Advertisement

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

02:13 AM May 05, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಈರುಳ್ಳಿ ರಫ್ತು ನಿಷೇಧವನ್ನು ಹಿಂಪಡೆದಿದೆ. ಆದರೆ ಕನಿಷ್ಠ ರಫ್ತು ದರ(ಎಂಇಪಿ)ವನ್ನು ಪ್ರತೀ ಬಟನ್‌ 45,000 ರೂ.ಗೆ ನಿಗದಿಪಡಿಸಿದೆ. ಶುಕ್ರವಾರ ರಾತ್ರಿ ಸರಕಾರವು ರಫ್ತು ಮೇಲೆ ಶೇ.40ರಷ್ಟು ಸುಂಕ ಕೂಡ ವಿಧಿಸಿದೆ. 2023ರ ಡಿಸೆಂಬರ್‌ 8ರಂದು ಭಾರತ ಸರಕಾರವು ಮಾ. 31ರ ವರೆಗೂ ಈರುಳ್ಳಿ ರಫ್ತು ಮೇಲೆ ನಿಷೇಧ ಹೇರಿತ್ತು. ಕೇಂದ್ರ ಸರಕಾರದ ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳ ಪ್ರಕಾರ, 2023-24ರ ಅವಧಿಯಲ್ಲಿ 254.73 ಲಕ್ಷ ಟನ್‌ ಈರುಳ್ಳಿ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ, ಇದು ಕಡಿಮೆಯಾಗಿದೆ. ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಈರುಳ್ಳಿ ಬೆಳೆ ಕುಂಠಿತವಾಗಿದ್ದೆ ಇದಕ್ಕೆ ಕಾರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next