Advertisement

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

08:54 PM Jan 18, 2022 | Team Udayavani |

ನವದೆಹಲಿ: 2014ರ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತೈಲ ದರವು ಬ್ಯಾರೆಲ್‌ಗೆ 87 ಡಾಲರ್‌ಗೆ ಏರಿಕೆಯಾಗಿದೆ. ಆದರೆ, ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸತತ 74 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ.

Advertisement

ಜಾಗತಿಕ ಬಿಕ್ಕಟ್ಟು, ಯುಎಇ ತೈಲ ಸಂಗ್ರಹಾಗಾರದ ಮೇಲೆ ಯೆಮೆನ್‌ನ ಹೂತಿ ಉಗ್ರರ ದಾಳಿಯಿಂದ ಪೂರೈಕೆಯಲ್ಲಾಗಿರುವ ವ್ಯತ್ಯಯ ಮತ್ತಿತರ ಕಾರಣಗಳಿಂದಾಗಿ ಬ್ರೆಂಟ್‌ ದರ ಬ್ಯಾರೆಲ್‌ಗೆ 87.7 ಡಾಲರ್‌ಗೇ ರಿದೆ. ಪ್ರತಿ ಬಾರಿ ಅಂತಾರಾಷ್ಟ್ರೀಯ ತೈಲ ದರ ಏರಿಕೆಯಾಗುತ್ತಲೇ ದೇಶದಲ್ಲೂ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳವಾಗುತ್ತದೆ. ಆದರೆ, ಈಗ ಸುಮಾರು 2 ತಿಂಗಳಿಂದ ದರ ಏರಿಕೆಯಾಗಿಲ್ಲ.

ಇದನ್ನೂ ಓದಿ:ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

ಮುಂಬರುವ ಪಂಚರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸದ್ಯಕ್ಕೆ ತೈಲ ದರ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next