Advertisement

2 ವರ್ಷಗಳಲ್ಲಿ  ಕೇವಲ ಒಂದೇ ಗ್ರಾಮಸಭೆ

06:15 AM Aug 04, 2017 | Team Udayavani |

ಹೆಬ್ರಿ: ಕಳೆದ 2 ವರ್ಷಗಳಿಂದ ಕೇವಲ ಒಂದೇ ಗ್ರಾಮಸಭೆ ನಡೆದಿರುವುದರ  ಬಗ್ಗೆ ಆ. 1ರಂದು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ನಡೆದ ಪೆರ್ಡೂರು ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಳೆದ 2 ವರ್ಷಗಳಲ್ಲಿ  ಕೇವಲ ಒಂದು ಗ್ರಾಮ ಸಭೆ, 19 ವಿಶೇಷ ಸಭೆಗಳು ನಡೆದಿವೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಮಾರ್ಚ್‌ನಲ್ಲಿ ಯಾವುದೇ ಕ್ರಿಯಾಯೋಜನೆ ಆಗಿಲ್ಲ. ಗ್ರಾಮದ ಅಭಿವೃದ್ಧಿ ಕಾಮಗಾರಿಗಳು ನಡೆಯದೆ ಜನರು ತೊಂದರೆ ಅನುಭವಿಸುವಂತಾಗಿದೆ. 2 ವರ್ಷದಿಂದ ಯಾಕೆ ಗ್ರಾಮ ಸಭೆ ಆಗಿಲ್ಲ ಎನ್ನುವುದಕ್ಕೆ ಸಮರ್ಪಕ ಉತ್ತರ ನೀಡಿ ಇಲ್ಲದಿದ್ದರೆ ಖಂಡನಾ ನಿರ್ಣಯ ಮಾಡಿ ಎಂದು  ಪಂ.ಅಧ್ಯಕ್ಷರನ್ನು ಗ್ರಾಮಸ್ಥರು ತರಾಟೆಗೆ ತಗೆದುಕೊಂಡರು. ಇದಕ್ಕೆ ಉತ್ತರಿಸಿದ ಪಂ.ಅಧ್ಯಕ್ಷೆ ಶಾಂಭವಿ ಕುಲಾಲ್‌ ಮುಂದೆ ಹೀಗೆ ಆಗದಂತೆ ಗಮನ ಹರಿಸುತ್ತೇನೆ. ಗ್ರಾಮಸಭೆ ಮುಂದುವರಿಸುವಂತೆ ಮನವಿ ಮಾಡಿದರು.

ಪೆರ್ಡೂರಿನಲ್ಲಿ ಕಸದ ರಾಶಿ: ಪೆರ್ಡೂರಿಗೆ ಆಗಮಿಸುತ್ತಿದ್ದಂತೆಯೇ  ಮೊದಲ ದರ್ಶನ ಕಸದ ರಾಶಿ. ಮೇಲ್ಪೇಟೆ ಹಾಗೂ ಪೆರ್ಡೂರು ಹೈಸ್ಕೂಲ್‌ ಬಳಿ ಕಸದ ರಾಶಿ ಹಾಗೂ ಕೊಳೆತ ಕಸವನ್ನು ದನಗಳು ತಿನ್ನುತ್ತಿದ್ದು ಸಮಸ್ಯೆಯಾಗಿ ಪರಿಣಮಿಸಿದೆ.ಈ ಬಗ್ಗೆ ಪತ್ರಿಕೆಗಳಲ್ಲಿ ಸರಣಿ ಲೇಖನ ಪ್ರಕಟಗೊಂಡರು ಪಂಚಾಯತ್‌ ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಅಚ್ಚರಿಯನ್ನು ಮೂಡಿಸಿದೆ. ಯಾಕೆ ಗ್ರಾ.ಪಂ. ಕಸದ ವಿಲೇವಾರಿಗೆ ಮುಂದೆ ಹೋಗುತ್ತಿಲ್ಲ ಎಂದು ಗ್ರಾಮಸ್ಥರ ಪರವಾಗಿ ರಾಜಕುಮಾರ್‌ ಶೆಟ್ಟಿ, ಮಾಜಿ ಅಧ್ಯಕ್ಷ ಬುಕ್ಕಿಗುಡ್ಡೆ ಶಿವರಾಮ ಶೆಟ್ಟಿ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ  ಉಪಾಧ್ಯಕ್ಷ ಸುರೇಶ್‌ ಸೇರ್ವೇಗಾರ್‌, ಪಿ.ಡಿ.ಒ. ಸುರೇಶ್‌ ಕೆಮ್ಮಣ್ಣು, ನೋಡೆಲ್‌ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹುಲಿಗವ್ವ, ಕಾರ್ಯದರ್ಶಿ ಪ್ರಕಾಶ್‌ ಅಮೀನ್‌, ಜಿ.ಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯ ಸುಭಾಶ್‌ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next