Advertisement
ಕೋವಿಡ್ ಕಾರಣದಿಂದಾಗಿ ಪ್ರಸ್ತುತತರಗತಿ ಪಠ್ಯಕ್ರಮಗಳಿಗೆ ಅಡ್ಡಿಯಾಗಿದ್ದು, ಪರ್ಯಾಯ ಕಲಿಕಾ ಕ್ರಮವಾಗಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಇದು ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿರುವುದು ಕಂಡು ಬಂದಿದೆ. ಚಿಕ್ಕ ಮಕ್ಕಳು ಮಾತ್ರವಲ್ಲದೆ ಪ್ರೌಢ, ಪ.ಪೂ. ಕಾಲೇಜಿನ ಕೆಲವರು ಆನ್‌ಲೈನ್ ಶಿಕ್ಷಣವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೆ ಆತಂಕ, ಖನ್ನತೆಗೊಳಗಾಗುತ್ತಿರುವ
ಸಾಕಷ್ಟು ನಿದರ್ಶನಗಳಿವೆ.
ಡಾ| ಮಹಿಮಾ ಆಚಾರ್ಯ ಅವರು ವಿಸ್ತೃತವಾಗಿ ವಿವರಿಸಿದ್ದಾರೆ. ಮಕ್ಕಳ ಮೇಲಾಗುವ ಪರಿಣಾಮಗಳೇನು?
ಮಕ್ಕಳು ದಿನಕ್ಕೆ ಹಲವು ಗಂಟೆಗಳ ಕಾಲ ಕಂಪ್ಯೂ ಟರ್ ಸ್ಕ್ರೀನ್ ಅಥವಾ ಮೊಬೈಲ್ ನೋಡಿ ಕೊಂಡೇ ಇರಬೇಕಾಗುತ್ತದೆ. ಆದರೆ ಹೆಚ್ಚಿನ ಮಕ್ಕಳಿಗೆ ನಿರಂತರವಾಗಿ ಇದರ ಮೇಲೆ ಏಕಾಗ್ರತೆ ಯಿಂದ ಗಮನಕೊಡುವುದು ಕಷ್ಟವಾಗುತ್ತದೆ.
Related Articles
Advertisement
ಮೊಬೈಲ್‌ಗಳಲ್ಲಿ ಬಗೆ ಬಗೆ ಯ ಗೇಮ್ಸ್ ಗಳೂ ಇರು ತ್ತವೆ. ಮಕ್ಕಳು ಇಂತ ಹ ಚಟಕ್ಕೆ ಬೀಳುವುದು, ಇತರ ವೀಡಿಯೋಗಳನ್ನು ನೋಡುವ ಆಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆಯೂ ಇದೆ.
ಮಕ್ಕಳು ಶಾಲೆಗೆ ಹೋಗುವುದರಿಂದ ಕೇವಲ ಶಿಕ್ಷಣ ಕಲಿಯುವುದು ಮಾತ್ರವಲ್ಲ. ಮಕ್ಕಳಲ್ಲಿನ ತರಗತಿಗೆ ಬೌದ್ಧಿಕ, ಮಾನಸಿಕ, ದೈಹಿಕ ಬೆಳ ವಣಿಗೆಯೊಂದಿಗೆ ಜ್ಞಾನ ವೃದ್ಧಿಯಾಗಿರುತ್ತದೆ. ಆದರೆ ಆನ್‌ಲೈನ್ ಪಾಠದಿಂದಾಗಿ ಪಾಠ ಮಾತ್ರ ಕಲಿಯಬಹುದು. ಮಾನಸಿಕ, ಬೌದ್ಧಿಕ, ದೈಹಿಕವಾಗಿ ಗಟ್ಟಿಗೊಳ್ಳುವುದು ಸಾಧ್ಯವಿಲ್ಲ.
ಶಿಕ್ಷಕರು, ಮಕ್ಕಳ ನಡುವೆ ತರಗತಿಯಲ್ಲಾದರೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಇಲ್ಲಿ ಕಷ್ಟ. ಶಾಲೆಗೆ ಹೋಗುವುದರಿಂದ ಮಕ್ಕಳು ಮನೆಯಿಂದ ಹೊರಗೆ ಹೇಗೆ ವ್ಯವಹರಿಸಬೇಕು, ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ಹೇಗಿರಬೇಕು ಎನ್ನುವುದನ್ನೆಲ್ಲ ಕಲಿಯುತ್ತಾರೆ. ಅದು ಅವರಿಗೆ ಭವಿಷ್ಯದಲ್ಲಿಯೂ ಸಹಾಯವಾಗುತ್ತದೆ.
ಪೋಷಕರೇನು ಮಾಡಬೇಕು ?ಆನ್‌ಲೈನ್ ಪಾಠದ ವೇಳೆ ಹಿಂದಿಗಿಂತ ಈಗ ಪೋಷಕರ ಜವಾಬ್ದಾರಿ ಹೆಚ್ಚಿರುತ್ತದೆ. ಮಕ್ಕಳ ಎಲ್ಲ ಚಲನವಲನಗಳ ಬಗ್ಗೆ ಹೆಚ್ಚು ನಿಗಾವಹಿಸುವುದು ಆವಶ್ಯಕ. ಆಯಾಯ ದಿನ ಮಾಡಿದ ಪಾಠದ ಬಗ್ಗೆ ಮಕ್ಕಳಲ್ಲಿ ಪ್ರತಿ ದಿನ ತಪ್ಪದೇ ಕೇಳಿ, ಅರ್ಥವಾಯಿತಾ, ಯಾವುದಾದರೂ ಗೊಂದಲವಿದೆಯೇ, ಅರ್ಥ ವಾಗಿಲ್ಲವಾ ಈ ಎಲ್ಲ ವಿಚಾರಗಳನ್ನು ಮಕ್ಕಳಿಂದ ಕೇಳಿ ಅದಕ್ಕೆ ಶಿಕ್ಷಕರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು ಉತ್ತಮ. ಶಿಕ್ಷಕರು ಹಾಗೂ ಪೋಷಕರು ಆನ್‌ಲೈನ್ ಶಿಕ್ಷಣದ ಬಗ್ಗೆ, ಮಕ್ಕಳ ಕಲಿಕೆಯ ಕುರಿತಂತೆ ಚರ್ಚಿ ಸಲು ವಾಟ್ಸ್ ಆ್ಯಪ್ ಗ್ರೂಪ್‌ನಂತಹ ವೇದಿಕೆ ನಿರ್ಮಿಸಿಕೊಂಡರೆ ಒಳ್ಳೆಯದು. ಪೋಷಕರು ಮಕ್ಕಳ ಜತೆ ನಿರಂತರವಾಗಿ ಸಂವಹನ ಮಾಡುತ್ತಿರಬೇಕು. ಸಮಯ ಕಡಿಮೆ ಯಿದ್ದರೂ, ಸಿಕ್ಕ ಸಮಯವನ್ನು ಮಕ್ಕಳೊಂದಿಗಿನ ಸಂವಹನಕ್ಕೆ ಮೀಸಲಿಡಬೇಕು. ಮಕ್ಕಳು ದೈಹಿಕವಾಗಿ ಸದೃಢರಾಗಲು ಆಟ ಉತ್ತಮ ಮಾರ್ಗ. ಅದಕ್ಕಾಗಿ ಮನೆಯಲ್ಲಿ ಸಂಜೆ ಹಾಗೂ ಬೆಳಗ್ಗೆ ಕೆಲವು ಸಮಯ ಆಟವಾಡಲು ಬಿಡಬೇಕು. ಕ್ರಿಕೆಟ್, ಟೆನ್ನಿಸ್, ಇತ್ಯಾದಿ ಮಾತ್ರ ವಲ್ಲದೆ ಯೋಗ ಕೂಡ ಮಾಡಿಸಬಹುದು. ಆನ್‌ಲೈನ್ ತರಗತಿಗೆಂದು ಮೊಬೈಲ್ ಕೊಟ್ಟರೂ ಮೊಬೈಲ್‌ಗಳಲ್ಲಿ ಕೆಲವೊಂದಕ್ಕೆ ಲಾಕ್‌ಗಳನ್ನು ಅಳವಡಿಸಿಯೇ ಬಳಕೆ ಮಾಡಲು ಕೊಡಬೇಕು. ಯಾವ ವಯಸ್ಸಿನವರಿಗೆ ಎಷ್ಟು ಗಂಟೆ ?
3 ವರ್ಷದೊಳಗಿನ ಮಕ್ಕಳು
ಯಾವುದೇ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸ್ಕ್ರಿನ್ ನೋಡಲೇಬಾರದು. 3-5 ವಯಸ್ಸಿನ ಮಕ್ಕಳು
ದಿನದಲ್ಲಿ ಗರಿಷ್ಠವೆಂದರೆ 1 ಗಂಟೆ ಮಾತ್ರ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸ್ಕ್ರಿನ್ ನೋಡಬಹುದು. 5-12 ವಯಸ್ಸಿನ ಮಕ್ಕಳು
ಗಂಟೆಯ ಮಿತಿಯಿಲ್ಲದಿದ್ದರೂ 5-6 ಗಂಟೆಗಿಂತ ಹೆಚ್ಚು ನೋಡಬಾರದು. 12ಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು
ಗಂಟೆಯ ಮಿತಿಯಿಲ್ಲ. ಆದರೆ ಮೊಬೈಲ್ ಬಳಕೆಯ ವೇಳೆ ಪೋಷಕರೇ ಕೆಲವೊಂದು ವಿಚಾರಗಳನ್ನು ಮಾಡಬಾರದು ಎನ್ನುವುದಾಗಿ ಸ್ಪಷ್ಟವಾಗಿ ಹೇಳಿಕೊಡಬೇಕು. ಲವಲವಿಕೆಯಿಂದಿರುವಂತೆ ಮಾಡಿ
ಆನ್‌ಲೈನ್ ಶಿಕ್ಷಣ ಈಗ ಅನಿವಾರ್ಯವಾಗಿದ್ದು, ಸದ್ಯಕ್ಕೆ ಅಂತಹ ಗಂಭೀರ ಪ್ರಕರಣಗಳು ಕಂಡು ಬರದಿದ್ದರೂ, ಇದು ಇನ್ನಷ್ಟು ತಿಂಗಳು ಮುಂದುವರಿ ದರೆ ದೀರ್ಘಾವಧಿಯಲ್ಲಿ ಸಮಸ್ಯೆ ಆಗಬಹುದು. ಆದ್ದರಿಂದ ಮಕ್ಕಳನ್ನು ಪೋಷಕರು ಹಾಗೂ ಶಿಕ್ಷಕರು ಆದಷ್ಟು ಲವ ಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅವರಷ್ಟಕ್ಕೆ ಬಿಟ್ಟು ಬಿಡಬೇಡಿ. ನಿರಂತರ ನಿಗಾ ಇರಲಿ. ಅವರ ಮಾನಸಿಕ ಸ್ಥಿತಿಯನ್ನು ಚೆನ್ನಾಗಿರುವಂತೆ ಮಾಡಲು ಅನೇಕ ಸಂಗತಿಗಳಿವೆ. ಅದನ್ನು ಪೋಷಕರು ಮಾಡಬೇಕು.
-ಡಾ| ಮಹಿಮಾ ಆಚಾರ್ಯ, ಮನಃಶಾಸ್ತ್ರ ವೈದ್ಯರು, ಕೋಟೇಶ್ವರ