Advertisement

ಕಣಿವೆ ರಾಜ್ಯದಲ್ಲಿ ಮತ್ತೂಬ್ಬ ಹಿಜ್ಬುಲ್‌ ಉಗ್ರನ ಹತ್ಯೆ

08:40 AM Aug 05, 2017 | Team Udayavani |

ಶ್ರೀನಗರ: ಗಡಿಯಲ್ಲಿ ಪಾಕಿಸ್ಥಾನ ಉಗ್ರರ ಉಪಟಳ ಮುಂದುವರಿದಿದೆ. ಮೊನ್ನೆಯಷ್ಟೇ ಲಷ್ಕರ್‌ ಸಂಘಟನೆಯ ಕಮಾಂಡರ್‌ ಸೇರಿ ಇಬ್ಬರನ್ನು ಬಲಿ ಪಡೆದುಕೊಂಡಿದ್ದ ಗಡಿ ಭದ್ರತಾ ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಶುಕ್ರವಾರ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗೆ ಸೇರಿದ ಇನ್ನೊಬ್ಬ ಉಗ್ರನನ್ನು ಹೊಡೆದುರುಳಿಸಿದೆ.

Advertisement

ಗುರುವಾರ ರಾತ್ರಿಯಿಂದ ಅನಂತನಾಗ್‌ ಜಿಲ್ಲೆಯ ಕನಿಬಾಲ್‌ ಬಿಜ್ಬೆಹರಾದಲ್ಲಿ ಪೊಲೀಸರು, ಸೇನೆ ಹಾಗೂ ಸಿಆರ್‌ಪಿಎಫ್ಸಿ ಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹತ್ಯೆಗೈಯ್ಯಲಾಗಿದೆ. ಯಾವರ್‌ ಎಂಬಾತ ಹತ್ಯೆಯಾದವ. ಕಾರ್ಯಾಚರಣೆ ಸ್ಥಳದಲ್ಲಿ ಇನ್ನೂ ಇಬ್ಬರು ಉಗ್ರರು ಇದ್ದಾರೆನ್ನುವ ಮಾಹಿತಿ ಇದ್ದು, ಅಡಗಿ ಕುಳಿತಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. ಉಗ್ರನ ಬಳಿ ಇದ್ದ ಶಸ್ತ್ರಾಸ್ತ್ರ, ಮೊಬೈಲ್‌ ಹಾಗೂ ಬೈಕ್‌ ವಶಪಡಿಸಿಕೊಳ್ಳಲಾಗಿದೆೆ. ಆತನ ಬಳಿ ಇದ್ದ ಮೊಬೈಲ್‌ ಮೂಲಕ ಯಾವ ಸಂಘಟನೆಗೆ ಸೇರಿದವ ಎಂದು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ರಾರೀತ ಯಾವರ್‌?: ಅನಂತನಾಗ್‌ ಪ್ರದೇಶಗಳಲ್ಲಿ ಈ ಹಿಂದೆ ನಡೆದ ಅನೇಕ ಕಲ್ಲುತೂರಾಟ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಆರೋಪವಿದೆ. ಅನೇಕ ವರ್ಷಗಳಿಂದ ಈ ಭಾಗದಲ್ಲಿ ಕಲ್ಲುತೂರಿ ತಲೆಮರೆಸಿಕೊಂಡಿರುತ್ತಿದ್ದ. ಅಷ್ಟಕ್ಕೂ ಈತ ಅನುಭವಿ ಉಗ್ರನಲ್ಲ. ಜೂನ್‌ ಮೊದಲ ವಾರದಲ್ಲಷ್ಟೇ ಸಂಘಟನೆಗೆ ಸೇರಿಕೊಂಡು, ಸ್ವಯಂಚಾಲಿತ ರೈಫ‌ಲ್‌ ಹೊಂದಿದ್ದ. ಇತ್ತೀಚೆಗೆ ಆತನಿಂದ ರೈಫ‌ಲ್‌ ವಶಪಡಿಸಿಕೊಳ್ಳಲಾಗಿತ್ತು. ಯಾವರ್‌ ಯಾವತ್ತೂ ಎರಡೆರಡು ಲೇಯರ್‌ನ ಉಡುಪುಗಳನ್ನೇ ಧರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕತಾವಾದಿಗಳ ಎನ್‌ಐಎ ಕಸ್ಟಡಿ ವಿಸ್ತರಣೆ
ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹುರಿಯತ್‌ ನಾಯಕ ಸಯ್ಯದ್‌ ಅಲಿ ಶಾ ಗಿಲಾನಿ ಅಳಿಯ ಅಲ್ತಾಫ್ ಅಹಮ್ಮದ್‌ ಶಾ ಹಾಗೂ ಇತರೆ ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಉದ್ದೇಶದಿಂದ ಅವರ ಎನ್‌ಐಎ ಕಸ್ಟಡಿ ಅವಧಿಯನ್ನು 10 ದಿನಗಳ ಕಾಲ ವಿಸ್ತರಿಸಿ ವಿಶೇಷ ಕೋರ್ಟ್‌ ಆದೇಶ ಹೊರಡಿಸಿದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇತ್ತೀಚಿಗೆ ಅಲ್ತಾಫ್ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿತ್ತು.

ಉಗ್ರರು ಭಾರತದ ಗಡಿಯೊಳಗೆ ನುಸುಳಲು ಅವಕಾಶ ಮಾಡಿಕೊಡುವಲ್ಲಿ ಪಾಕಿಸ್ಥಾನ ನಿರಂತರ ಪ್ರಯತ್ನ ನಡೆಸಿದೆ. ಆದರೆ ಸಾವು- ನೋವಿನ ಸಂಖ್ಯೆ ಪಾಕ್‌ ನೆಲದಲ್ಲಿಯೇ ಗಣನೀಯವಾಗಿ ನಡೆದಿದೆ.
– ಅರುಣ್‌ ಜೇಟ್ಲಿ, ರಕ್ಷಣಾ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next