Advertisement

ಆನ್‌ಲೈನ್‌ ಮದುವೆಯಾದ ಮಾಜಿ ಸಚಿವರ ಮರಿ ಮೊಮ್ಮಗ

02:07 PM Jul 27, 2020 | Suhan S |

ಭಟ್ಕಳ: ಕೋವಿಡ್ ಸಮಯದಲ್ಲಿ ಜನ ಪರಿಸ್ಥಿತಿಗೆ ಹೊಂದಿಕೊಂಡು ಜೀವನ ಸಾಗಿಸಲು ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆ ಕೆಲ ಬದಲಾವಣೆಗಳನ್ನೂ ಮಾಡಿಕೊಂಡಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಆನ್‌ಲೈನ್‌ ಮದುವೆ ನಡೆದಿದೆ.

Advertisement

ಭಟ್ಕಳ ಮೂಲದ ಆದಿಲ್‌ ಕೌಡ ಮಾಲ್ಡೀವ್ಸ್‌ನಲ್ಲಿ ಪೈಲೆಟ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಲಾಕ್‌ ಡೌನ್‌ ಪೂರ್ವ ಬೆಂಗಳೂರಿಗೆ ಬಂದು ನೆಲೆಸಿದ್ದರು. ಈ ನಡುವೆ ಇವರ ಹೆತ್ತವರು ಚೆನೈ ಮೂಲದ ಅಂಬೂರು ನಿವಾಸಿ ಆಫಿಯಾ ಮರಿಯಮ್‌ ಎನ್ನುವ ಕನ್ಯೆಯೊಂದಿಗೆ ನಿಶ್ಚಿತಾರ್ಥ ಮಾಡಿದ್ದು, ಇನ್ನೇನು ಲಾಕ್‌ಡೌನ್‌ ಮುಗಿದೇ ಹೋಗುತ್ತದೆ ಎಂದು ಮದುವೆ ದಿನಾಂಕ ಕೂಡಾ ನಿಗದಿ ಮಾಡಿದ್ದರು.

ಆದರೆ ಕೋವಿಡ್ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ ಎನ್ನುವಂತೆ ಮದುವೆಗೆ ಅಡ್ಡಿಯಾಗಿತ್ತು. ನೂರಾರು ಕಿ.ಮೀ. ದೂರದಲ್ಲಿರುವ ವಧು-ವರರು ಪರಸ್ಪರ ನಿಗದಿಯಾಗಿದ್ದ ಸಮಯದಲ್ಲಿಯೇ ಮದುವೆಯಾಗಬೇಕು ಎಂದು ನಿರ್ಣಯಿಸಿದ್ದರು. ಎರಡೂ ಕಡೆಯವರಿಗೆ ಮದುವೆ ಮುಂದೆ ಹಾಕಲು ಇಚ್ಚೆ ಇರಲಿಲ್ಲ. ಆದರೆ ಸರಕಾರದ ನಿಯಮಾವಳಿಯಂತೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬರುವುದು, ಹೋಗುವುದು ಎರಡೂ ಕಷ್ಟಕರವಾಗಿತ್ತು. ಇಂತಹ ಸಂದರ್ಭದಲ್ಲಿ ಎರಡೂ ಕುಟುಂಬದವರು ಪರಸ್ಪರ ಮಾತುಕತೆಯಿಂದ ಒಪ್ಪಿ ಆನ್‌ಲೈನ್‌ ಮದುವೆ ಮಾಡಲು ನಿರ್ಣಯಿಸಿದ್ದು, ಕಳೆದ ಶುಕ್ರವಾರ ಬೆಂಗಳೂರಿನಲ್ಲಿರುವ ಯುವಕ, ಚೆನೈನಲ್ಲಿರುವ ಯುವತಿ ಪರಸ್ಪರ ಆನ್‌ಲೈನ್‌ ವಿವಾಹ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಹಿತೈಷಿಗಳು ನೂರಾರು ಸಂಖ್ಯೆಯಲ್ಲಿ ಆನ್‌ಲೈನ್‌ನಲ್ಲಿಯೇ ಮದುವೆಗೆ ಸಾಕ್ಷಿಯಾಗಿ ಪರಸ್ಪರ ಶುಭಾಶಯ ಕೋರಿದರು.

ಅಷ್ಟಕ್ಕೂ ಮದುವೆಯಾದ ವರ ಭಟ್ಕಳದಲ್ಲಿ ಅತ್ಯಂತ ಜನಪ್ರಿಯರಾಗಿದ್ದ ರಾಜ್ಯದ ಮಾಜಿ ಸಚಿವ ದಿವಂಗತ ಶಂಶುದ್ಧೀನ್‌ ಜುಕಾಕೋ ಅವರ ಮರಿ ಮೊಮ್ಮಗ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next