Advertisement

ವಿಶ್ವದ ಎತ್ತರದ ರೈಲ್ವೆ ಸೇತುವೆಗೆ ಅಂತಿಮ ಸ್ಪರ್ಶ: ಆ. 13ಕ್ಕೆ ಉದ್ಘಾಟನೆ

06:30 PM Aug 10, 2022 | Team Udayavani |

ನವದೆಹಲಿ: ವಿಶ್ವದ ಅತಿ ಎತ್ತರದ ರೈಲ್ವೆ ಹಳಿಯ ಸೇತುವೆ ಆ.13ಕ್ಕೆ ಕಾಶ್ಮೀರದ ಶ್ರೀನಗರದಲ್ಲಿ ಉದ್ಘಾಟನೆಗೊಳ್ಳಲಿದೆ!

Advertisement

ಇದು ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರವನ್ನು ದೇಶದ ಇತರೆ ಭಾಗಗಳೊಂದಿಗೆ ಬೆಸೆಯಲಿದೆ. ಉತ್ತರ ರೈಲ್ವೆಯು ಉಧಾಮಪುರ-ಶ್ರೀನಗರ-ಬಾರಾಮುಲ್ಲಾವನ್ನು ಬೆಸೆಯುವ ಯೋಜನೆಯ ಭಾಗವಾಗಿ ಇದನ್ನು ನಿರ್ಮಿಸಿದೆ. ಕಾಶ್ಮೀರದ ರಿಯಾಸಿ ಜಿಲ್ಲೆಯ ಚೆನಾಬ್‌ ನದಿಯ ಮೇಲೆ ಈ ಸೇತುವೆ ರೂಪುಗೊಂಡಿದೆ. ಈ ಹಳಿಯ ಎರಡೂ ಬದಿ ಸಲಾಲ್‌ ಎ ಮತ್ತು ದುಗ್ಗಾ ರೈಲ್ವೆ ನಿಲ್ದಾಣಗಳಿವೆ.

ವಿಶೇಷಗಳೇನು?: ಚೆನಾಬ್‌ ನದಿಯ ಮೇಲೆ 359 ಮೀಟರ್‌ ಎತ್ತರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೇ ಟ್ರ್ಯಾಕನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಟ್ರ್ಯಾಕ್‌ ಕೆಳಗೆ ಮೊದಲು ಒಂದು ಕಮಾನನ್ನು ನಿರ್ಮಸಲಾಗಿದೆ. ಅದರ ಮೇಲಿರುವುದೇ ರೈಲ್ವೇ ಹಳಿ. ಇದರ ಒಟ್ಟು ದೂರ 1.315 ಕಿ.ಮೀ. ಒಟ್ಟು ವೆಚ್ಚ 28,000 ಕೋಟಿ ರೂ.! ಇದಕ್ಕೆ ಚೆನಾಬ್‌ ಸೇತುವೆ ಎಂದೇ ಹೆಸರಿಡಲಾಗಿದೆ.

ಇದುವರೆಗೆ ವಿಶ್ವದ ಅತಿ ಎತ್ತರದ ರೈಲ್ವೆ ಹಳಿ ಸೇತುವೆ ನಿರ್ಮಿಸಿದ ಹೆಗ್ಗಳಿಕೆಯನ್ನು ಚೀನಾ ಹೊಂದಿದೆ. ಗಿಝೌ ಪ್ರಾಂತ್ಯದ ಬೆಪಾಂಜಿಯಾಂಗ್‌ ನದಿಯ ಮೇಲೆ 275 ಮೀಟರ್‌ ಎತ್ತರದಲ್ಲಿ ರೈಲ್ವೆ ಹಳಿಯನ್ನು ಕಾರ್ಯನಿರ್ವಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next