Advertisement
ಪಂದ್ಯ ಮುಗಿದ ಕೂಡಲೇ ತುಂಬಿಕೊಂಡಿದ್ದ ಕಣ್ಣುಗಳನ್ನು ಒರೆಸಲೂ ಹೋಗದೆ ನಾಯಕ ರೋಹಿತ್ ಶರ್ಮ ಹೊರಹೋದರು. ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಗೆ ಹೋಗಲಿಲ್ಲ. ತರಬೇತುದಾರ ರಾಹುಲ್ ದ್ರಾವಿಡ್ ಒಬ್ಬರೇ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
Related Articles
Advertisement
ವೇಗಿ ಮೊಹಮ್ಮದ್ ಸಿರಾಜ್ ಮೈದಾನದಲ್ಲೇ ಅತ್ತರು. ಅದು ಸಹಜವೇ ಆಗಿತ್ತು. ವಿಶ್ವಕಪ್ ಗೆಲ್ಲುವುದು ಪ್ರತೀ ಆಟಗಾರನ ಕನಸು. ಅದಕ್ಕಾಗಿ ಸಾಧ್ಯವಾದ ಎಲ್ಲವನ್ನೂ ಮಾಡಿ ಕಡೆಗೆ ಅಸಹಾಯಕರಾದಾಗ ಕಣ್ಣೀರೇ…
ಪ್ರಧಾನಿ ಮೋದಿ ಸಾಂತ್ವನಸೋತ ಭಾರತೀಯ ತಂಡದ ಪರಿಸ್ಥಿತಿ ಹೇಗಿರಬಹುದು ಎಂಬ ಅರಿವಿದ್ದೇ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ಕೊಠಡಿಯನ್ನು ಪ್ರವೇಶಿಸಿದರು. ಉದ್ವೇಗಕ್ಕೊಳಗಾಗಿದ್ದ ವೇಗಿ ಮೊಹಮ್ಮದ್ ಶಮಿಯನ್ನು ಎದೆಗೊರಗಿಸಿಕೊಂಡು ಸಾಂತ್ವನ ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಶಮಿ, ತಂಡದ ಬೆಂಬಲಕ್ಕೆ ನಿಂತಿರುವ ಎಲ್ಲ ಭಾರತೀಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿ ನಮಗೆ ಸಮಾಧಾನ ಹೇಳಿದ ಪ್ರಧಾನಿ ಮೋದಿ ಎಲ್ಲರ ಉತ್ಸಾಹವನ್ನು ಬಡಿದೆಬ್ಬಿಸಿದರು. ಅವರಿಗೂ ಧನ್ಯವಾದ, ನಾವು ಮತ್ತೆ ತಿರುಗಿ ಬೀಳುತ್ತೇವೆ ಎಂದಿದ್ದಾರೆ.
ಮೋದಿಗೆ ರವೀಂದ್ರ ಜಡೇಜ ಕೂಡ ಕೃತಜ್ಞತೆ ಅರ್ಪಿಸಿದ್ದಾರೆ. ನಮ್ಮೆಲ್ಲರ ಹೃದಯಗಳು ಒಡೆದುಹೋಗಿವೆ. ಆದರೆ ಜನರ ಬೆಂಬಲ ನಮ್ಮನ್ನು ಮುಂದಕ್ಕೆ ನಡೆಸುತ್ತಿದೆ. ಪ್ರಧಾನಿ ಮೋದಿ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿದ್ದು ವಿಶೇಷವಾಗಿತ್ತು, ಸ್ಫೂರ್ತಿದಾಯಕವಾಗಿತ್ತು ಎಂದು ಜಡೇಜ ಟ್ವೀಟ್ ಮಾಡಿದ್ದಾರೆ.