Advertisement

ಆನ್‌ಲೈನ್‌ ಶಿಕ್ಷಣ ತೀರ್ಮಾನ ಆಗಿಲ್ಲ: ಸುರೇಶ್‌ ಕುಮಾರ್‌

01:04 PM Jul 12, 2020 | sudhir |

ಸುಬ್ರಹ್ಮಣ್ಯ: ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳೇ ಅಧಿಕವಾಗಿರುವುದರಿಂದ ಆನ್‌ಲೈನ್‌ ಶಿಕ್ಷಣಕ್ಕೆ ಪೂರಕ ವಾತಾವರಣ ಇಲ್ಲ. ಆದ್ದರಿಂದ ರಾಜ್ಯ ಸರಕಾರ ಆನ್‌ಲೈನ್‌ ಶಿಕ್ಷಣ ಜಾರಿಯ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆಲವು ಖಾಸಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್‌ ಶಿಕ್ಷಣ ನೀಡುವ ವಿಷಯ ತಿಳಿದಿದೆ. ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ ಇತ್ಯಾದಿ ಖರೀದಿಸುವಂತೆ ಹೆತ್ತವರಿಗೆ ಒತ್ತಡ ಹೇರುವ ದೂರುಗಳೂ ಬಂದಿವೆ. ಮಂಗಳವಾರ ಇನ್ನೊಮ್ಮೆ ಸಾಧಕ-ಬಾಧಕಗಳ ವಿಮರ್ಶೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೋವಿಡ್ ಆರ್ಭಟ ಕಡಿಮೆಯಾದ ಬಳಿಕವೇ ಶಾಲೆಗಳ ಪುನರಾರಂಭ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜು. 18ರೊಳಗೆ ಪಿಯುಸಿ ಫ‌ಲಿತಾಂಶ
ದ್ವಿತೀಯ ಪಿಯುಸಿ ಮೌಲ್ಯಮಾಪನ ಮುಗಿದಿದ್ದು, ಜು. 18ರ ಒಳಗೆ ಫ‌ಲಿತಾಂಶ ಘೋಷಣೆಯಾಗಲಿದೆ. ಎಸೆಸೆಲ್ಸಿ ಮೌಲ್ಯಮಾಪನ ಸೋಮವಾರ ಆರಂಭವಾಗಲಿದೆ. ಆಗಸ್ಟ್‌ ಮೊದಲ ವಾರದಲ್ಲಿ ಫ‌ಲಿತಾಂಶ ಬರಲಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next