ಬೆಂಗಳೂರು : ಅಪರೇಷನ್ ಗಂಗಾ ಅಡಿಯಲ್ಲಿ ಭಾರತೀಯರನ್ನು ಉಕ್ರೇನ್ ನಿಂದ ಸುರಕ್ಷಿತವಾಗಿ ಕರೆತರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭಾಜನರಾಗಿದ್ದಾರೆ.
ನರೇಂದ್ರ ಮೋದಿಯವರು ನಾಲ್ಕು ಸಚಿವರನ್ನು ಕಳುಹುಸಿ ಸುಮಾರು 18 ಸಾವಿರ ಭಾರತೀಯರನ್ನ, ಕನ್ನಡಿಗರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಾರೆ.ಈ ಕೆಲಸ ಮಾಡಿದ ಮೋದಿಯವರಿಗೆ ಕರ್ನಾಟಕ ಸರ್ಕಾರ ಸಹ ಅಭಿನಂದನೆ ಸಲ್ಲಿಸಲಿದೆ ಎಂದರು.
ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆ
ಕಂದಾಯ ಇಲಾಖೆಯಲ್ಲಿ ಮಹತ್ತರ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದ್ದು, ಆರ್ ಟಿಸಿ, ಎಂಆರ್ ಕಾಪಿ,ಜಾತಿ, ಆದಾಯ ಪ್ರಮಾಣ ಪತ್ರ ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದ್ದೇವೆ. 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಚಾಲನೆ ಕೊಡುತ್ತಿದ್ದೇವೆ. ಜನ ಸ್ನೇಹಿ ರೈತ ಸ್ನೇಹಿಯಾಗಿ ಅವರ ಮನೆ ಬಾಗಿಲಿಗೆ ದಾಖಲೆ ಬರುತ್ತದೆ. 50 ಲಕ್ಷಕ್ಕೂ ಹೆಚ್ಚು ರೈತರಿಗೆ ಇಂದು ವಿತರಣೆ ಮಾಡಲಾಗುತ್ತಿದೆ. ಸಿಎಂ ಬೊಮ್ಮಾಯಿಯವರು ಯೋಜನೆಗೆ ಚಿಕ್ಕಬಳ್ಳಾಪುರ ದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ಎಲ್ಲ ಕ್ಷೇತ್ರಗಳಲ್ಲೂ ಇದು ಅನುಕೂಲವಾಗಲಿದೆ ಕೆಲವು ರೈತರು ತಮ್ಮ ದಾಖಲೆ ನೋಡಿಯೇ ಇರುವುದಿಲ್ಲ. ಉಚಿತವಾಗಿ ಈ ದಾಖಲೆ ಅವರಿಗೆ ಕೊಡುತ್ತೇವೆ. ಅವರ ಮನೆಗೆ ದಾಖಲೆ ಕೊಡುತ್ತೇವೆ. ಇಂದು ಸಿಗದಿದ್ದರೆ ಒಂದು ವಾರದ ಒಳಗೆ ಅಟಲ್ ಜೀ ಜನ ಸ್ನೇಹಿ ಯೋಜನೆಯಲ್ಲಿ ಸಿಗುತ್ತದೆ ಎಂದರು.