Advertisement

ಒಮಿಕ್ರಾನ್ ಎಫೆಕ್ಟ್: ಹಲವು ದೇಶಗಳಲ್ಲಿ ಗಡಿ ಬಂದ್, ಎಷ್ಟು ದೇಶಗಳಲ್ಲಿ ವೈರಸ್ ಪತ್ತೆಯಾಗಿದೆ?

02:37 PM Nov 29, 2021 | Team Udayavani |

ಟೊಕಿಯೋ: ರೂಪಾಂತರಿ ಕೋವಿಡ್ ನ ನೂತನ ವೈರಸ್ ಒಮಿಕ್ರಾನ್ ಹರಡದಂತೆ ತಡೆಯಲು ಇಸ್ರೇಲ್ ಕಠಿಣ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ಜಪಾನ್ ತನ್ನ ಗಡಿಗಳನ್ನು ಬಂದ್ ಮಾಡಿದೆ. ಇದರಿಂದಾಗಿ ಆಸ್ಟ್ರೇಲಿಯಾದ ಮೇಲೆ ಕಾರ್ಮೋಡ ಕವಿದಂತಾಗಿದೆ.

Advertisement

ಇದನ್ನೂ ಓದಿ:ಕೆ.ಎಲ್.ರಾಹುಲ್ ಕಾರಣಕ್ಕೆ ಲಕ್ನೋ ಫ್ರಾಂಚೈಸಿ ವಿರುದ್ಧ ದೂರು ನೀಡಿದ ಐಪಿಎಲ್ ತಂಡಗಳು!

ಕೋವಿಡ್ ನ ಹೊಸ ವೈರಸ್ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ಬಳಿಕ ಆಸ್ಟ್ರೇಲಿಯಾ, ಬೆಲ್ಜಿಯಂ, ಬೋಟ್ಸ್ ವಾನಾ, ಬ್ರಿಟನ್, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಜರ್ಮಿನಿ, ಹಾಂಗ್ ಕಾಂಗ್, ಇಸ್ರೇಲ್, ಇಟಲಿ ಮತ್ತು ನೆದರ್ಲ್ಯಾಂಡ್ಸ್ ನಲ್ಲಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ನೂತನ ಒಮಿಕ್ರಾನ್ ವೈರಸ್ ನ ಗಂಭೀರ ಪರಿಣಾಮದ ಬಗ್ಗೆ ತಿಳಿದುಕೊಳ್ಳಲು ಕೆಲವು ವಾರಗಳು ಬೇಕಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಒಮಿಕ್ರಾನ್ ವೈರಸ್ ಕಳವಳಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಮಂಗಳವಾರ ಮಧ್ಯರಾತ್ರಿಯಿಂದಲೇ ಜಪಾನ್ ಎಲ್ಲಾ ಗಡಿಗಳನ್ನು ಬಂದ್ ಮಾಡಿದೆ. ವಿದೇಶಿಯರ ಆಗಮನವನ್ನು ನಿರ್ಬಂಧಿಸಿದ ಮೊದಲ ದೇಶ ಜಪಾನ್ ಆಗಿರುವುದಾಗಿ ವರದಿ ವಿವರಿಸಿದೆ. ಇತರ ದೇಶಗಳಿಂದ ಜಪಾನ್ ಗೆ ಆಗಮಿಸುವ ಪ್ರಜೆಗಳಿಗೆ ಕ್ವಾರಂಟೈನ್ ಕಡ್ಡಾಯ ಎಂದು ಹೇಳಿದೆ.

Advertisement

ಜಪಾನ್ ನಲ್ಲಿ ಈವರೆಗೂ ಒಮಿಕ್ರಾನ್ ವೈರಸ್ ಪತ್ತೆಯಾಗಿಲ್ಲ. ಭಾನುವಾರ ಮಧ್ಯರಾತ್ರಿಯಿಂದ ಇಸ್ರೇಲ್ ಕೂಡಾ ಗಡಿಗಳನ್ನು ಬಂದ್ ಮಾಡಿದೆ. ಅಲ್ಲದೇ ನೂತನ ಒಮಿಕ್ರಾನ್ ವೈರಸ್ ವಿರುದ್ಧ ಹೋರಾಡಲು ಭಯೋತ್ಪಾದಕ ನಿಗ್ರಹ ಫೋನ್ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ತಿಳಿಸಿದೆ.

ಒಮಿಕ್ರಾನ್ ವೈರಸ್ ನ ಒಂದು ಪ್ರಕರಣ ಪತ್ತೆಯಾದ ಬಳಿಕ ಗಡಿಗಳನ್ನು ತೆರೆಯುವ ಬಗ್ಗೆ ಪುನರ್ ಪರಿಶೀಲನೆ ನಡೆಸುವುದಾಗಿ ಆಸ್ಟ್ರೇಲಿಯಾ ತಿಳಿಸಿದೆ. ನಾವು ಈ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ತಿಳಿಸಿರುವುದಾಗಿ ನೈನ್ ನ್ಯೂಸ್ ವರದಿ ಮಾಡಿದೆ.

ನವೆಂಬರ್ 29ರಿಂದ ವಿದೇಶಿ ಪ್ರಯಾಣಿಕರ ಆಗಮನ ನಿಷೇಧಿಸಲಾಗಿದೆ ಎಂದು ಮೊರೊಕ್ಕೊ ಸರ್ಕಾರ ಮಾಹಿತಿ ನೀಡಿದೆ. ಸಿಂಗಾಪುರ್ ಕೂಡಾ ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಪ್ರಜೆಗಳ ಮೇಲೆ ನಿರ್ಬಂಧ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next