Advertisement
ಭೂಮಿಯ ಗಡಿಗುರುತಿಸಲು, ರಕ್ಷಣೆಗೆ ಹಾಕುವ ಬೇಲಿಗಳದ್ದು ಇದೇ ಕಥೆ. ನಮ್ಮ ಭೂಮಿಯÇÉೊಂದು ಮನುಷ್ಯರ ಓಡಾಟ ಬಹಳ ಸೀಮಿತವಾಗಿರುವ ಗುಡ್ಡ ಇದೆ. ಅದರಲ್ಲಿ ಮುರ (ಲಾಟರೈಟ್) ಕಲ್ಲುಗಳು ವಿಚಿತ್ರವಾಗಿ ಅಲ್ಲಲ್ಲಿ ಎದ್ದು ತಮ್ಮ ಸೃಷ್ಟಿ ಹೇಗಾಯಿತು ಎನ್ನುವ ರಹಸ್ಯವನ್ನು ನಮಗೆ ತಿಳಿಯಗೊಡದಂತೆ ಮಲಗಿಕೊಂಡಿವೆ. ಈ ಬೆಟ್ಟದ ನೆತ್ತಿಯಲ್ಲಿ ನಮ್ಮ ಗಡಿರೇಖೆ ಹಾದುಹೋಗುತ್ತದೆ. ಮುರಕಲ್ಲಿನ ಉಂಡೆಗಳನ್ನು ಜೋಡಿಸಿ ಬರಿಯ ಗುರುತ್ವಬಲದಿಂದ ನಿಲ್ಲಿಸಿ ಮಾಡಿದ ಗೋಡೆಯೊಂದು ಇಲ್ಲಿ ನಮ್ಮ ಗಡಿಯನ್ನು ಕಾಯುತ್ತಿದೆ. ಇದನ್ನು ನನ್ನ ಸಣ್ಣಜ್ಜ ಹಿಂದೆ ಮಾಡಿಸಿದ್ದರಂತೆ. ಸುಮಾರು ಅರವತ್ತು ವರ್ಷ ಹಿಂದೆ ಇರಬಹುದು. ನನ್ನ ತಂದೆಗೂ ನೆನಪಿಲ್ಲ.
ಅಡಿಕೆ ತೋಟಕ್ಕೆ ಇನ್ನಷ್ಟು ಸರಳವಾದ ಬೇಲಿಹಾಕುವ ಒಂದು ಕ್ರಮವಿದೆ. ಮುಳ್ಳು ಬಿದಿರಿನ ಮೆಳೆಯಿಂದ ಸಪೂರದ ಅಡ್ಡಗೆಲ್ಲುಗಳನ್ನು ಕೊಯ್ದು ತಂದು, ಅವುಗಳನ್ನು ಬೇಲಿಗೆ ಹೊದೆಸಿ, ಮೇಲಿಂದ ಬಂಧಕ್ಕೆ ಅಡಿಕೆ ಮರದ ಸಲಿಕೆ ಉದ್ದಕ್ಕೆ ಇಟ್ಟು ಅಲ್ಲಲ್ಲಿ ಸರಿಗೆಯ ಕಟ್ಟು ಹಾಕುವುದು. ಇಡೀ ಬೇಲಿಯ ಆಧಾರಕ್ಕೆ ಹತ್ತು, ಹದಿನೈದಡಿ ದೂರಕ್ಕೆ ಒಂದೊಂದು ಗೂಟದ ಆಧಾರ. ಪ್ರತೀ ವರ್ಷ, ಎರಡು ವರ್ಷಕ್ಕೊಮ್ಮೆ ಮೇಲಿಂದ ಮತ್ತೆ ಮುಳ್ಳು ಹೊದೆಸಿ ನಿರ್ವಹಣೆ ಮಾಡುವುದು. ಈ ಬೇಲಿ ತೋಡು, ನೀರಿನ ಕಾಲುವೆಗಳನ್ನು ಹಾದುಹೋಗುವಲ್ಲಿ ಮಳೆಗಾಲದ ರಭಸಕ್ಕೆ ಇತರೆ ಕಸಕಡ್ಡಿಯ ಜೊತೆ ತೆಂಗಿನಕಾಯಿ ಸಿಕ್ಕಿ ಬಿದ್ದು ಅದನ್ನು ಸಂಗ್ರಹಿಸುವುದು ಹಳ್ಳಿಮನೆಗಳಲ್ಲಿ ವಾಡಿಕೆ.
Related Articles
Advertisement
ಬುಡದಲ್ಲಿ ಕಂದು(ಪಿಳ್ಳೆ)ಯ ಮೂಲಕ (ನಿರ್ಲಿಂಗ ವಿಧಾನ), ದೊಡ್ಡ ಹೂಗುತ್ಛವಾಗಿ ಬೀಜ ಬಿದ್ದು ಸಾವಿರಾರು ಗಿಡವಾಗಿ ಲೈಂಗಿಕ ವಿಧಾನದಿಂದ ವಂಶಾಭಿವೃದ್ಧಿ ಮಾಡುತ್ತದೆ. ಅಷ್ಟಲ್ಲದೆ ಹೂಗುತ್ಛದ ಮೇಲೆ ಸಾವಿರಾರು ತದ್ರೂಪಿ ಮರಿಗಳನ್ನು (ನಿರ್ಲಿಂಗ ವಿಧಾನ) ಮಾಡಿ ಭೂಮಿ ಸೇರಿಸುವುದು ಕತ್ತಾಳೆಯ ಇನ್ನೊಂದು ವಿಧಾನ. ಈ ಗಿಡದ ಎಲೆಯಿಂದ ನಾರು ತೆಗೆದು ಹಗ್ಗ ಹೊಸೆಯಬಹುದು. ಹೂಗುಚ್ಚದ ದಂಟನ್ನು ಮಡಕೆಯನ್ನು ಹೆಗಲ ಮೇಲೆ ಹೊತ್ತು ಮಾರುವವರು ಮಡಿಕೆ ಕಟ್ಟುವ ದಂಟಾಗಿ ಉಪಯೋಗಿಸುತ್ತಾರೆ ಎಂದು ಕೇಳಿದ್ದೇನೆ. ಈ ದಂಟು ಸ್ವಲ್ಪ ಚcಠಿಜಿಟn ಕೊಡುವುದರಿಂದ ಶಾಕ್ ಅಬಾÕರ್ಬರರ್ ನಂತೆ ಕೆಲಸ ಮಾಡುವು ದಂತೆ. ಈಗ ಮಡಿಕೆಯನ್ನು ಹೆಗಲ ಮೇಲೆ ಹೊತ್ತು ಮನೆಮನೆಗೆ ಮಾರುವುದು ಅಳಿವಿನಂಚಿನಲ್ಲಿರುವ ಉದ್ಯೋಗ. ಅದರೊಂದಿಗೆ ಕತ್ತಾಳೆ ದಂಟಿನ ಬಳಕೆ ಅಂತ್ಯಕಾಣುವುದು ಖಂಡಿತ.
ಕುಡಿದು ಸಂಭ್ರಮಿಸುವ “ಟಕೀಲಾ’ ಎನ್ನುವ ಮಾದಕ ಪೇಯವನ್ನು ಭೂತಾಳೆಯ ವಿದೇಶಿ ಜಾತಿಯೊಂದರಿಂದ ಮಾಡುತ್ತಾರೆ. ಹೋದ ವರ್ಷ ಮಳೆಗಾಲ ಕಳೆಯುತ್ತಿದ್ದಂತೆ ನಾವೊಂದು ಹೊಸ ಅಗಳು (ಪಾಗಾರ) ಮಾಡಿ¨ªೆವು. ಆಗ ನಾನು ಕತ್ತಾಳೆ ಮರಿಗಳನ್ನು ಸಂಗ್ರಹ ಮಾಡಿ ಅದರ ಮೇಲೆ ಸುಮ್ಮನೆ ಉದುರಿಸಿ¨ªೆ. ಅವು ಈಗ ಕಷ್ಟಪಟ್ಟು ಜೀವ ಹಿಡಿದು ಈ ಮಳೆಗಾಲದ ತುಂತುರು ಸಿಂಚನಕ್ಕೆ ಕಾಯುತ್ತಿವೆ.
ಭೂಮಿ ಮೇಯುವ ಬೇಲಿಗಳುಗಡಿಯನ್ನು ಗುರುತಿಸುವುದು ವಿಕಸಿತ ಜೀವಜಾತಿಗಳಲ್ಲಿ ವ್ಯಾಪಕವಾಗಿರುವ ಒಂದು ಕ್ರಮ. ಹುಲಿ, ನಾಯಿಯಂಥವು ಮೂತ್ರದ ವಾಸನೆಯಿಂದ ತಮ್ಮ ಬೇಲಿ ಹಾಕುತ್ತವೆ. ತಮ್ಮ ಘರ್ಜನೆ, ಹೋರಾಟದಿಂದ ತಮ್ಮದೇ ಜಾತಿಯ ಇತರ ಪ್ರಾಣಿಗಳನ್ನು ದೂರ ಇರಿಸುವವು ಬಹಳ ಇವೆ. ಆದ್ದರಿಂದ ಗಡಿಯೆಂಬುದು ಮನುಷ್ಯನೊಬ್ಬನ ತಪ್ಪು ಕಲ್ಪನೆ ಎಂದು ಭ್ರಮಿಸಿದರೆ ಅದು ಸರಿಯಾಗ ಲಾರದು. ಅದು ನಮ್ಮ ಇನ್ಸ್ಟಿಂಕ್ಟ್. ಆದರೆ ಗಡಿ ಗುರುತಿಸುವಂಥ ಜೀವನದ ಸಣ್ಣ ಭಾಗವೊಂದು ಪ್ರಕೃತಿಗೇ ಭಂಜಕವಾಗಿರುವುದು ಮನುಷ್ಯನದೇ ಸಾಧನೆ! ಈಗಿನ ವೇಗದ ಯುಗದಲ್ಲಿ ಅಲ್ಲಲ್ಲಿನ ಕಲ್ಲು ಹೊಂದಿಸಿ ಬೇಲಿ ಕಟ್ಟುವವರು, ಮಣ್ಣಿನ ಪಾಗಾರವೆಬ್ಬಿಸಿ ದಡ್ಡಿಗಿಡ ನೆಟ್ಟು ಭದ್ರಮಾಡುವವರು ಎಲ್ಲಿ¨ªಾರೆ? ದಶಕಗಳ ಹಿಂದೆಯೇ ಕಲ್ಲಿನ ಕಂಬ ನಿಲ್ಲಿಸಿ ಬಾರ್ಬೆಡ್ ವಯರಿನ ತಂತಿಬೇಲಿಯ ಯುಗ ಸುರುವಾಯಿತು. ನಮ್ಮೂರಿಗೆಲ್ಲ ದೂರದ ಕಲ್ಲಿನ ಊರಿನಿಂದ ಕಲ್ಲಿನ ಕಂಬಗಳು ಬರ್ತಾ ಇದ್ದವು. ಕ್ರಮೇಣ ಕಂಬಗಳಿಗೆ ಬೆಲೆ ಬಂದಾಗ ಇವು ಸಪೂರ ಆಗುತ್ತಿದ್ದವು. ಸಬ್ಬಲ್ (ಗುದ್ದಲಿ) ಯ ತಲೆಯಲ್ಲಿ ಒಂದು ಹೊಡೆದರೆ ಮುರಿದು ಬೀಳುವಂತೆ ಆದವು. ಅದೇ ಸಮಯಕ್ಕೆ ಕಲ್ಲಿನ ಕ್ವಾರಿಯಲ್ಲಿ ಗಣಿಗಾರಿಕೆ ಹೆಚ್ಚಿ ಪರಿಸರ ನಾಶದ ರೂಪ ಪಡೆಯಿತು. ತಂತಿಬೇಲಿಗೆ ಬೇಕಿದ್ದ ಕಬ್ಬಿಣ ಎಲ್ಲಿಂದ ಬಂತು ಎನ್ನುವುದು ನಮಗೆ ತಿಳಿಯುತ್ತಿರಲಿಲ್ಲ. ಅದರ ಗಣಿಗಾರಿಕೆ, ಶುದ್ಧೀಕರಣ, ಕಳಪೆ ಕಾಮಗಾರಿಯ ಬೇಗನೆ ತುಕ್ಕುಹಿಡಿಯುವ ಬೇಲಿಯ ತಂತಿಗಳ ಹಿಂದಿನ ಮೋಸದ ಮತ್ತು ವಿನಾಶದ ಕಥೆ ತುಂಬಾ ದೊಡ್ಡದೇ ಇರಬಹುದು. ಬೇಲಿ ಆರೇಳು ವರ್ಷಕ್ಕೆ ಹಾಳಾಗಿ ಹೋಗಲು ಸುರುವಾಯ್ತು. ಕಂಬಗಳು ಸಣ್ಣ ಆಘಾತಕ್ಕೆ ಅಲ್ಲಲ್ಲಿ ಮುರಿದೂ ಬೀಳತೊಡಗಿದವು. ಒಂದು ಹಂತಕ್ಕೆ ಕಲ್ಲಿನ ಕಂಬಗಳು ಸಿಗುವುದೇ ಕಷ್ಟವಾಗತೊಡಗಿತು.
ಜನ ಇನ್ನಷ್ಟು ಅಡ್ಡದಾರಿಗಳನ್ನು ಹಿಡಿಯಹೊರಟರು. ಕಲ್ಲಿನ ಕಂಬಗಳ ಬದಲಿಗೆ ಕಾಂಕ್ರೀಟ್ ಕಂಬಗಳು, ಕಬ್ಬಿಣದ ತಂತಿಬೇಲಿಯ ಬದಲಿಗೆ ಬಿಸಿಲಿಗೆ ಮಣಿಯದ, ತುಕ್ಕು ಹಿಡಿಯದ ಪ್ಲಾಸ್ಟಿಕ್ ಬಾರ್ಬೆಡ್ ವಯರುಗಳು ಈಗ ಬಂದಿವೆ. ಬೇಸಿಗೆಯಲ್ಲಿ ಹುಲ್ಲಿಗೆ ಬೆಂಕಿಹಿಡಿದರೆ ಪ್ಲಾಸ್ಟಿಕ್ ಬೇಲಿ ಕರಗಿ ನೆಲಕ್ಕೊರಗುತ್ತದೆ. ಕಾಂಕ್ರೀಟ್ ಕಂಬಕ್ಕೆ ಬೇಕಾಗುವ ಮರಳಿನ ಅಲಭ್ಯತೆಯದು ಇನ್ನೊಂದೇ ಕಥೆ. ಮರಳನ್ನು ಇಂಡೋನೇಶಿಯಾದಿಂದ ಆಮದು ಮಾಡಲು ಹೊರಟಿದೆ ಸರಕಾರ! ಹೀಗೆ ನಮ್ಮ ಬೇಲಿಗಳನ್ನಷ್ಟೇ ಗಮನಿಸಿದರೂ ನಮಗೆ ನಮ್ಮ ಪಾರಿಸರಿಕ ಪತನದ ದಾರಿ ತಿಳಿಯುತ್ತದೆ. ಈಗ ಜೆಸಿಬಿಗಳ ಯುಗ ನಡೆಯುತ್ತಿರುವುದರಿಂದ ಮಣ್ಣಿನ ಅಗಳು (ಬೇಲಿ) ಹಾಕುವ ಕ್ರಮ ಮತ್ತೆ ಕೆಲವು ಕಡೆ ಸುರುವಾಗಿದೆ. ಆದರೆ ಜೆಸಿಬಿ ಅಗಲಕ್ಕೆ ಮಣ್ಣನ್ನು ಸಡಿಲಮಾಡುತ್ತದೆ, ಮನುಷ್ಯನ ಕೈಕೆಲಸದ ಸೊಗಸು ಅದರ ಕೆಲಸಕ್ಕಿಲ್ಲ. ಜೆಸಿಬಿಯಲ್ಲಿ ಮಾಡಿದ ಬೇಲಿಯ ಮೇಲೆ ಕತ್ತಾಳೆ ಮರಿಗಿಡಗಳನ್ನು ಉದುರಿಸುವಷ್ಟು ಈಗ ಭೂಮಾಲೀಕರಿಗೆ ಸಮಯ ಇಲ್ಲದಾಗಿದೆ. ಭೂಮಿಯ ಮೇಲೆ ನಮ್ಮ ಕಾಳಜಿ, ಪ್ರೀತಿ, ಸಂಗೋಪನೆಯಲ್ಲಿ ಗಣನೀಯ ಇಳಿಕೆಯಾಗಿರುವುದಕ್ಕೆ ಇದೊಂದು ಸೂಚಿ. ಈ ಸ್ವಭಾವ ನಮ್ಮೆಲ್ಲ ಉದ್ಯಮಗಳಲ್ಲಿ ಸಾಂಕ್ರಾಮಿಕವಾಗಿರುವುದರಿಂದ ನಿಸರ್ಗದ ಅದದೇ ಮೂಲವಸ್ತುಗಳ ಗಂಭೀರ ಕೊರತೆಯಾಗಿರುವುದೂ ನಮಗೆ ಕಾಣಿಸುತ್ತದೆ. ಈ ಎಲ್ಲ ಅಬದ್ಧಗಳನ್ನು ಪ್ರಶ್ನಿಸುವಂತೆ ನಮ್ಮ ಭೂಮಿಯ ಹಳೆಯ, ಸ್ಥಳೀಯ ಮೂಲವಸ್ತುಗಳಿಂದ ನಿರ್ಮಿತ ಕೆಲವು ಬೇಲಿಗಳು ಇಂದಿಗೂ ನೆಟ್ಟಗೆ ನಿಂತಿವೆ. – ವಸಂತ ಕಜೆ