ಹೈದರಾಬಾದ್: ನಿರ್ಮಾಣ ಹಂತದ ಚರ್ಚ್ ನ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ ಓರ್ವ ವಲಸೆ ಕಾರ್ಮಿಕ ಸೇರಿದಂತೆ ಹತ್ತು ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಕೋಹಿರ್‌ನಲ್ಲಿ ನಿರ್ಮಾಣಗೊಳ್ಳುತಿದ್ದ ಚರ್ಚ್ ನ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಗುಂಪು ಸ್ಲ್ಯಾಬ್ ಕಾರ್ಯ ನಡೆಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಅವಘಡ ಸಂಭವಿಸಿದೆ.
ಈ ವೇಳೆ ಸ್ಲ್ಯಾಬ್ ಕಾರ್ಯ ನಡೆಸುತ್ತಿದ್ದ ಕೆಳ ಭಾಗದಲ್ಲಿ ಕೆಲ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ ಸ್ಲ್ಯಾಬ್ ಕುಸಿದು ಬೀಳುವ ವೇಳೆ ಕೆಳಗಡೆ ಇದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು ಈ ವೇಳೆ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ ಎನ್ನಲಾಗಿದೆ ಅಲ್ಲದೆ ಸುಮಾರು ಹತ್ತು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ ಗಾಯಗೊಂಡರವರನ್ನು ಹತ್ತಿರದ ಆಸ್ಪತೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮೃತ ವಲಸೆ ಕಾರ್ಮಿಕ ಮ್ಯಾನ್ಮಾರ್‌ಗೆ ಸೇರಿದವ ಎನ್ನಲಾಗಿದ್ದು ಈ ಕುರಿತು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಹೀರೋ ಶಕ್ತಿ ಮೋಟರ್ಸ್; “ಹಾರ್ಲೆ ಡೇವಿಡ್‌ಸನ್ ಎಕ್ಸ್-440′ ಮಾರುಕಟ್ಟೆಗೆ ಬಿಡುಗಡೆ