ಸಭೆಗೆ 24 ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತಷ್ಟು ತಂತ್ರಗಳನ್ನು ರೂಪಿಸಲು ರಣತಂತ್ರಗಳನ್ನು ಹಣೆಯಲಿದೆ.

Advertisement

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಪಕ್ಷಗಳ ನಾಯಕರು ಉಪಸ್ಥಿತರಿರುವ ಔತಣಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್‌ಎಸ್‌ಪಿ, ಫಾರ್ವರ್ಡ್ ಬ್ಲಾಕ್, ಐಯುಎಂಎಲ್, ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮಣಿ) ಎರಡನೇ ವಿಪಕ್ಷ ಸಭೆಯಲ್ಲಿ ಸೇರಲಿವೆ.ಆಮ್ ಆದ್ಮಿ ಪಕ್ಷಕ್ಕೂ ಆಹ್ವಾನ ನೀಡಲಾಗಿದೆ.

ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ಮೊದಲ ವಿರೋಧ ಪಕ್ಷಗಳ ಸಭೆ ನಡೆದಿತ್ತು.ಸಭೆಗೆ ಹದಿನಾರು ಪಕ್ಷಗಳನ್ನು ಆಹ್ವಾನಿಸಲಾಗಿತ್ತು. ಆರ್‌ಎಲ್‌ಡಿಯ ಜಯಂತ್ ಸಿನ್ಹಾ ಕುಟುಂಬದ ಕಾರ್ಯಕ್ರಮವೊಂದರ ಕಾರಣ ಹಾಜರಾಗಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next