ಮೈಸೂರು : ನಗರದ ಬಂಡಿಪಾಳ್ಯ ಸಮೀಪ ಭಾನುವಾರ ಸಂಜೆ ಭಾರತ್ ಜೋಡೋ ವೇದಿಕೆ ಕಾರ್ಯಕ್ರಮದ ವೇಳೆ ಭಾರಿ ಮಳೆ ಸುರಿದಿದ್ದು, ಮಳೆಯಲ್ಲಿಯೇ ನಿಂತು ಸಾರ್ವಜನಿಕರನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾತನಾಡಿದರು.
ದ್ವೇಷದ ವಿರುದ್ಧ ಭಾರತವನ್ನು ಒಗ್ಗೂಡಿಸುವ, ನಿರುದ್ಯೋಗ ಮತ್ತು ಬೆಲೆ ಏರಿಕೆಯ ವಿರುದ್ಧ ಮಾತನಾಡುವುದನ್ನು ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ: ಹುಣಸೂರಿನಿಂದ 6 ಸಾವಿರ ಮಂದಿ ಭಾಗಿ
”ಇಚ್ಚಾಶಕ್ತಿ ಇರುವ ನಾಯಕ ಯಾವ ಅಡ್ಡಿಗೂ ಅಂಜಿ ಓಡುವುದಿಲ್ಲ.ಭಾರತ್ ಜೋಡೋ ವೇದಿಕೆ ಕಾರ್ಯಕ್ರಮದ ನಡುವೆ ಧಾರಾಕಾರ ಮಳೆ,ಜನರಿಗಿರುವ ಮಳೆ ನನಗೂ ಇರಲಿ ಎಂಬ ಧೀಮಂತಿಕೆಯ ಗುಣ ರಾಹುಲ್ ಗಾಂಧಿ ಅವರದ್ದು. ಮಳೆಗೆ ಅಂಜದೆ ಕುರ್ಚಿಗಳನ್ನೇ ಛತ್ರಿಗಳನ್ನಾಗಿಸಿ ಭಾಷಣ ಆಲಿಸಿದ ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ” ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
”ದೃಢತೆ, ಸಂಕಲ್ಪ, ಇಚ್ಛಾಶಕ್ತಿ ಇರುವ ನಾಯಕನನ್ನು ಬೇರೆ ಇನ್ಯಾವ ಶಕ್ತಿಗಳಿಗೂ ತಡೆಯಲಾಗದು. ಒಗ್ಗಟ್ಟಿನೊಂದಿಗೆ ದೇಶವನ್ನು ದ್ವೇಷಮುಕ್ತ ಮಾಡುತ್ತೇವೆ ಎಂಬ ನಂಬಿಕೆ ನಮ್ಮಲ್ಲಿದೆ.ಭಾರತವನ್ನು ಒಗ್ಗೂಡಿಸಲು ಎದೆಗುಂದದೆ ಮುನ್ನುಗುತ್ತಿರುವ ರಾಹುಲ್ ಗಾಂಧಿಯವರ ಈ ಪರಿಶ್ರಮ, ಈ ಸದೃಡ ಸಂಕಲ್ಪ,ಈ ಸರಿಸಾಟಿಯಿಲ್ಲದ ಇಚ್ಛಾಶಕ್ತಿ, ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ದ್ವೇಷ ಮುಕ್ತ ಸಮಾಜಕ್ಕಾಗಿ & ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಮಾತ್ರವೇ. ಇದು ಜನಪರ ಕಾಳಜಿಯ ರಾಜಕಾರಣದ ಅತ್ಯದ್ಭುತ ಅಧ್ಯಾಯ ” ಎಂದು ಕಾಂಗ್ರೆಸ್ ವಿಡಿಯೋ ಟ್ವೀಟ್ ಮಾಡಿದೆ.