Advertisement

ಆಪರೇಷನ್‌ ಎಂಪಿ?

12:30 AM Jan 17, 2019 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿರುವ ಕಾಂಗ್ರೆಸ್‌- ಜೆಡಿಎಸ್‌ ಸರಕಾರದ ವಿರುದ್ಧದ ಬಿರುಗಾಳಿ ತಣ್ಣಗಾಗುತ್ತಿರುವಂತೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಸರಕಾರ ಕುಸಿಯುವ ಆತಂಕ ಎದುರಾಗಿದೆ. ಕರ್ನಾಟಕಕ್ಕಿಂತ ಹೆಚ್ಚಾಗಿ ಮಧ್ಯ ಪ್ರದೇಶ ಸರಕಾರವನ್ನು ಉರುಳಿಸುವ ಉತ್ಸುಕತೆ ಬಿಜೆಪಿ ವರಿಷ್ಠರಿಗೆ ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡರಲ್ಲೇ ಆತಂಕ ವಿದೆ ಎಂದು ಹೇಳಲಾಗಿದೆ. 

Advertisement

ಕರ್ನಾಟಕದಲ್ಲಿ ಅಷ್ಟು ಸುಲಭದಲ್ಲಿ ಸರಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಆದರೆ ಮಧ್ಯಪ್ರದೇಶದಲ್ಲಿನ ಕಮಲನಾಥ್‌ ಸರಕಾರ ಉರುಳಿಸುವುದು ಸುಲಭ ಎಂದು ಹೇಳಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಮಧ್ಯ ಪ್ರದೇಶದಲ್ಲಿ 15 ವರ್ಷಗಳ ಸರಕಾರವನ್ನು ಅತ್ಯಂತ ಕಡಿಮೆ ಅಂತರದಲ್ಲಿ ಬಿಜೆಪಿ ಕಳೆದು ಕೊಂಡಿದೆ.

ಈಗ ಬಹುಮತಕ್ಕೆ ಕೇವಲ ಏಳು ಶಾಸಕರ ಅಗತ್ಯವನ್ನು ಬಿಜೆಪಿ ಹೊಂದಿದೆ. ಕೆಲವು ಶಾಸಕರು ಬಿಜೆಪಿ ಕಡೆ ವಾಲಿ ದರೂ ಸರಕಾರ ಪತನ  ವಾಗು ವುದು ಖಚಿತ. ಹೀಗಾಗಿ ಯಾವುದೇ ಕ್ಷಣ ದಲ್ಲೂ ಸ್ವತಂತ್ರ ಹಾಗೂ ಇತರ ಶಾಸಕರನ್ನು ಓಲೈಸುವ ಸಾಧ್ಯತೆ ನಿರಾಕರಿಸುವಂತಿಲ್ಲ ಎನ್ನಲಾಗಿದೆ.

ಸರಕಾರವು ಪ್ರಸ್ತುತ ನಾಲ್ವರು ಸ್ವತಂತ್ರ ಶಾಸಕರು, ಇಬ್ಬರು ಬಿಎಸ್‌ಪಿ ಶಾಸಕರು ಮತ್ತು ಎಸ್‌ಪಿ ಬೆಂಬಲವನ್ನು ಹೊಂದಿದೆ. ಅದಾಗಲೇ ಬಿಎಸ್‌ಪಿ ತನ್ನ ಬೆಂಬಲ ಹಿಂದೆಗೆದುಕೊಳ್ಳುವ ಬೆದರಿಕೆ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next