Advertisement
ಹೆಚ್ಚುತ್ತಿರುವ ಮನೋ, ದೈಹಿಕ ಸಮಸ್ಯೆಅಧ್ಯಯನವೊಂದರ ಪ್ರಕಾರ ಪ್ರಸ್ತುತ ಶೇ. 50ರಷ್ಟು ಮಂದಿಗೆ ಕೊರೊನಾ ಸಂಬಂಧಿ ವಿಚಾರಗಳಿಂದ ಮಾನಸಿಕ ಖನ್ನತೆ, ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೇ. 20ರಷ್ಟು ಮಂದಿ ಮಕ್ಕಳ ಕಲಿಕೆ, ಭವಿಷ್ಯ, ಆನ್‌ಲೈನ್ ಶಿಕ್ಷಣ ಇನ್ನಿತರ ವಿಷಯಗಳಿಂದಾಗಿ ಚಿಂತೆಗೊಳಗಾಗಿ ಖನ್ನತೆ, ಒತ್ತಡದಿಂದ ಬಳಲುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ.
ಆನ್‌ಲೈನ್ ಶಿಕ್ಷಣವು ಶಿಕ್ಷಕರ ಮೇಲೂ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಅನೇಕ ಮಂದಿ ಮಕ್ಕಳನ್ನು ಒಟ್ಟಾಗಿ ಸಂಭಾಳಿಸಿಕೊಂಡು ಹೋಗುವುದು ಕಷ್ಟಕರ. ಅದರಲ್ಲೂ ಆನ್‌ಲೈನ್ ಪಾಠ ಮಾಡುವಾಗ ಮಕ್ಕಳು ಶಿಕ್ಷಕರ ನಿಯಂತ್ರಣದಲ್ಲಿ ಇರುವುದಿಲ್ಲ. ಅಂತಹ ಸಮಯದಲ್ಲಿ ಶಿಕ್ಷಕರು ಪೋಷಕರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿರಬೇಕು. ಪೋಷಕರಿಗೆ ಆನ್‌ಲೈನ್ ಶಿಕ್ಷಣದ ಕುರಿತಂತೆ ಮೊದಲೇ ವರ್ಚುವಲ್ ಮೀಟಿಂಗ್ ಮೂಲಕ ತರಬೇತಿಯನ್ನು ನೀಡಿದರೆ ಉತ್ತಮ. ಪೋಷಕರ ಮೇಲೆ ಯಾವ ರೀತಿ ಒತ್ತಡ ?
– ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಚಿಂತೆ ಹೆಚ್ಚುತ್ತಿದೆ.
– ಆನ್‌ಲೈನ್ ಶಿಕ್ಷಣ ತಮ್ಮ ಮಕ್ಕಳಿಗೆ ಪರಿಣಾಮಕಾರಿ ಆಗಿದೆಯೇ ಎನ್ನುವ ಆತಂಕ.
– ಮಕ್ಕಳಿಗೆ ಆನ್‌ಲೈನ್ ಶಿಕ್ಷಣದಿಂದ ಸರಿಯಾಗಿ ಅರ್ಥವಾಗುತ್ತಿಲ್ಲ ಅಥವಾ ಮಾಡಿದ ಪಾಠ ಮನದಟ್ಟಾಗುತ್ತಿಲ್ಲ ಎನ್ನುವ ಆತಂಕ.
– ಮಕ್ಕಳು ಭವಿಷ್ಯದಲ್ಲಿ ಮೊಬೈಲ್‌ಗೆ ಅಡಿಕ್ಟ್ (ಗೀಳು) ಆಗಬಹುದು ಎನ್ನುವ ಭಯ.
– ತಂದೆ-ತಾಯಿಗಳಿಬ್ಬರಲ್ಲಿ ಒಬ್ಬರು ಮಾತ್ರ ಮಕ್ಕಳ ಶಿಕ್ಷಣದ ಬಗ್ಗೆ ಗಮನಕೊಡುತ್ತಿದ್ದರೆ, ಅದೇ ವಿಚಾರವಾಗಿ ಇಬ್ಬರ ಮಧ್ಯೆ ವೈಮನಸ್ಸು, ಅಸಮಾಧಾನ ಸಹ ಉಂಟಾಗುತ್ತದೆ.
Related Articles
ಆನ್‌ಲೈನ್ ಶಿಕ್ಷಣ ಎನ್ನುವುದು ಶಾಶ್ವತವಲ್ಲ. ಇದೇ ಅಂತಿಮವೂ ಅಲ್ಲ. ಈಗಿನ ಕಾಲದಲ್ಲಿ ಅನಿವಾರ್ಯ.
ಆನ್‌ಲೈನ್ ಶಿಕ್ಷಣವೇ ಸೂಕ್ತ ಪಠ್ಯ ಕ್ರಮವೂ ಅಲ್ಲ. ಮುಂದಿನ 3-4 ತಿಂಗಳುಗ ಳಲ್ಲಿ ಪರಿಸ್ಥಿತಿ ಯಥಾಸ್ಥಿತಿಗೆ ಬಂದು ಎಲ್ಲವೂ ಮತ್ತೆ ಮೊದಲಿನಂತಾಗುತ್ತದೆ. ಅದನ್ನು ಪೋಷಕರು ಬಹುಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕು.
ಮಕ್ಕಳಿಗೆ ಹೆಚ್ಚಿನ ಸಮಯವನ್ನು ಕೊಡಿ.
ನಿಮ್ಮೆಲ್ಲ ಕೆಲಸಗಳ ಮಧ್ಯೆಯೂ ಈಗ ಮಕ್ಕಳಿಗೆ
ಹೆಚ್ಚಿನ ಸಮಯ ಕೊಡುವುದು ಆವಶ್ಯಕ.
ತಂದೆ ಹಾಗೂ ತಾಯಿ ಇಬ್ಬರಲ್ಲಿಯೂ ಮಕ್ಕಳ ಬಗೆಗೆ ಏಕಾಭಿ ಪ್ರಾಯ ಇರಲಿ. ಮಕ್ಕಳ ಶಿಕ್ಷಣ, ಭವಿಷ್ಯದ ಕುರಿತಂತೆ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಗಮನಕೊಡಿ.
ಮಕ್ಕಳೆದುರು ಪೋಷಕರು ತಮ್ಮ ಕಷ್ಟಗಳನ್ನು,
ಆನ್‌ಲೈನ್ ಶಿಕ್ಷಣ ಅಥವಾ ಪಾಠ ಕಷ್ಟವೆಂದು ತೋರಿಸಿಕೊಳ್ಳಬೇಡಿ. ಇದರಿಂದ ಮಕ್ಕಳಿಗೆ ಅನಗತ್ಯ
ಭಯ, ಹಿಂಜರಿಕೆ ಶುರುವಾಗುತ್ತದೆ.
ಓದುವುದೊಂದೇ ಮಕ್ಕಳ ಕೆಲಸ ಎನ್ನುವ ನಿಮ್ಮ ಸಿದ್ದಾಂತ ವನ್ನು ತೊಡೆದು ಹಾಕಿ. ಮಕ್ಕಳಿಗೆ ಈಗ ಹಿಂದಿನಂತೆ ಸಣ್ಣ – ಪುಟ್ಟ ಮನೆ ವಾರ್ತೆ (ಮನೆ ಕೆಲಸ) ಯನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ. ಈಗ ಅದಕ್ಕೆ ಸೂಕ್ತ ಸಮಯವೂ ಬಂದಿದೆ. ಇದರಿಂದ ಮಕ್ಕಳಲ್ಲಿಯೂ ಪಾಠ, ಶಿಕ್ಷಣದ ಹೊರತಾಗಿ, ಸ್ವಲ್ಪ ಬದಲಾವಣೆ ಇರುತ್ತದೆ. ಇದು ಅವರಿಗೆ ಭವಿಷ್ಯದಲ್ಲಿಯೂ ನೆರವಾಗುತ್ತದೆ.
ಶಿಕ್ಷಕರೊಂದಿಗೆ ಮಕ್ಕಳ ಬಗೆಗೆ ಮುಕ್ತವಾಗಿ
ಸಂವಹನ ಇರಲಿ.
Advertisement
ಹೆತ್ತ ವರು ಬಹುಮುಖ್ಯವಾಗಿ ಮಕ್ಕಳ ಬಗ್ಗೆ ಈ ಸಮಯದಲ್ಲಿ ಹೆಚ್ಚಿನ ಕಾಳಜಿ ತೋರಬೇಕಾದುದು ಅತೀ ಆವಶ್ಯಕ. ಯಾವುದೇ ಸನ್ನಿವೇಶದಲ್ಲಿ ನೀವು ಆತಂಕ, ಒತ್ತಡ, ಚಿಂತೆಗೊಳಗಾದರೆ ಅದು ನಿಮ್ಮ ಮಗುವಿನ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ತಂದೆ- ತಾಯಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಸಮಾನ ರೀತಿಯಲ್ಲಿ ಮಕ್ಕಳ ಆನ್‌ಲೈನ್ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಮನೆಯಲ್ಲಿರುವ ತಾಯಂದಿರ ಮೇಲೆ ಭಾರೀ ಒತ್ತಡ ಬೀರುತ್ತದೆ.-ಡಾ| ಕೆ.ಎಸ್. ಕಾರಂತ, ಮನೋ ವೈದ್ಯರು ಕುಂದಾಪುರ ಆನ್‌ಲೈನ್ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಸೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್ ಮಾಡಿ.
7618774529