ಕೊಲಂಬೋ: ಆರ್ಥಿಕ ಹೊಡೆತ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಇನ್ನು ಕೇವಲ ಒಂದು ದಿನಕ್ಕಾಗುವಷ್ಟು ಪೆಟ್ರೋಲ್ ಮಾತ್ರವೇ ಇದೆ ಎಂದು ನೂತನ ಪ್ರಧಾನಿ ರನಿಲ್ ವಿಕ್ರಮ್‌ಸಿಂಘೆ ಸೋಮವಾರ ಹೇಳಿದ್ದಾರೆ.
ವಿದ್ಯುತ್, ಔಷಧ, ಅಡುಗೆ ಅನಿಲ ಸೇರಿ ಬಹುತೇಕ ಎಲ್ಲ ವಸ್ತುಗಳ ಕೊರತೆಯಿದೆ ಎಂದೂ ತಿಳಿಸಿದ್ದಾರೆ.
ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ಮಾತನಾಡಿರುವ ರನಿಲ್ ಅವರು, “ವಿದ್ಯುತ್ ಉತ್ಪಾದನೆ ಕ್ಷೀಣಿಸಿದ್ದು, ಇನ್ನು ಮುಂದೆ ದಿನಕ್ಕೆ 15 ತಾಸು ವಿದ್ಯುತ್ ಕಡಿತ ಮಾಡಬೇಕಾಗುತ್ತದೆ. 14 ಔಷಧಗಳು ಖಾಲಿಯಾಗುವ ಹಂತದಲ್ಲಿವೆ. ಮುಂದಿನ ಕೆಲ ತಿಂಗಳು ಅತ್ಯಂತ ಕಷ್ಟಕರವಾಗಿರಲಿದ್ದು, ನಾವು ಎಲ್ಲವನ್ನೂ ತ್ಯಾಗ ಮಾಡಲೇಬೇಕಾಗುತ್ತದೆ’ ಎಂದಿದ್ದಾರೆ.
ಹಾಗೆಯೇ ದೇಶವನ್ನು ರಕ್ಷಿಸುವುದು ನನ್ನ ಗುರಿಯೇ ಹೊರತು ಯಾವೊಬ್ಬ ವ್ಯಕ್ತಿ ಅಥವಾ ಕುಟುಂಬವನ್ನಲ್ಲ ಎಂದು ಮಾಜಿ ಪ್ರಧಾನಿ ರಾಜಪಕ್ಸ ಕುಟುಂಬದ ವಿಚಾರದಲ್ಲಿ ಹೇಳಿದ್ದಾರೆ.
ರಾಷ್ಟ್ರದಲ್ಲಿ ಗಲಭೆಗಳು ನಡೆಯದಂತೆ ತಡೆಯಲೆಂದು ಸೋಮವಾರ ರಾತ್ರಿ 8 ಗಂಟೆಯಿಂದ ಮಂಗಳವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ವಿಧಿಸಲಾಗಿತ್ತು.