Advertisement
ಇಲ್ಲಿನ ವಿನೋಬಾ ನಗರದಲ್ಲಿ ಭಾನುವಾರ ಅಕ್ಷಯ ಸಾಗರ ಸೌಹಾರ್ದ ಸಹಕಾರಿ ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ನಿರ್ಮಿಸಲಾಗಿರುವ ಅಕ್ಷಯ ಬೆಳ್ಳಿಭವನ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
Related Articles
Advertisement
ಶ್ರೀಶೈಲಪೀಠದ 1008 ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜಾತಿ, ಲಿಂಗ, ವರ್ಣ, ವರ್ಗ ಸಮಾನತೆಗಿಂತ ಆರ್ಥಿಕ ಸಮಾನತೆ ಅತಿಮುಖ್ಯವಾಗಿದೆ. ಎಲ್ಲ ರಂಗಗಳು ಸಕ್ರಿಯಗೊಳ್ಳಬೇಕಾದರೆ ಆರ್ಥಿಕ ಸಮಾನತೆ ಮೊದಲು ಬರಬೇಕು. ದೇಶದಲ್ಲಿ ಆರ್ಥಿಕ ಸಮಾನತೆ ತರುವಲ್ಲಿ ಸಹಕಾರಿ ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಶ್ರೀಮಂತರಿಂದ ಹಣವನ್ನು ಠೇವಣಿಯಾಗಿ ಪಡೆದು, ಬಡವರಿಗೆ ಸಾಲ ರೂಪದಲ್ಲಿ ನೀಡಿ ಅವರಲ್ಲಿ ಆರ್ಥಿಕ ಶಕ್ತಿ ತುಂಬುವ ಕೆಲಸ ಸಹಕಾರಿ ಕ್ಷೇತ್ರ ಮಾಡುತ್ತಿದೆ. ಬೆಳ್ಳಿಹಬ್ಬದಂತಹ ಸಂದರ್ಭದಲ್ಲಿ ಸುಸಜ್ಜಿತ ಭವನ ಸಮಾಜಕ್ಕೆ ನೀಡುತ್ತಿರುವುದು ಅಭಿನಂದಾರ್ಹ ಸಂಗತಿ ಎಂದು ಹೇಳಿದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಬದಲಾದ ದಿನಮಾನಗಳಲ್ಲಿ ಸೌಹಾರ್ದತೆ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತಾನೊಬ್ಬ ಸುಖವಾಗಿದ್ದರೆ ಸಾಕು ಎನ್ನುವ ಯೋಚನೆ ಜನರ ಮನಸ್ಸಿನಲ್ಲಿದೆ. ಎಲ್ಲರೂ ಚೆನ್ನಾಗಿರಬೇಕು ಎಂದು ಬಯಸುವುದು ಸೌಹಾರ್ದ ಸಹಕಾರಿ ಸಂಸ್ಥೆಗಳು ಎನ್ನುವುದು ಗಮನಾರ್ಹ ಸಂಗತಿ. ಅಕ್ಷಯ ಸಾಗರ ಸೌಹಾರ್ದತೆ ಮನೋಭಾವ ಬಿತ್ತುವ ಕೆಲಸ ಮಾಡಿಕೊಂಡು ಬರುತ್ತಿದೆ. ಇಪ್ಪತ್ತೈದು ವರ್ಷಗಳ ನೆನಪಿಗಾಗಿ ಅತ್ಯಂತ ಸುಂದರವಾದ ಬೆಳ್ಳಿಭವನ ನಿರ್ಮಿಸಿರುವುದು ಸಂಸ್ಥೆಯ ಆರ್ಥಿಕ ದೃಢತೆಗೆ ಸಾಕ್ಷಿಯಾಗಿದೆ ಎಂದರು.
ವೇದಿಕೆಯಲ್ಲಿ ಮಳಲಿಮಠದ ಶ್ರೀಗಳು, ಜಡೆಮಠದ ಶ್ರೀಗಳು, ಕೋಣಂದೂರು ಬ್ರಹನ್ಮಠದ ಶ್ರೀಗಳು, ಮೂಲೆಗದ್ದೆ ಮಠದ ಶ್ರೀಗಳು, ಕ್ಯಾಸನೂರು ಮಠದ ಶ್ರೀಗಳು, ಮಾಜಿ ಸಚಿವ ಹರತಾಳು ಹಾಲಪ್ಪ, ನಂಜನಗೌಡ್ರು, ಎ.ಆರ್.ಪ್ರಸನ್ನಕುಮಾರ್, ಎಚ್.ಬಿ..ಮಲ್ಲಿಕಾರ್ಜುನ ಹಕ್ರೆ, ಬಿ.ಎ.ಇಂದೂಧರ ಗೌಡ, ಚಂದ್ರಶೇಖರ್ ನಾಗಭೂಷಣ್ ಕಲ್ಮನೆ, ಎಂ.ಎಚ್.ಗೌಡ್ರು, ಬಸಪ್ಪ ಗೌಡ್ರು ಕೆರೋಡಿ, ಜಗದೀಶ್ ಒಡೆಯರ್, ಎಂ.ಎಸ್.ಗೌಡರ್ ಇನ್ನಿತರರು ಹಾಜರಿದ್ದರು. ನಂದಿನಿ ಬಸವರಾಜ್ ಪ್ರಾರ್ಥಿಸಿದರು. ಅಕ್ಷಯಸಾಗರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಜಿ.ದಿನೇಶ್ ಬರದವಳ್ಳಿ ಸ್ವಾಗತಿಸಿದರು. ಟಿ.ಡಿ.ಮೇಘರಾಜ್ ಪ್ರಾಸ್ತಾವಿಕ ಮಾತನಾಡಿದರು. ಲೋಕನಾಥ್ ಬಿಳಿಸಿರಿ ವಂದಿಸಿದರು. ಸಮನ್ವಯ ಕಾಶಿ ನಿರೂಪಿಸಿದರು. ನಂತರ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.