Advertisement

ಏರ್‌ಪೋರ್ಟ್‌ ದಸರಾ ಉತ್ಸವಕ್ಕೆ ತೆರೆ

12:56 PM Oct 22, 2018 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ದಸರಾ ಉತ್ಸವಕ್ಕೆ ಈಚೆಗೆ ಅದ್ದೂರಿ ತೆರೆಬಿದ್ದಿತು. ದಸರಾ ಅಂಗವಾಗಿ ನಡೆದ ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೊಂಬೆ ಪ್ರದರ್ಶನ, ಕ್ರಿಸ್ಟೆಲ್‌ ರಂಗೋಲಿ ವಿನ್ಯಾಸಗಳು, ನೃತ್ಯ-ಗಾಯನ ದೇಶ-ವಿದೇಶದ ಪ್ರಯಾಣಿಕರ ಗಮನ ಸೆಳೆದವು. ಈ ಮೂಲಕ ನಾಡಿನ ಸಂಸ್ಕೃತಿಯನ್ನು ಉಣಬಡಿಸಲಾಯಿತು. 

Advertisement

ನಾಲ್ಕೂ ದಿನಗಳು ಶಾಸ್ತ್ರೀಯ ಸಂಗೀತ, ಮೋಹಿನಿ ಅಟ್ಟಂ, ಭರತನಾಟ್ಯ, ಯಕ್ಷಗಾನ, ಕುಚುಪುಡಿ ಮತ್ತು ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ಖ್ಯಾತ ಕಲಾವಿದರು ನಡೆಸಿಕೊಟ್ಟರು. ಕೊನೆಯ ದಿನ ವಿದುಷಿ ರಾಜಶ್ರೀ ಹೊಳ್ಳ ಮತ್ತು ತಂಡದ ಕುಚುಪುಡಿ ನೃತ್ಯ ಮನಸೂರೆಗೊಂಡಿತು. ನಂತರ ವಿದುಷಿ ರಜನಿ ಕೀರ್ತಿ ಅವರಿಂದ ಶಾಸ್ತ್ರೀಯ ಸಂಗೀತ ಪ್ರದರ್ಶನಗೊಂಡಿತು. ಲಯ ಲಾವಣ್ಯ ಅವರ ಹೃದಯಸ್ಪರ್ಶಿ ಜುಗಲ್‌ಬಂದಿ ಪ್ರದರ್ಶನ ಪ್ರೇಕ್ಷಕರ ಮನ ಗೆದ್ದಿತು. 

ದಸರಾ ಪ್ರಯುಕ್ತ ವಿಶೇಷ ಖಾದ್ಯ ಕೂಡ ವ್ಯವಸ್ಥೆ ಮಾಡಲಾಗಿತ್ತು. ಇದು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಲಭ್ಯವಿತ್ತು. ಈ ಸೀಜನ್‌ನ ವಿಶೇಷತೆಗಳನ್ನು ಸವಿಯಲು ಜನ ಮುಗಿಬಿದ್ದಿದ್ದರು. ಪ್ರಯಾಣಿಕರಿಗೆ ದಸರಾ ತಿರುಳಿನ ವರ್ಚುವಲ್‌ ರಿಯಾಲಿಟಿ ಗೇಮ್‌ ಅನುಭವಿಸಲು ಅವಕಾಶ ನೀಡಲಾಗಿದ್ದು,

ರಾವಣ ಈ ಗೇಮ್‌ನ ಪ್ರಮುಖ ವ್ಯಕ್ತಿಯಾಗಿದ್ದ. ಈ ಆಟವನ್ನಾಡಿ ಗೆದ್ದವರಿಗೆ ಗಿಫ್ಟ್ ಓಚರ್‌ಗಳನ್ನು ನೀಡಲಾಗಿದ್ದು, ಇವುಗಳನ್ನು ವಿಮಾನ ನಿಲ್ದಾಣದ ಆಯ್ದ ಮಳಿಗೆಗಳಲ್ಲಿ ಬಳಸಿಕೊಳ್ಳಬಹುದಾಗಿತ್ತು. ಈ ಉತ್ಸವವನ್ನು ಬೆಂಗಳೂರು ವಿಮಾನ ನಿಲ್ದಾಣದ ನಿಯಮಿತ (ಬಿಐಎಎಲ್‌) ವತಿಯಿಂದ ಹಮ್ಮಿಕೊಳ್ಳಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next