Advertisement
“ಇದು ಅನ್‌ಕಟ್ ಸಿನಿಮಾ. ಒಂದೇ ದಿನ ಚಿತ್ರೀಕರಿಸಬೇಕೆಂದು ಆಲೋಚಿಸಿದ್ದೆವು. ಆದರೆ, ಅದು ಕಷ್ಟ ಎಂದು ಗೊತ್ತಾಗಿ 12 ರಿಂದ 15 ದಿನ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ ಚಿತ್ರದ ಹಾಡುಗಳನ್ನು ಜನ ಇಷ್ಟಪಟ್ಟಿದ್ದಾರೆ. ಚಿತ್ರ ಇಂದು ಕರ್ನಾಟಕದಲ್ಲಿಬಿಡುಗಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇಟಲಿ, ಜರ್ಮನ್, ಯುಎಸ್‌ಎನಲ್ಲೂ ತೆರೆಕಾಣಲಿದೆ’ ಎಂದು ವಿವರ ನೀಡಿದರು
ಚಂದ್ರಶೇಖರ್. ಚಿತ್ರವನ್ನು ವಿಕ್ರಮ್ ಯೋಗಾನಂದ್ ನಿರ್ದೇಶನ ಮಾಡಿದ್ದಾರೆ. ಇವರಿಗಿದು ಚೊಚ್ಚಲ ಸಿನಿಮಾ. ನಿರ್ದೇಶಕರು ಕೂಡಾ ಆರಂಭದಲ್ಲಿ ಒಂದೇ ದಿನದಲ್ಲಿ ಈ ಸಿನಿಮಾವನ್ನು ಮಾಡಿ ಮುಗಿಸಬೇಕೆಂದುಕೊಂಡಿದ್ದರಂತೆ. ಆದರೆ, ಚಿತ್ರ ಹೆಚ್ಚು ಸೂಕ್ಷ್ಮ
ಅಂಶಗಳನ್ನು ಬಯಸಿದ್ದರಿಂದ ಹೆಚ್ಚು ದಿನ ಚಿತ್ರೀಕರಿಸಿದರಂತೆ. ಬೆಳಗ್ಗೆ 6 ರಿಂದ 8 ಗಂಟೆವರೆಗೆ ನಡೆಯುವ ಕಥೆಯಾಗಿದ್ದು, ಅದೇ ಲೈಟಿಂಗ್‌ನಲ್ಲಿ ಚಿತ್ರೀಕರಿಸಲಾಗಿದೆಯಂತೆ. 6 ರಿಂದ 8 ಗಂಟೆವರೆಗಿನ ಸಮಯದಲ್ಲಿ ಹುಡುಗಿಯೊಬ್ಬಳ ಜೀವನದಲ್ಲಿ ಏನೇನು ನಡೆಯುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಚಿತ್ರದಲ್ಲಿ ಸಿಂಧು ಲೋಕನಾಥ್ ನಾಯಕಿ.
ಕೆಲಸಕ್ಕೆಂದು ನಾವು ಬೇಗ ಮನೆ ಬಿಡುತ್ತೇವೆ. ಆದರೆ, ಕೆಲವೊಮ್ಮೆ ದಾರಿ ಮಧ್ಯೆ ಏನೇನೋ ತೊಂದರೆಗಳು ಎದುರಾಗುತ್ತವೆ. ಆ
ತೊಂದರೆಗಳನ್ನೆಲ್ಲಾ ದಾಟಿ ತನ್ನ ಗುರಿ ತಲುಪುತ್ತಾಳಾ ಎಂಬುದು ಇಲ್ಲಿನ ಕುತೂಹಲಕರ ಅಂಶ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಸಿಂಧು. ಚಿತ್ರದಲ್ಲಿ ನಟಿಸಿದ ಶಂಕರ್ ನಾರಾಯಣ್, ಗಾಯಕರಾದ ಸಿಂಚನಾ ದೀಕ್ಷಿತ್, ಸ್ಪರ್ಶ. ಸಂಗೀತ ನಿರ್ದೇಶಕ ಅಭಿಲಾಷ್
ಗುಪ್ತಾ ಕೂಡಾ ತಮ್ಮ ಅನುಭವ ಹಂಚಿಕೊಂಡರು.