Advertisement

ಚಿನ್ನದ ಸರ ಕಳ್ಳತನವಾಗಿದೆ ಎಂದ ಅಜ್ಜಿ:ಪೊಲೀಸರ ತನಿಖೆಯ ವೇಳೆ ಬಯಲಾಯ್ತು ಬೆಚ್ಚಿ ಬೀಳುವ ರಹಸ್ಯ

07:51 AM Jan 16, 2021 | Mithun PG |

ಬಂಟ್ವಾಳ: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಚಿನ್ನದ ಸರ ಎಳೆದು ಪರಾರಿಯಾಗಿದ್ದಾರೆ ಎಂದು ನಂಬಿಸಲು ಹೊರಟ  ವೃದ್ಧೆಯೊಬ್ಬರ ನಾಟಕೀಯ ಪ್ರಸಂಗ ಬಯಲಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

Advertisement

ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ನಿವಾಸಿ  ಶಾಂತ ನಾಯಕ್  ಎಂಬವರು ಜ.8 ರಂದು ಪೇಟೆಗೆ ಬಂದು ವಾಪಸು  ಮನೆಗೆ ತೆರಳುವ ವೇಳೆ ಮನೆಯ ಪಕ್ಕದಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕುತ್ತಿಗೆಯಲ್ಲಿದ್ದ ಮೂರು ಪವನ್ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದರು. ಈ ವೇಳೆ ಅಜ್ಜಿಯ ಬೆನ್ನಿಗೆ ಗಾಯವಾಗಿತ್ತು.

ಚಿನ್ನದ ಸರ ಕಳೆದುಕೊಂಡ ಅಜ್ಜಿ ನೇರವಾಗಿ ಮನೆಗೆ ಹೋಗಿ, ಮಗಳು ಮಂಗಳೂರಿನಿಂದ ಕೆಲಸ ಮುಗಿಸಿ ಬಂದಾಗ ವಿಚಾರ ತಿಳಿಸಿದ್ದಾರೆ. ಮಾಹಿತಿ ತಿಳಿದ ವೃದ್ದೆಯ ಮಗಳು  ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಕರೆದುಕೊಂಡು ಬಂದು ಘಟನೆಯ ಬಗ್ಗೆ ವಿವರಿಸಿ ಪ್ರಕರಣ ದಾಖಲು ಮಾಡುತ್ತಾರೆ.

ಈ ಘಟನೆ ಗಂಭೀರ ಪ್ರಕರಣವೆಂದು ಪರಿಗಣಿಸಿದ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ.ನಾಗರಾಜ್ ಅವರು  ನಗರ ಠಾಣಾ ಎಸ್.ಐ.ಅವಿನಾಶ್ ಹಾಗೂ ಅಪರಾಧ ವಿಭಾಗದ ಎಸ್.ಐ ಕಲೈಮಾರ್ ನೇತ್ರತ್ವದಲ್ಲಿ ತಂಡ ರಚನೆ ಮಾಡಿ ಅವರು ತಕ್ಷಣವೇ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಲು ಶುರು ಮಾಡುತ್ತಾರೆ. ಸಿ.ಸಿ.ಕ್ಯಾಮರಾ ಪೂಟೇಜ್ ಗಳ ಪರಿಶೀಲನೆ ನಡೆಸುತ್ತಾರೆ.

ಆದರೆ ಅ ದಿನ ದೂರು ನೀಡಿದ ಅಜ್ಜಿಯ ಮನೆಯ ರಸ್ತೆಯಲ್ಲಿ ಅಂತಹ ಯಾವುದೇ ಘಟನೆ ನಡೆದ ಬಗ್ಗೆ ಸುಳಿವು ಪೋಲೀಸ್ ತಂಡಕ್ಕೆ  ಸಿಗದ ಹಿನ್ನೆಲೆಯಲ್ಲಿ ಅಜ್ಜಿಯ ವಿಚಾರಣೆಗೆ ಮುಂದಾಗುತ್ತಾರೆ. ಈ ವೇಳೆ ಅಜ್ಜಿ ತಪ್ಪು ಒಪ್ಪಿಕೊಂಡು ನಡೆದ ಸತ್ಯ ವಿಚಾರವನ್ನು ಬಾಯಿಬಿಡುತ್ತಾರೆ.

Advertisement

ಇದನ್ನೂ ಓದಿ:  ಉದ್ಯೋಗ ಆಮಿಷವೊಡ್ಡಿ 28 ಲ.ರೂ. ವಂಚನೆ ಉಡುಪಿಯ ಸ್ವರೂಪ್‌ ಶೆಟ್ಟಿ ವಿರುದ್ಧ ಮತ್ತೂಂದು ಕೇಸ್‌

ನಡೆದದ್ದು ಇಷ್ಟೇ !

ಅಜ್ಜಿಯ ಕುತ್ತಿಗೆಯಲ್ಲಿನ ಚಿನ್ನದ ಚೈನ್ ಒಂದನ್ನು ಯಾವುದೋ ಉದ್ದೇಶದಿಂದ ಸಂಬಂಧಿಕರಿಗೆ ನೀಡಿದ್ದರು. ಬಳಿಕ ಮಗಳು ಬೈಯುತ್ತಾಳೆ ಎಂಬ ಕಾರಣಕ್ಕಾಗಿ ಬೆನ್ನಿಗೆ ಪರಚಿದ ರೀತಿಯಲ್ಲಿ ಗಾಯ ಮಾಡಿಕೊಂಡು ರಾಬರಿ ಮಾಡಿದ್ದಾರೆ ಎಂಬ ನಾಟಕ ಮಾಡಿದ್ದರು.

ಸಾಕಷ್ಟು ತಲೆನೋವು ಉಂಟುಮಾಡಿದ್ದ ಪ್ರಕರಣವನ್ನು  ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದ  ಎಸ್.ಐ.ಅವಿನಾಶ್ ಹಾಗೂ ಕಲೈಮಾರ್ ಅವರ ತಂಡ ಚಾಕಚಕ್ಯತೆಯಿಂದ ಇತ್ಯರ್ಥ ಮಾಡಿದ ಬಳಿಕ ಅಜ್ಜಿಯ ಮೇಲೆ ಪ್ರಕರಣ ದಾಖಲಿಸಲು ನ್ಯಾಯಲಯಕ್ಕೆ ಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಂಬಂಧಗಳಲ್ಲಿ ಏಳುಬೀಳು, ಮುಂಗೋಪದಿಂದ ಕೆಲಸ ಹಾಳು: ಹೇಗಿದೆ ಇಂದಿನ ದಿನ ಭವಿಷ್ಯ !

Advertisement

Udayavani is now on Telegram. Click here to join our channel and stay updated with the latest news.

Next