Advertisement

ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ

06:30 AM Apr 06, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹ ಕಸರತ್ತು ಎರಡನೇ ದಿನವಾದ ಗುರುವಾರವೂ ಮುಂದುವರಿಯಿತು.

Advertisement

ಯಲಹಂಕ ಬಳಿ ರೆಸಾರ್ಟ್‌ನಲ್ಲಿ ಬೆಂಗಳೂರು ನಗರದ ಹದಿನಾಲ್ಕು ಕ್ಷೇತ್ರ, ನಗರ ಜಿಲ್ಲೆ, ಬೆಳಗಾವಿ,ಚಿಕ್ಕೋಡಿ, ಹಾವೇರಿ, ಧಾರವಾಡ, ವಿಜಯಪುರ,ಬಾಗಲಕೋಟೆ ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳ ಆಕಾಂಕ್ಷಿಗಳು, ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ ಒಂದೊಂದು ಕ್ಷೇತ್ರಕ್ಕೆ ಎರಡರಿಂದ ಮೂರು ಆಕಾಂಕ್ಷಿಗಳ ಪಟ್ಟಿ ಸಿದಟಛಿಪಡಿಸಲಾಯಿತು.

ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಹಾವೇರಿ ಜಿಲ್ಲೆಗಳಿಗೆ ಸಂಬಂಧಿಸಿದ ಸಭೆಯಲ್ಲಿ ಆಕಾಂಕ್ಷಿಗಳ ಪರ-ವಿರೋಧ, ಸ್ಥಳೀಯ ನಾಯಕರ ವಾಗ್ವಾದದಿಂದ ಯಡಿಯೂರಪ್ಪ ಹಾಗೂ ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್‌ ಗರಂ ಆದ ಪ್ರಸಂಗವೂ ನಡೆಯಿತು ಎನ್ನಲಾಗಿದೆ. ಹಾವೇರಿ ಕ್ಷೇತ್ರಕ್ಕೆ ನೆಹರು ಓಲೇಕಾರ್‌ ಅವರಿಗೆ ಟಿಕೆಟ್‌ ನೀಡಬಾರದು. ಅವರ ಬದಲಿಗೆ ವೆಂಕಟೇಶ್‌ ನಾರಾಯಣ ಅವರಿಗೆ ನೀಡಬೇಕು ಎಂದು ಒಂದು ಗುಂಪು ಒತ್ತಾಯಿಸಿದೆ ಎನ್ನಲಾಗಿದೆ.

ವಿಜಯಪುರದ ಟಿಕೆಟ್‌ ವಿಚಾರದಲ್ಲಿ ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ಸೇರಿ ಅವರ ಬೆಂಬಲಿಗರು ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಟಿಕೆಟ್‌ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ಬೆಂಬಲಿಗರು ತಿರುಗೇಟು ನೀಡಿದಾಗ ಎರಡೂ ಗುಂಪಿನ ಜತೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ, ಸಭೆ ನಡೆಯುತ್ತಿರುವಾಗಲೇ ವಿಜಯಪುರದ ಮೇಯರ್‌ ಸಂಗೀತಾ ಪೌಲ್‌ ಸೇರಿಆರು ಜನ ಪಾಲಿಕೆ ಸದಸ್ಯರನ್ನು ಯತ್ನಾಳ್‌ ಅವರು ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರಿಸಿದರು.

ಖಾನಾಪುರ ಕ್ಷೇತ್ರಕ್ಕೆ ವಿಠಲ ಪಾಟೀಲ್‌ ಮತ್ತು ಜ್ಯೋತಿ ಬಾ ರೇಮಾನಿ ಹೆಸರು ಮಾತ್ರ ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ಮತ್ತೂಂದೆಡೆ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ್‌ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಮಾರುತಿ ಅಷ್ಟಗಿರಿ ಪರ ಬ್ಯಾಟಿಂಗ್‌ ನಡೆಸಿದರು. ಈ ಮಧ್ಯೆ, ಹನೂರಿನಿಂದ ಆಗಮಿಸಿದ್ದ ಕೆಲವು ಮುಖಂಡರು ಸೋಮಣ್ಣಗೆ ಟಿಕೆಟ್‌ ಕೊಡಬೇಕೆಂದು ಆಗ್ರಹಿಸಿದರು.

Advertisement

ಶುಕ್ರವಾರ ಬಿಜೆಪಿ ಸಂಸ್ಥಾಪನೆ ದಿನ ಇರುವುದರಿಂದ ಅಭಿಪ್ರಾಯ ಸಂಗ್ರಹ ಇರುವುದಿಲ್ಲ. ಶನಿವಾರ ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ವ್ಯಾಪ್ತಿಗೆ ಬರುವ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಏ.8 ರಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಲಿದ್ದು, ಮೊದಲ ಹಂತದಲ್ಲಿ 100 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಅದೇ ದಿನ ಅಥವಾ 9ರಂದು ಬಿಡುಗಡೆ ಪಟ್ಟಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ತಲೆ ಕೆಟ್ಟವರು ಹೇಳಿದರೆ ನಾನು ಉತ್ತರ ಕೊಡ್ಲಾ?
ಕಾಗಿನೆಲೆ ಮೂಲ ಮಠದಲ್ಲಿ ಮೂವರು ಸ್ವಾಮೀಜಿಗಳು ಅಮಿತ್‌ ಶಾ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಅಮಿತ್‌ ಶಾ ಗರಂ
ಆಗಿದ್ದಾರೆ ಅಂತ ತಲೆ ಕೆಟ್ಟವರು ಹೇಳಿದರೆ ನಾನು ಉತ್ತರ ಕೊಡ್ಲಾ? 

ನಿರಂಜನಾನಂದಪುರಿ ಶ್ರೀಗಳು ಒಮ್ಮೇಲೇ ಎರಡೆರಡು ಕಡೆ ಇರೋಕೆ ಡಬ್ಬಲ್‌ ಆ್ಯಕ್ಟಿಂಗ್‌ ಮಾಡೋಕೆ ಆಗುತ್ತಾ?. ಅಮಿತ್‌ ಶಾ ಸಮಾವೇಶದ ಜನ ನೋಡಿ ಖುಷಿ ಆಗಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಸೋಲುವುದು ನಿಶ್ಚಿತ. ಸಿದ್ದರಾಮಯ್ಯ ಅವರ ಹಿತೈಷಿಯಾಗಿ ನಾನು ಹೇಳುತ್ತಿದ್ದೇನೆ,ಅವರು ಈ ಚುನಾವಣೆಗೆ ನಿಲ್ಲೋದು ಬೇಡ. ಮಕ್ಕಳು-ಮರಿ ಜತೆಆಟವಾಡಿಕೊಂಡು ಇರಲಿ.
– ಕೆ.ಎಸ್‌. ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

ಏ.9ರೊಳಗೆ ಇನ್ನೂ ಮೂರ್‍ನಾಲ್ಕು ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಬಿಜೆಪಿ ಸೇರಲಿದ್ದಾರೆ. ಚಾಮುಂಡೇಶ್ವರಿ, ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತೇವೆ. ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next