Advertisement
ಉಡುಪಿ ಮತ್ತು ಮಂಗಳೂರು ರೈಲು ನಿಲ್ದಾಣ, ಬಜಪೆ ವಿಮಾನ ನಿಲ್ದಾಣ, ವಿವಿಧ ಬಸ್ ನಿಲ್ದಾಣಗಳಲ್ಲಿ ಸಂತರು ಇಳಿದ ತತ್‌ಕ್ಷಣ ಧರ್ಮ ಸಂಸದ್‌ನ ವಾಹನ ಅವರಿಗೆ ಮೀಸಲಾದ ವಸತಿ ಸ್ಥಳಕ್ಕೆ ಅವರನ್ನು ಕರೆದುಕೊಂಡು ಬರಲಿದೆ. ಮತ್ತೆ ಅಲ್ಲಿಂದ ಧರ್ಮ ಸಂಸದ್ ವೇದಿಕೆಗೂ ಕರೆದೊಯ್ಯ ಲಾಗುತ್ತದೆ. ಎಲ್ಲ ಕಾರ್ಯ ಕ್ರಮಗಳು ಮುಗಿದ ಅನಂತರ ಮರಳಿ ನಿಲ್ದಾಣಗಳಿಗೆ ಬಿಡುವ ವ್ಯವಸ್ಥೆ ಯನ್ನೂ ಮಾಡಲಾಗಿದೆ. ಎಲ್ಲವೂ ಉಚಿತ ವಾಗಿ ನಡೆಯುತ್ತವೆ. ಕೆಲ ಸಾಧುಗಳು ಬರುವ ಸಮಯ ವ್ಯತ್ಯಯವಾಗಬಹು ದಾದ ಹಿನ್ನೆಲೆಯಲ್ಲಿ ದಿನವಿಡಿ ಬಸ್, ರೈಲು, ವಿಮಾನ ನಿಲ್ದಾಣಗಳಲ್ಲಿ ಸಂಘಟನೆಯ ಐವರು ಕಾರ್ಯಕರ್ತರು ಠಿಕಾಣಿ ಹೂಡಲಿದ್ದಾರೆ.
ಧರ್ಮಸಂಸದ್ ಸೇವೆಗಾಗಿಯೇ ಜಿಲ್ಲೆಯ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಉಚಿತವಾಗಿ ತಮ್ಮ ವಾಹನಗಳನ್ನು ನೀಡಿದ್ದಾರೆ. ಈ ವಾಹನಗಳು ರೋಯಲ್ ಗಾರ್ಡನ್, ಸಂತರು ತಂಗುವ ಪ್ರದೇಶಗಳಲ್ಲಿ ಇರುತ್ತವೆ. ಚತುಷಕ್ರ, ಟಿಟಿ ವಾಹನಗಳಿವೆ. ಕೆಲವರು ನೀಡಿದ ವಾಹನಕ್ಕೆ ಅವರದ್ದೇ ಚಾಲಕರು ಇದ್ದಾರೆ. ಕೆಲವು ವಾಹನಗಳನ್ನು ಧರ್ಮಸಂಸದ್ ಕಾರ್ಯ ಕರ್ತರು ಚಲಾಯಿಸಲಿದ್ದಾರೆ. 26ರ ವರೆಗೆ ನಿರಂತರವಾಗಿ ಈ ವಾಹನಗಳು ಸೇವೆಯಲ್ಲಿ ತೊಡಗಿಕೊಳ್ಳಲಿವೆ. 10 ಮಂದಿ ಪ್ರಮುಖರು, 80-100 ಮಂದಿ ಪ್ರಬಂಧಕರು ಈ ಸ್ವಯಂ ಸೇವಾ ಕಾರ್ಯದಲ್ಲಿ ತೊಡಗಿ ಕೊಳ್ಳಲಿದ್ದಾರೆ ಎಂದು ಧರ್ಮ ಸಂಸದ್‌ನ “ಯಾಥಾ-ಯಾಥಾ’ ಸೇವಾ ಪ್ರಮುಖ್ ಸುಮಿತ್ ಶೆಟ್ಟಿ ಬೈಲೂರು ತಿಳಿಸಿದ್ದಾರೆ.