Advertisement

ಎಮ್ಮೆಮಾಡು ಮಖಾಂ ಉರೂಸ್‌ ಗೆ ಮಾ.3ರಂದು ಚಾಲನೆ

04:20 PM Feb 27, 2017 | |

ಮಡಿಕೇರಿ :  ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಸೂಫಿ ಶಹೀದ್‌ ಮತ್ತು ಸಯ್ಯಿದ್‌ ಹಸನ್‌ ಸಖಾಫ್ ಮಖಾಂ ಉರೂಸ್‌ ಮುಂದಿನ ಮಾ.3 ರಿಂದ 10ರವರೆಗೆ ನಡೆಯಲಿದೆಯೆಂದು ಜಮಾಅತ್‌ ಪ್ರಧಾನ ಕಾರ್ಯದರ್ಶಿ ಕೆ.ಎಂ. ಹುಸೈನ್‌ ಸಖಾಫಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.3ರಿಂದ 10ರ ವರೆಗೆ ಎಮ್ಮೆಮಾಡಿನ ಶಹೀದಿಯಾ ನಗರದಲ್ಲಿ ನಡೆಯುವ ಮಖಾಂ ಉರೂಸ್‌ ಆಚರಣೆ ಕುರಿತು ಮಾಹಿತಿ ನೀಡಿದರು. 

ಮಾ.3ರಂದು ಎಮ್ಮೆಮಾಡು ಜಮಾಅತ್‌ ಅಧ್ಯಕ್ಷ ಬಲಿಯತ್‌ ಕಾರಂಡ ಉಸ್ಮಾನ್‌ ಹಾಜಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಮಖಾಂ ಉರೂಸ್‌ಗೆ ಚಾಲನೆ ದೊರಕಲಿದೆ. ಸಾಮೂಹಿಕ ವಿವಾಹದೊಂದಿಗೆ ಅಂದು ರಾತ್ರಿ 7 ಗಂಟೆಗೆ ಜಲಾಲಿಯ್ಯ ರಾತೀಬ್‌ ನಡೆಯಲಿದೆಯೆಂದರು. 
ಮಾ. 4ರಂದು ಬೆಳಗ್ಗೆ 10 ಗಂಟೆಗೆ ಉಳ್ಳಾಲದ ಕಾಝಿ ಸಯ್ಯಿದ್‌ ಫ‌ಝಲ್‌ ಕೋಯಮ್ಮ ತಂšಳ್‌ ಅಲ್‌ ಬುಖಾರಿ ಕೂರತ್‌ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೇಯಾಣಿ ಮಸೀದಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ರಾತ್ರಿ 7 ಗಂಟೆಗೆ ದಿಕ್‌Å ಹಬ್ಬ ನಡೆಯಲಿದೆಯೆಂದು ತಿಳಿಸಿದರು.

ಉರೂಸ್‌ ಪ್ರಯುಕ್ತ ಮಾ.5ರಂದು ಬೆಳಗ್ಗೆ 11 ಗಂಟೆಗೆ ಸರ್ವಧರ್ಮ ಸಮ್ಮೇಳನ ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್‌ ರೆಹಮಾನ್‌ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕ  ಕೆ.ಜಿ. ಬೋಪಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸ ಲಿದ್ದಾರೆ. ಕಕ್ಕಿಂಜೆ  ಅಬ್ದುಲ್‌ ರಷೀದ್‌ ಝೈನಿ ಮುಖ್ಯ ಭಾಷಣ ಮಾಡಲಿದ್ದು, ಅರಮೇರಿ  ಕಳಂಚೇರಿ  ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಸುಂಟಿಕೊಪ್ಪ ಸೈಂಟ್‌ ಮೇರಿ ಶಾಲೆಯ ಫಾ| ಎಡ್ವರ್ಡ್‌ ವಿಲಿಯಂ  ಸಲ್ಡಾನ,  ಹಜ್‌ ಸಮಿತಿ ಸದಸ್ಯರಾದ ಅಬೂಬಕ್ಕರ್‌ ಸಿದ್ದಿಕ್‌ ಮುಂಟುಗೋಳಿ, ಜಿಲ್ಲಾಧಿಕಾರಿಗಳಾದ ಡಾ| ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಜೇಂದ್ರ$› ಪ್ರಸಾದ್‌, ಜಿಲ್ಲಾ ಬಿಜೆಪಿ ಅಧಕ್ಷರಾದ ಮನು ಮುತ್ತಪ್ಪ, ಕಾಂಗ್ರೆಸ್‌ ಪ್ರಭಾರ ಅಧ್ಯಕ್ಷ ಟಿ.ಪಿ. ರಮೇಶ್‌ ಮತ್ತಿತರ ಪ್ರಮುಖರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾ.6 ರಂದು  ಅಪರಾಹ್ನ 12 ಗಂಟೆಗೆ ಉರೂಸ್‌ ಸಮ್ಮೇಳನ ನಡೆಯಲಿದ್ದು, ಜಮಾಅತ್‌ ಅಧ್ಯಕ್ಷ ಬಿ.ಎಂ. ಉಸ್ಮಾನ್‌ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ವಕ್ಫ್ ಮಂಡಳಿ ನಿರ್ದೇಶಕರಾದ ಶಾಫಿ ಸಅದಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಮರುಲ್‌ ಉಲಮಾ ಕಾಂತಪುರಂ, ಅಖೀಲ ಭಾರತ ಸುನ್ನಿ ಜಂಇಯ್ಯತುಲ್‌ ಉಲಮಾ ಮತ್ತು ಖಾಝಿಗಳಾದ  ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌, ಮುಖ್ಯ ಅತಿಥಿಗಳಾಗಿ ಜಮಯತುಲ್‌ ಉಲಮಾದ ಪ್ರಧಾನ ಕಾರ್ಯದರ್ಶಿ ಮಹೂ¾ದ್‌ ಮುಸ್ಲಿಯಾರ್‌, ಗೃಹ ಸಚಿವ ಜಿ. ಪರಮೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಮ್‌, ಆಹಾರ ಖಾತೆ ಸಚಿವ ಯು.ಟಿ. ಖಾದರ್‌, ಶಿಕ್ಷಣ ಸಚಿವ ತನ್ವೀರ್‌ ಸೇs…, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌, ಮಾಜಿ ಮುಖ್ಯ ಮಂತ್ರಿಎಚ್‌.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಾ.7ರಂದು ಬೆಳಗ್ಗೆ ಉಮರಾ ಸಂಗಮ ಮತ್ತು ಮಧ್ಯಾಹ್ನ ಉಲಮಾ ಸಂಗಮ ಕಾರ್ಯಕ್ರಮ ನಡೆಯಲಿದೆ. ಮಾ.8ರಂದು ಮತಪ್ರವಚನ ನಡೆಯ ಲಿದ್ದು, ಮಾ.9ರಂದು ಸ್ವಲಾತ್‌ ಮಜಿÉಸ್‌, ಮಾ.10ರಂದು ಸಮಾರೋಪ ಸಮ್ಮೇಳನ ನಡೆಯಲಿದೆ ಎಂದು ಮಾಹಿತಿ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಪಿ.ಎಂ. ಇಸ್ಮಾಯಿಲ್‌ ಹಾಜಿ, ಸದಸ್ಯರಾದ ಸಯ್ಯದ್‌ ಇಲಿಯಾಸ್‌ ತಂšಳ್‌ ಮತ್ತು ಸಿ.ಎಂ. ಮಾಹಿನೆ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next