Advertisement

ಪಾಲಿಕೆ ಕಚೇರಿ ಎದುರು ಮಾ.8ರಂದು ಪೌರ ಕಾರ್ಮಿಕರ ಪ್ರತಿಭಟನೆ

12:14 PM Mar 03, 2017 | |

ಬೆಂಗಳೂರು: ಪರಿಷ್ಕೃತ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾರ್ಚ್‌ 8ರಂದು ಬೆಳಗ್ಗೆ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪಾಲಿಕೆ ಗುತ್ತಿಗೆ ಪೌರಕಾರ್ಮಿಕರ ಸಂಘ ಪ್ರತಿಭಟನೆ ಹಮ್ಮಿಕೊಂಡಿದೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಂಘದ ಮುಖಂಡ ಕೆ.ಎಸ್‌.ವಿನಯ್‌, ರಾಜ್ಯ ಸರ್ಕಾರ 2016ರ ಆಗಸ್ಟ್‌ನಲ್ಲಿ ಗುತ್ತಿಗೆ ಪೌರ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಿಸಿ 14,400 ರೂ. ಘೋಷಣೆ ಮಾಡಿತ್ತು. 2017ರ ಮಾರ್ಚ್‌ರೊಳಗೆ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ಭರವಸೆ ನೀಡಿತ್ತು.

ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಗುತ್ತಿಗೆದಾರರು ಪೌರಕಾರ್ಮಿಕರೊಂದಿಗೆ ಕೀಳಾಗಿ ವರ್ತಿಸುತ್ತಾರೆ. ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಇಎಸ್‌ಐ ಹಾಗೂ ಪಿಎಫ್ ಸೌಲಭ್ಯದಿಂದ ವಂಚಿಸಿದ್ದಾರೆ.

ಆದರೂ ಯಾವುದನ್ನೂ ಲೆಕ್ಕಿಸದೆ ಶ್ರಮಪಟ್ಟು ನಗರದ ಸ್ವತ್ಛತೆ ಮಾಡುತ್ತಿದ್ದೇವೆ. ಲೈಂಗಿಕ ಕಿರುಕುಳವನ್ನು ಸಹ ಅನುಭವಿಸಿದ್ದೇವೆ. ಕಾನೂನು ಪ್ರಕಾರ ರಚಿಸಬೇಕಾದ ಆಂತರಿಕ ದೂರು ಸಮಿತಿ ಸಹ ರಚನೆ ಆಗಿಲ್ಲ. ಆದ್ದರಿಂದ ಲೈಂಗಿಕ ದೌರ್ಜನ್ಯದ ದೂರು ನೀಡಲಾಗಿಲ್ಲ ಎಂದು ಮಹಿಳಾ ಗುತ್ತಿಗೆ ಪೌರ ಕಾರ್ಮಿಕರು  ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next