Advertisement
ಅತ್ಯುನ್ನತ ದರ್ಜೆಯ (ಫ್ಯಾಗ್‌ಶಿಪ್) ಫೋನ್‌ಗಳಲ್ಲಿ, ಒನ್‌ಪ್ಲಸ್ ಕಂಪನಿ ತನ್ನದೇ ಆದ ಸ್ಥಾನ ಗಳಿಸಿದೆ. 80 ಸಾವಿರದಿಂದ 1 ಲಕ್ಷ ರೂ. ವರೆಗೂ ಇದ್ದ ಫ್ಲ್ಯಾಗ್‌ಶಿಪ್ ಮೊಬೈಲ್ ಗಳಲ್ಲಿರುವ ತಾಂತ್ರಿಕತೆಯನ್ನು 20 ಸಾವಿರಕ್ಕೆ ನೀಡಲು ಆರಂಭಿಸಿದ್ದು ಒನ್‌ಪ್ಲಸ್. ಈಗ, ಸರಾಸರಿ 50 ಸಾವಿರಕ್ಕೆ ಅದರ ದರ ಬಂದು ನಿಂತಿದೆ. ಅತ್ಯುನ್ನತ ದರ್ಜೆಯ ಫೋನ್‌ಗಳನ್ನು, ಕಡಿಮೆ ದರಕ್ಕೆ ನೀಡುತ್ತಿರುವ ಹೆಗ್ಗಳಿಕೆ ಈಗಲೂ ಅದಕ್ಕಿದೆ. ಒನ್‌ಪ್ಲಸ್‌ನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಒನ್‌ಪ್ಲಸ್ 8 ಪ್ರೊ ಮತ್ತು ಒನ್‌ಪ್ಲಸ್ 8 ಮಾದರಿಗಳು ಬಿಡುಗಡೆಯಾಗಿದ್ದು, ಮೇ 29ರಿಂದ ಅಮೆಜಾನ್. ಇನ್ ಮತ್ತು ಒನ್‌ಪ್ಲಸ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿವೆ. ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದೆ.
Related Articles
Advertisement
ವೈರ್‌ಲೆಸ್ ಚಾರ್ಜರ್: ಈ ಮೊಬೈಲ್ 4510 ಎಂಎಎಚ್ ಬ್ಯಾಟರಿ ಹೊಂದಿದೆ. ವೈರ್‌ಲೆಸ್ ಚಾರ್ಜರ್ ಸೌಲಭ್ಯ ಹೊಂದಿರು ವುದು ಇದರ ವಿಶೇಷ. ಇದು, ಶೇ.50ರಷ್ಟು ಬ್ಯಾಟರಿಯನ್ನು 30 ನಿಮಿಷದಲ್ಲಿ ಚಾರ್ಜ್ ಮಾಡುತ್ತದೆ. ಅದಲ್ಲದೇ ಮಾಮೂಲಿ ವೈರ್ ಸಹಿತ ಚಾರ್ಜರ್ ಸಹ ಇದೆ. ಇದು ಶೇ.50ರಷ್ಟು ಚಾರ್ಜನ್ನು 23 ನಿಮಿಷದಲ್ಲಿ ಮಾಡುತ್ತದೆ. ಆದರೆ, ವೈರ್‌ಲೆಸ್ ಚಾರ್ಜರ್ ಅನ್ನು, ಗ್ರಾಹಕರು ಪ್ರತ್ಯೇಕವಾಗಿ ಖರೀದಿಸಬೇಕು! ಆಡಿಯೊ ಪ್ರಿಯ ರಿಗಾಗಿ, ಮೊಬೈಲ್‌ನಲ್ಲಿ ಎರಡು ಸ್ಪೀಕರ್ ಇವೆ. ಡಾಲ್ಬಿ ಅಟೂಸ್ ಸೌಂಡ್ ಇದೆ.
ಒನ್ ಪ್ಲಸ್ 8: ಇದು 8 ಪ್ರೊಗಿಂತ ಸ್ವಲ್ಪ ಕಡಿಮೆ ವಿಶೇಷಣಗಳನ್ನು ಹೊಂದಿರುವ ಮಾಡೆಲ್, ಮೂರು ಆವೃತ್ತಿಗಳಲ್ಲಿ ಲಭ್ಯವಾಗಲಿದೆ. 6 ಜಿಬಿ + 128 ಜಿಬಿ (42000 ರೂ.), 8 ಜಿಬಿ+ 128 ಜಿಬಿ (45000 ರೂ.) ಮತ್ತು 12 ಜಿಬಿ+ 256 ಜಿಬಿ. (50,000 ರೂ.).
ಕ್ಯಾಮೆರಾ: ಈ ಫೋನ್‌ನಲ್ಲಿಯೂ ಸ್ನಾಪ್ ಡ್ರ್ಯಾಗನ್‌ನ 865 ಹೊಚ್ಚ ಹೊಸದಾದ ಫ್ಲಾಗ್‌ಶಿಪ್ ಪ್ರೊಸೆಸರ್ ಇದೆ. ಈ ಮೊಬೈಲ್, ಹಿಂಬದಿಯಲ್ಲಿ ಮೂರು ಕ್ಯಾಮೆರಾ ಹೊಂದಿದೆ. 48 ಮೆ.ಪಿ. ಸೋನಿ ಐಎಂಎಕ್ಸ್ 586 ಸೆನ್ಸರ್ ಇರುವ ಮುಖ್ಯ ಕ್ಯಾಮೆರಾ, 16 ಮೆ.ಪಿ. ವೈಡ್ ಆ್ಯಂಗಲ್ಸ… ಲೆನ್ಸ್ ಮತ್ತು 2 ಮೆ.ಪಿ. ಸೂಕ್ಷ್ಮ ಲೆನ್ಸ್ಗಳ ಉಪಕ್ಯಾಮೆರಾ ಹೊಂದಿದೆ. ಸೆಲ್ಫೀಗೆ 16 ಮೆಗಾ ಪಿಕ್ಸಲ್ 1 ಸೋನಿ ಐಎಂಎಕ್ಸ್ 471 ಲೆನ್ಸ್ ಇದೆ. ಅಂಡ್ರಾಯ್ಡ್ 10 ಇದ್ದು, ಇದಕ್ಕೆ ಒನ್‌ಪ್ಲಸ್‌ನ ಪ್ರಸಿದಟಛಿ ಆಕ್ಸಿಜನ್ ಕಾರ್ಯಾಚರಣೆ ವ್ಯವಸ್ಥೆಯನ್ನು ಬೆಸೆಯಲಾಗಿದೆ.
ಪರದೆ: ಇದು 6.55 ಇಂಚಿನ ಅಮೋಲೆಡ್ ಫುಲ್ ಎಚ್‌ಡಿ ಪ್ಲಸ್ ಪರದೆ ಹೊಂದಿದೆ. 90 ಹಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಪರದೆಯ ಮಧ್ಯದಲ್ಲಿ, ಮುಂಬದಿ ಕ್ಯಾಮೆರಾ ಲೆನ್ಸ್ ಇರುವ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ. ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಸಹ ಇದೆ. ಬ್ಯಾಟರಿ: 8 ಮತ್ತು 8 ಪ್ರೊ ಎರಡೂ ಒನ್‌ಪ್ಲಸ್‌ನ ಮೊದಲ 5ಜಿ ನೆಟ್ವರ್ಕ್ ಫೋನ್ ಗಳು ಎಂಬುದು ಗಮನಾರ್ಹ. ಆದರೆ, ಭಾರತದಲ್ಲಿ ಇನ್ನೂ 5ಜಿ ನೆಟ್ವರ್ಕ್ ಲಭ್ಯವಿಲ್ಲ. ಇದರ ಬ್ಯಾಟರಿ ಎಷ್ಟು ಎಂಬ ಪ್ರಶ್ನೆ ಬಂದೇ ಬರುತ್ತದೆ. ಇದು 4300 ಎಂಎಎಚ್ ಬ್ಯಾಟರಿ ಹೊಂದಿದ್ದು, ಟೈಪ್ ಸಿ ಚಾರ್ಜಿಂಗ್ ಫೋರ್ಟ್ ಹೊಂದಿದೆ. ಇದಕ್ಕೆ ಒನ್‌ಪ್ಲಸ್‌ನ ವಾರ್ಪ್ ಚಾರ್ಜರ್ ಇದೆ. ಇದು ಕೇವಲ 22 ನಿಮಿಷ ದಲ್ಲಿ, ಶೇ. 50ರಷ್ಟು ಬ್ಯಾಟರಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ.
* ಕೆ.ಎಸ್. ಬನಶಂಕರ ಆರಾಧ್ಯ