Advertisement

ಕಾಂಗ್ರೆಸ್‌ ನಾಯಕರಲ್ಲಿ ಆಪರೇಷನ್‌ ಗುಮಾನಿ

07:00 AM May 18, 2018 | Team Udayavani |

ಬೆಂಗಳೂರು: ಆಪರೇಷನ್‌ ಕಮಲದ ಭೀತಿ ಕಾಂಗ್ರೆಸ್‌ ನಾಯಕರಲ್ಲಿ ಮನೆ ಮಾಡಿದ್ದು, ಪಕ್ಷದ ಬಹುತೇಕ ಶಾಸಕರ
ನಡೆಯ ಬಗ್ಗೆ ಅನುಮಾನದಿಂದ ನೋಡುವಂತಾಗಿದೆ.

Advertisement

ವಿಶೇಷವಾಗಿ ಲಿಂಗಾಯತ ಸಮುದಾಯದ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅಮರೇಗೌಡ
ಬಯ್ನಾಪುರ, ರಾಜಶೇಖರ ಪಾಟೀಲ್‌ ಹುಮನಾಬಾದ್‌, ಪ್ರತಾಪ್‌ಗೌಡ ಪಾಟೀಲ್‌, ಮಹೇಶ್‌ ಕುಮಟಳ್ಳಿ ಸೇರಿ ಎಂಟಕ್ಕೂ ಹೆಚ್ಚು ಶಾಸಕರೊಂದಿಗೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಶಾಸಕರನ್ನು ಸೆಳೆಯಲು ಬಸನಗೌಡ ಪಾಟೀಲ್‌ ಯತ್ನಾಳ್‌, ವೀರಣ್ಣ ಚರಂತಿಮs…, ಉಮೇಶ್‌ ಕತ್ತಿ ಅವರಿಗೆ ಹೊಣೆಗಾರಿಕೆ ನೀಡಿ 3 ದಿನಗಳ ಕಾಲಾವಕಾಶ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದೇಶಪಾಂಡೆಗೂ ಗಾಳ?: ಕಾಂಗ್ರೆಸ್‌ ಹಿರಿಯ ನಾಯಕ ಆರ್‌.ವಿ.ದೇಶಪಾಂಡೆಗೂ ಬಿಜೆಪಿ ನಾಯಕರು ಆಹ್ವಾನ
ನೀಡಿದ್ದು, ಡಿಸಿಎಂ ಮಾಡುವ ಆಮಿಷ ಒಡ್ಡಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಇನ್ನೊಂದು ಮೂಲಗಳ ಪ್ರಕಾರ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದ ಸತೀಶ್‌ ಜಾರಕಿಹೊಳಿಯವರನ್ನೂ
ಸಂಪರ್ಕಿಸಿದ್ದಾರೆ. ಅವರೊಂದಿಗೆ ಏಳೆಂಟು ಶಾಸಕರನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆಂಬ ಮಾತುಗಳು
ಕೇಳಿ ಬರುತ್ತಿವೆ. ಈ ರೀತಿ ಹೆಸರು ಕೇಳಿ ಬರುತ್ತಿರುವುದರಿಂದ ಜನತೆ, ಮಾಧ್ಯಮದವರಿಗೆ ವಿವರಣೆ ನೀಡುವುದೇ
ಕಷ್ಟವಾಗುತ್ತಿದೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next