Advertisement

Operation ಕೆಂಪು ಸಮುದ್ರ: ಹತ್ತು ಹೌತಿ ಉಗ್ರರು ಫಿನಿಶ್‌

12:18 AM Jan 02, 2024 | Team Udayavani |

ದುಬಾೖ/ಕೈರೋ: ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ನೌಕೆಯ ಮೇಲೆ ದಾಳಿ ನಡೆಸಿದ ಹೌತಿ ಬಂಡುಕೋರರನ್ನು ಹಿಮ್ಮೆಟ್ಟಿಸಲು ಭಾನುವಾರ ಅಮೆರಿಕ ಪಡೆಗಳು ನಡೆಸಿದ ದಾಳಿಯಲ್ಲಿ ಹತ್ತು ಮಂದಿ ಉಗ್ರರು ಹತರಾಗಿದ್ದು ದೃಢಪಟ್ಟಿದೆ.

Advertisement

ಇರಾನ್‌ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸಿಂಗಾಪುರಕ್ಕೆ ಸೇರಿದ ಮರ್ಸ್ಕ್ ಹ್ಯಾಂಗ್ಜೌ     ನೌಕೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಮೆರಿಕದ ನೌಕಾಪಡೆಯು ಉಗ್ರರು ಇದ್ದ ಮೂರು ಬೋಟ್‌ಗಳ ಮೇಲೆ ರಕ್ಷಣಾತ್ಮಕ ದಾಳಿ ನಡೆಸಿತ್ತು. ಇದರಿಂದಾಗಿ ಹತ್ತು ಮಂದಿ ಉಗ್ರರು ಮೃತಪಟ್ಟಿದ್ದಾರೆ. ದಾಳಿಗೆ ಒಳಗಾದ ಸಿಂಗಾಪುರದ ನೌಕೆಯಿಂದ ಸಹಾಯಕ್ಕಾಗಿ ತುರ್ತು ಕರೆ ಬಂದಿದ್ದನ್ನು ಅಮೆರಿಕದ ಸೆಂಟ್ರಲ್‌ ಕಮಾಂಡ್‌ (ಸೆಂಟ್‌ಕಾಮ್‌) ದೃಢಪಡಿಸಿದೆ.

ಕೂಡಲೇ ರಕ್ಷಣ ಕಾರ್ಯಾಚರಣೆಗೆ ಇಳಿದ ಅಮೆರಿಕದ ನೌಕಾಪಡೆ ಹೌತಿ ಬಂಡುಕೋರರು ಇದ್ದ ನಾಲ್ಕು ಸಣ್ಣ ದೋಣಿಗಳ ಮೇಲೆ ದಾಳಿ ನಡೆಸಿದೆ. ಕೆಲ ಹೊತ್ತು ಬಿರುಸಿನ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಹತ್ತು ಮಂದಿ ಉಗ್ರರು ಜೀವ ಕಳೆದುಕೊಂಡಿದ್ದಾರೆ. ಜತೆಗೆ ಅವರು ಬಂದಿದ್ದ ಮೂರು ಸಣ್ಣ ನೌಕೆಗಳು ಮುಳುಗಿವೆ. ಈ ಅಂಶವನ್ನು ಉಗ್ರ ಸಂಘಟನೆಯೂ ಕೂಡ ಖಚಿತಪಡಿಸಿದೆ.

ಈ ಕಾರ್ಯಾಚರಣೆಯಲ್ಲಿ ಸಿಂಗಾಪುರದ ಕಂಪೆನಿಯ ಹಡಗಿನಲ್ಲಿದ್ದ ನೌಕೆಯ ಸಿಬ್ಬಂದಿಗೆ ಯಾವುದೇ ರೀತಿಯಲ್ಲಿ ಅಪಾಯ ಉಂಟಾಗಿಲ್ಲವೆಂದು ಅಮೆರಿಕದ ನೌಕಾಪಡೆ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next