Advertisement

ಬರೀ ಫ್ರೆಂಡ್‌ ಆಗಿ ಜೊತೆಗಿರ್ತೇನೆ, ಆಗಬಹುದಾ?

06:00 AM Dec 25, 2018 | |

ಪರಿಚಯವಾದ ಮೊದಲೆರಡು ತಿಂಗಳು ನೋಡಿದರೂ ನೋಡದವರಂತೆ ಓಡಾಡುತ್ತಿದ್ದ ನಾವು, ಬರುಬರುತ್ತ ಆಗೊಮ್ಮೆ ಈಗೊಮ್ಮೆ ನಿನ್ನ ಕಡೆ ನಾನು, ನನ್ನ ಕಡೆಗೆ ನೀನು ತಿರುಗಿ ನೋಡಲು ಶುರು ಮಾಡಿದೆವು. ನಿನಗೆ ಗೊತ್ತಾಗದಂತೆ, ಟೀ ಅಂಗಡಿಯ ಮರೆಯಲ್ಲಿ ನಿಂತು ನಿನ್ನನ್ನು ನೋಡಲು ಕಾದ ದಿನಗಳಿಗೆ ಲೆಕ್ಕವಿಲ್ಲ.

Advertisement

ಬೆನ್ನಿನ ಮೇಲೆ ಬ್ಯಾಗ್‌ ನೇತು ಹಾಕಿಕೊಂಡು ರಸ್ತೆಗಿಳಿದರೆ ಸಾಕು ನಿನ್ನದೇ ನೆನಪಾಗುತ್ತಿತ್ತು. ನಾವು ಓಡಾಡುವ ರಸ್ತೆಯ ತಿರುವು ನಮ್ಮಿಬ್ಬರನ್ನೂ ಆಗಾಗ ಭೇಟಿಯಾಗುತ್ತಿತ್ತು. ಪರಿಚಯವಾದ ಮೊದಲೆರಡು ತಿಂಗಳು ನೋಡಿದರೂ ನೋಡದವರಂತೆ ಓಡಾಡುತ್ತಿದ್ದ ನಾವು, ಬರುಬರುತ್ತ ಆಗೊಮ್ಮೆ ಈಗೊಮ್ಮೆ ನಿನ್ನ ಕಡೆ ನಾನು, ನನ್ನ ಕಡೆಗೆ ನೀನು ತಿರುಗಿ ನೋಡಲು ಶುರು ಮಾಡಿದೆವು. ನಿನಗೆ ಗೊತ್ತಾಗದಂತೆ, ಟೀ ಅಂಗಡಿಯ ಮರೆಯಲ್ಲಿ ನಿಂತು ನಿನ್ನನ್ನು ನೋಡಲು ಕಾದ ದಿನಗಳಿಗೆ ಲೆಕ್ಕವಿಲ್ಲ. ಹೀಗೆ ಇಬ್ಬರ ನಡುವೆ ಮಾತುಗಳಿಲ್ಲದ ಸಲುಗೆ ಬೆಳೆಯುತ್ತಲೇ ಸಾಗಿತ್ತು. 

ಅಬ್ಟಾ, ನಿನ್ನನ್ನು ಮಾತಾಡಿಸಬೇಕೆಂದು ಅದೆಷ್ಟು ದಿನ ಸೈಕಲ್‌ ಹೊಡೆದಿದ್ದೇನೋ! ನೂರೊಂದು ಆಸೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಿಸಲೆಂದು ಹತ್ತಿರ ಬರುವಾಗ ಎದೆಯಲ್ಲಿ ನಡುಕ, ಬಾಯಿ ಒಣಗಿ, ತಲೆ ಸುತ್ತಿದ ಅನುಭವ, ರಸ್ತೆಯಲ್ಲಿ ಜನರ ಓಡಾಟ, ನೀನು ಮುಖ ತಿರುಗಿಸಿ ಅವಮಾನ ಮಾಡಿಬಿಟ್ಟರೆ ಎಂಬ ಆತಂಕ. ನನ್ನ ಈ ಚಡಪಡಿಕೆಯನ್ನು ನೋಡಿ, ರಸ್ತೆಗೂ ಸಾಕಾಯಿತು ಅನಿಸುತ್ತೆ. ಅನಿರೀಕ್ಷಿತ ಸಂದರ್ಭವೊಂದನ್ನು ನಮ್ಮ ನಡುವೆ ಸೃಷ್ಟಿಸಿ, ನಾವಿಬ್ಬರು ಮಾತಾಡಲೇಬೇಕಾದ ಸಂದರ್ಭವನ್ನೂ ಆ ನಿರ್ಜೀವ ರಸ್ತೆಯೇ ಸೃಷ್ಟಿಸಿಬಿಡು¤. ಅವತ್ತು, ರಸ್ತೆಯ ಪಕ್ಕದಲ್ಲಿ ನಿಂತಿದ್ದ ವಾಹನ ನಮ್ಮಿಬ್ಬರಿಗೂ ಮರೆಯಾಗಿದ್ದರಿಂದ ಇದ್ದಕ್ಕಿದ್ದಂತೆ ಇಬ್ಬರೂ ಇನ್ನೇನು ಡಿಕ್ಕಿ ಹೊಡೆಯುವುದರಲ್ಲಿದ್ದೆವು. ಮುಖಾಮುಖೀಯಾದಾಗ ಗಾಬರಿಯಲ್ಲಿ ನಿನ್ನ ಬಾಯಿಯಿಂದ ಬಂದ ಐದಾರು ಪದಗಳೇ ನಮ್ಮಿಬ್ಬರ ಮುಂದಿನ ಸಂಭಾಷಣೆಗೆ ನಾಂದಿಯಾಯಿತು.

ಹೀಗೆ ಬೆಳೆದ ನಮ್ಮ ಸ್ನೇಹ, ಗೊತ್ತೇ ಆಗದಂತೆ ಗಾಢವಾಗಿದೆ. ನನ್ನೆಲ್ಲ ಭಾವನೆಗಳನ್ನು ನಿನ್ನೊಂದಿಗೆ ಹಂಚಿಕೊಂಡರಷ್ಟೇ ಸಮಾಧಾನ ಎನ್ನುವಷ್ಟರ ಮಟ್ಟಿಗೆ ನಾನು ನಿನ್ನನ್ನು ಹಚ್ಚಿಕೊಂಡಿದ್ದೇನೆ. ಮನಸ್ಸಿನಲ್ಲಿ ಅಸ್ಪಷ್ಟ ಕನಸುಗಳು ಮೊಳೆಯುತ್ತಿವೆ. ಆದರೆ, ಮೊನ್ನೆ ನೀನು ಇದ್ದಕ್ಕಿದ್ದಂತೆ ನನ್ನ ಕುಟುಂಬದ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದೆ. ನಾನು ಕೇಳದಿದ್ದರೂ, ನಿನ್ನ ಕುಟುಂಬ, ಸಂಪ್ರದಾಯ, ಆಚಾರ-ವಿಚಾರಗಳ ಬಗ್ಗೆ ಹೇಳಿದೆ. ಅಲ್ಲದೆ, ನನ್ನ ತಂದೆ ತಾಯಿಗೆ ನಾನೊಬ್ಬಳೇ ಮಗಳು. ತುಂಬಾ ಸುಖವಾಗಿ ನನ್ನನ್ನು ಬೆಳೆಸಿದ್ದಾರೆ. ನಾನು ಮೊದಲು ಪ್ರೀತಿಸುವುದು ಹೆತ್ತವರನ್ನು. ಹಾಗಾಗಿ ಯಾವುದೇ ವಿಷಯದಲ್ಲಿಯೂ ಅವರ ಇಷ್ಟಕ್ಕೆ ವಿರುದ್ಧವಾಗಿ ನಡೆಯುವುದಿಲ್ಲ ಎಂದು ಸೂಚ್ಯವಾಗಿ ಹೇಳಿದೆ.  

ಇವುಗಳನ್ನೆಲ್ಲ ಕೇಳಿದ ಮೇಲೆ ನನಗೆ ಎಲ್ಲವೂ ಅರ್ಥವಾಯ್ತು. ಹಿಂದೊಮ್ಮೆ ನೀನು ನನ್ನ ಜಾತಿ ಯಾವುದು ಎಂದು ಕೇಳಿದ್ದು ನೆನಪಾಯಿತು. ನನ್ನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಂಡೇ ನೀನು ಅದನ್ನೆಲ್ಲಾ ಹೇಳಿದ್ದಲ್ವಾ?ಹೆದರಬೇಡ, ಹೆತ್ತವರ ಮೇಲೆ ನಿನಗಿರುವ ಪ್ರೀತಿ ಅರ್ಥವಾಗುತ್ತದೆ. ಸ್ನೇಹಕ್ಕೆ ಜಾತಿಯ ಹಂಗಿಲ್ಲ. ಇನ್ಮುಂದೆ ನಾನೊಬ್ಬ ಒಳ್ಳೆಯ ಸ್ನೇಹಿತನಾಗಷ್ಟೇ ನಿನ್ನ ಜೊತೆಗಿರುತ್ತೇನೆ. ಆಯ್ತಾ? 

Advertisement

– ಸಣ್ಣಮಾರಪ್ಪ, ದೇವರಹಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next