Advertisement
ಕಳೆದ ಮಾರ್ಚ್ -ಎಪ್ರಿಲ್ ತಿಂಗಳಲ್ಲಿ ಚರಂಡಿ ಕಾಮಗಾರಿ ಆರಂಭಗೊಂಡಿತ್ತು. ಎಪ್ರಿಲ್ ತಿಂಗಳಲ್ಲಿ ಈ ಕಾಮಗಾರಿಯನ್ನುಪೂರ್ಣಗೊಳಿಸದೇ ಅರ್ಧದಲ್ಲಿ ನಿಲ್ಲಿಸಲಾಗಿತ್ತು. ಬಸ್ಸು ನಿಲ್ದಾಣದ ಸಮೀಪದಲ್ಲಿ ಚರಂಡಿಯನ್ನು ಮುಚ್ಚದೇ ಇದ್ದ ಕಾರಣ ಸಾರ್ವಜನಿಕರಿಗೆ ಅಪಾಯ ಕಾಡಿತ್ತು. ಈ ಬಗ್ಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಬಳಿಕ, ಕಾಂಕ್ರೀಟಿಕರಣ ಮೂಲಕ ಪುನಃ ಆರಂಭಿಸಿ ಅದನ್ನು ಪೂರ್ಣಗೊಳಿಸಲಾಯಿತು. ಆದರೆ ಪೇಟೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ಎದುರು ಈಗಲೂ
ಸುಮಾರು 10 ಮೀಟರ್ ಉದ್ದಕ್ಕೆ ಚರಂಡಿ ತೆರೆದೇ ಇದೆ. ಇದು ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಅಪಾಯ ತಂದೊಡ್ಡಿದೆ. ಇನ್ನೂ ಕೆಲವೆಡೆ ಚರಂಡಿಗಳನ್ನು ಮುಚ್ಚದೆ ಬಿಟ್ಟಿದ್ದರಿಂದ ಕೆಲವರು ಕತ್ತಲಲ್ಲಿ ಕಾಣದೆ ಅದರೊಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
ಅರೆ-ಬರೆ ಚರಂಡಿ ಕಾಮಗಾರಿಯಿಂದಾಗಿ ಈಗ ಕಸ ವಿಲೇವಾರಿಯೂ ಕಠಿನವಾಗಿದೆ. ಜನ ತೆರೆದ ಚರಂಡಿಯಲ್ಲೇ ಕಸ ಎಸೆಯುತ್ತಿದ್ದಾರೆ. ಕಸಕ್ಕೆ ಅಲ್ಲೇ ಬೆಂಕಿಯನ್ನೂ ಕೊಡುತ್ತಿದ್ದಾರೆ. ಈಗಾಗಲೇ ಚರಂಡಿ ಕಸದಿಂದ ತುಂಬಿಹೋಗಿದೆ. ಚರಂಡಿ ಕಾಮಗಾರಿ ಬಜಪೆ ಪಂಚಾಯತ್‌ಗೆ ಹೋಗುವ ರಸ್ತೆಯಿಂದ ರಾಜ್ಯ ಹೆದ್ದಾರಿಯಲ್ಲಿ ಆರಂಭವಾಗಿ ಬಜಪೆ
ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಸಮೀಪದಲ್ಲಿ ಹರಿಯುವ ತೋಡಿನವರೆಗೆ ನಡೆದಿದೆ. ಚರಂಡಿಯ ಆರಂಭದ
ಹಂತದಲ್ಲಿ ಅದನ್ನು ಮುಚ್ಚಿದ್ದರಿಂದ ನೀರು ಅದರೊಳಗೆ ಹೋಗುವುದಿಲ್ಲ.
Related Articles
Advertisement
ನೀರು ಹೋಗಲು ಮಾಡಿದ್ದಲ್ಲ! ಈ ಚರಂಡಿ ಮಳೆಯ ನೀರು ಹರಿದು ಹೋಗಲು ಮಾಡಿದ್ದಲ್ಲ, ಇದು ಕಸ ಹಾಕಲು ಮಾಡಿದ್ದು. ಇದರಲ್ಲಿ ಎಲ್ಲಿ ನೀರು ಹರಿದು ಹೋಗಿದೆ ತೋರಿಸಿ. ಚರಂಡಿ ಆರಂಭದಲ್ಲಿಯೇ ಮಣ್ಣು ಹಾಕಿ ಬಂದ್ ಮಾಡಿದ್ದಾರೆ. ನೀರು ಬರುವುದೆಲ್ಲಿಂದ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಚರಂಡಿ ಪೂರ್ಣಗೊಳಿಸಿದರೆ ಪಾರ್ಕಿಂಗ್ ವ್ಯವಸ್ಥೆ
ಅರ್ಧದಲ್ಲಿ ನಿಂತ ಕಾಮಗಾರಿಯನ್ನು ಪೂರ್ತಿಗೊಳಿಸಿದ ನಂತರವೇ ನಾವು ವಾಹನದ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಬಹುದು. ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಸಭೆ ನಡೆದಿದೆ. ಪಾರ್ಕಿಂಗ್ ಜಾಗ ಹಾಗೂ ರಸ್ತೆ ಅಂಚುಗಳಿಗೆ ಬಣ್ಣ ಬಳಿಯುವ ಬಗ್ಗೆ ಸಲಹೆಗಳು ಬಂದಿವೆ. ಅದರೂ ರಾಜ್ಯ ಹೆದ್ದಾರಿಯ ಈ ರಸ್ತೆ ಅಭಿವೃದ್ಧಿ ಆದಮೇಲೆಯೇ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು. ತೆರೆದ ಚರಂಡಿ ಅಪಾಯಕಾರಿಯಾಗಿದ್ದು, ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಬಗ್ಗೆ ಬಗ್ಗೆ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಬಜಪೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ತಿಳಿಸಿದ್ದಾರೆ.