Advertisement

ರೈಲು ನಿಲ್ದಾಣದಲ್ಲಿ ಸೈಕಲ್‌ ಪ್ಯೂರ್‌ ಅಗರ್‌ಬತ್ತೀಸ್‌ ಮಳಿಗೆ ಆರಂಭ

09:30 PM Mar 09, 2020 | Lakshmi GovindaRaj |

ಮೈಸೂರು: ವಿಶ್ವದ ಅತಿದೊಡ್ಡ ಅಗರಬತ್ತಿ ಮತ್ತು ಪೂಜಾ ಉತ್ಪನ್ನ ತಯಾರಿಕಾ ಸಂಸ್ಥೆಯಾಗಿರುವ ಸೈಕಲ್‌ ಪ್ಯೂರ್‌ ಅಗರ್‌ಬತ್ತೀಸ್‌ ಇದೀಗ ಮೈಸೂರು ರೈಲು ನಿಲ್ದಾಣದಲ್ಲಿ ಸೈಕಲ್‌ ಇನ್‌ ಹೆಸರಿನಲ್ಲಿ ಸ್ಟೋರ್‌ ತೆರೆದಿದೆ. ಸ್ಟೋರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್‌ ಅಪರ್ಣ ಗಾರ್ಗ್‌ ಮತ್ತು ಸೈಕಲ್‌ ಪ್ಯೂರ್‌ ಅಗರಬತ್ತೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ ರಂಗ ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್‌ ಅಪರ್ಣ ಗಾರ್ಗ್‌, ರೈಲು ನಿಲ್ದಾಣದಲ್ಲಿ ಸ್ಟೋರ್‌ ಆರಂಭಿಸಿರುವ ಸೈಕಲ್‌ ಪ್ಯೂರ್‌ನ ಕ್ರಮ ಶ್ಲಾಘನೀಯ. ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಸಂಸ್ಥೆಯು ಉತ್ಪನ್ನಗಳನ್ನು ಪೂರೈಸುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೈಕಲ್‌ ಪ್ಯೂರ್‌ ಅಗರ್‌ಬತ್ತೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ರಂಗ ಮಾತನಾಡಿ, ನಾವು ಅತ್ಯುತ್ತಮ್ಮ ಗುಣಮಟ್ಟದ ಪೂಜಾ ಉತ್ಪನ್ನಗಳನ್ನು ನೀಡುವುದು ಮತ್ತು ನಮ್ಮ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ ಈ ಸ್ಟೋರ್‌ ತೆರೆದಿದ್ದೇವೆ. ಮಹಿಳಾ ದಿನಾಚರಣೆ ಸಂಭ್ರಮದಲ್ಲಿ ಸ್ತ್ರೀ ಸಬಲೀಕರಣಕ್ಕೂ ಇದು ದಾರಿ ಮಾಡಕೊಡಲಿದೆ.

ರೈಲ್ವೆ ಸಾರಿಗೆ ದೇಶದ ದೊಡ್ಡ ಸಾರಿಗೆ ವ್ಯವಸ್ಥೆ. ಇಂತಹ ಸ್ಥಳದಲ್ಲಿ ಸ್ಟೋರ್‌ ತೆರೆಯಲು ಸಂತಸವಾಗುತ್ತಿದೆ. ಸ್ಟೋರ್‌ ಮೂಲಕ ನಾವು ನಮ್ಮ ಗ್ರಾಹಕರ ಇನ್ನೂ ಉತ್ತಮ ಮತ್ತು ಸರಳವಾದ ರೀತಿಯಲ್ಲಿ ಎಲ್ಲಾ ಬಗೆಯ ಪೂಜಾ ಅಗತ್ಯತೆಗಳನ್ನು ಪೂರೈಸಲಿದ್ದೇವೆ ಎಂದು ಹೇಳಿದರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂತಹ ಸ್ಟೋರ್‌ ಆರಂಭವಾಗಿರುವುದು ಇದೇ ಮೊದಲು. ನಗರದ ನಾಗರಿಕರು ಮತ್ತು ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಪೂಜೆಗೆ ಬಳಸುವ ಎಲ್ಲಾ ಸಾಮಗ್ರಿಗಳನ್ನು ಈ ಸ್ಟೋರ್‌ ಪೂರೈಸಲಿದೆ.

ದೈನಂದಿನ ಪೂಜೆ ಮತ್ತು ಹಬ್ಬಗಳಿಗೆ ಅಗತ್ಯವಾದ ಗುಣಮಟ್ಟದ ಪೂಜಾ ಉತ್ಪನ್ನಗಳನ್ನು ಮತ್ತು ಇತರೆ ಪರಿಕರಗಳನ್ನು ಸ್ಟೋರ್‌ ಒದಗಿಸಲಿದೆ. ನಗರದ ಹೃದಯ ಭಾಗದಲ್ಲಿ ಆರಂಭವಾಗಿರುವ ಈ ಸ್ಟೋರ್‌ ಮನೆಯ ಪ್ರಾರ್ಥನಾ ಸೇವೆಗೆ ಬೇಕಾದ ಸಾಮಗ್ರಿಗಳನ್ನು ಗ್ರಾಹಕರಿಗೆ ಪೂರೈಸಲಿದೆ. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಪ್ರಾರ್ಥನೆಯಲ್ಲಿ ಭಾಗಿಯಾಗಲಿದೆ.

Advertisement

ಏನೇನು ಸಿಗಲಿದೆ: ಸೈಕಲ್‌ ಇನ್‌ ಸ್ಟೋರ್‌ನಲ್ಲಿ ಅಗರಬತ್ತಿಗಳು, ಪೂಜಾ ಉತ್ಪನ್ನಗಳು, ಐಆರ್‌ಐಎಸ್‌ನಿಂದ ಮನೆಯ ಸುಗಂಧಗಳು ಸೇರಿದಂತೆ ಮತ್ತಿತರ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತದೆ. ವಿವಾಹ ವಾರ್ಷಿಕೋತ್ಸವ ಮತ್ತು ಹುಟ್ಟುಹಬ್ಬಗಳಿಗೆಂದೇ ವಿಶಿಷ್ಟವಾದ ಪೂಜ ಪ್ಯಾಕ್‌ಗಳನ್ನು ಗ್ರಾಹಕರಿಗೆ ಒದಗಿಸಲಿದೆ.

ಬೆಂಗಳೂರು ಮತ್ತು ತಮಿಳುನಾಡಿನ ನಂತರ ಸಂಸ್ಥೆಯು ಮೈಸೂರಿನ ರೈಲು ನಿಲ್ದಾಣದಲ್ಲಿ ತನ್ನ ಎರಡನೇ ಸ್ಟೋರ್‌ ಆರಂಭಿಸಿದೆ. ಪ್ರಸ್ತುತ ಸೈಕಲ್‌.ಇನ್‌ ಮೈಸೂರಿನ ವಾಣಿವಿಲಾಸ ಡಬಲ್‌ ರೋಡ್‌, ಬೆಂಗಳೂರಿನ ರಾಜಾಜಿನಗರ, ಜಯನಗರ ಮತ್ತು ಬಸವೇಶ್ವರ ನಗರದಲ್ಲಿ ಸ್ಟೋರ್‌ಗಳನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next