Advertisement

ಲಾಕ್ ಡೌನ್ ಸಂದರ್ಭದಲ್ಲೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಮಾರ್ಗದರ್ಶನ

05:50 PM Apr 23, 2020 | keerthan |

ಗಂಗಾವತಿ: ಕೋವಿಡ್-19 ಸಂದರ್ಭದಲ್ಲೂ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವೈಶಿಷ್ಟ್ಯ ಪ್ರಯತ್ನ ಆನ್ ಲೈನ್ ನಲ್ಲಿ 10ನೇತರಗತಿ ಪಾಠಪ್ರವಚನ ನಿರಂತರ ನಡೆಯುತ್ತಿದ್ದು ವಿದ್ಯಾರ್ಥಿಗಳ ಪಾಲಕರು ತಾಲೂಕು ಶಿಕ್ಷಣ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಕೋವಿಡ್-19 ಹಿನ್ನೆಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮುಂದೂಡಿರುವುದು ಪರೀಕ್ಷೆ ಇನ್ನಷ್ಟು ತಯಾರಿ ನಡೆಸಲು ಅನುಕೂಲವಾಗಿದೆ. ಆನ್ ಲೈನ್ ಮೂಲಕ ತಾಲ್ಲೂಕಿನ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ತಲುಪಿ ಅವರ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ನೀಡಲಾಗುತ್ತಿದೆ. ತಾಲೂಕಿನಲ್ಲಿ6150 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿದ್ದು ಇವರಿಗೆ ಮಾರ್ಗದರ್ಶನ ಯುಟ್ಯೂಬ್, ಸ್ಥಳೀಯ ಜೆಎನ್ ಎನ್ ಕೇಬಲ್ ಚಾನಲ್ ಮೂಲಕ ಪ್ರಶ್ನೋತ್ತರ ಮಾಲೀಕೆ ಮತ್ತು ಮೊಬೈಲ್ ಕರೆ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಸಿದ್ದಾಂತೆ ಕುರಿತು ದಿನದ 12 ತಾಸು ಪರೀಕ್ಷೆ ತಯಾರಿ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ.

ಕೋವಿಡ್-19 ಹಿನ್ನೆಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಮಯಾವಕಾಶ ದೊರಕಿದ್ದು  ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸೋಮಶೇಖರ್ ಹಾಗೂ ತಂಡ ಅತ್ಯುತ್ತಮ ಕಾರ್ಯ ಮಾಡುತ್ತಿದೆ . ಬಿಇಒ ಸೋಮಶೇಖರ್ ಮಾತನಾಡಿ ತಾಲ್ಲೂಕಿನ 390 ಪ್ರೌಢಶಾಲಾ ವಿಷಯವಾರು ಶಿಕ್ಷಕರು ದಿನದ 12 ತಾಸು ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಮಾಡುತ್ತಿದ್ದು ವಿದ್ಯಾರ್ಥಿಗಳ ಸಮಸ್ಯೆ ಗೆ ಉತ್ತರ ನೀಡುತ್ತಿದ್ದು ಅನೇಕರು ಇದರ ಲಾಭ ಪಡೆಯುತ್ತಿದ್ದಾರೆಂದರು.

Advertisement

Udayavani is now on Telegram. Click here to join our channel and stay updated with the latest news.

Next