Advertisement

ಗುಜರಾತ್‌, ಮಹಾರಾಷ್ಟ್ರದಲ್ಲಿ ತೈಲ ವ್ಯಾಟ್‌ ಶೇ.4ರಷ್ಟು ಇಳಿಕೆ

07:00 AM Oct 11, 2017 | Harsha Rao |

ಗಾಂಧಿನಗರ/ಮುಂಬೈ: ಗುಜರಾತ್‌, ಮಹಾರಾಷ್ಟ್ರ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪ್ರಮಾಣವನ್ನು ಶೇ.4ರಷ್ಟು ಇಳಿಕೆ ಮಾಡಿವೆ. ಈ ಮೂಲಕ ಎನ್‌ಡಿಎ ಮೈತ್ರಿಕೂಟ ಮತ್ತು ಪ್ರತಿಪಕ್ಷಗಳು ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಇದೇ ಕ್ರಮ ಅನುಸರಿಸುವಂಥ ಪರಿಸ್ಥಿತಿಯನ್ನು ತಂದಿಟ್ಟಿವೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು 2 ರೂ. ಇಳಿಕೆ ಮಾಡಿತ್ತು. 

Advertisement

ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಮೇಲಿನ ವ್ಯಾಟ್‌ ಅನ್ನು ಶೇ.4ರಷ್ಟು ಇಳಿಕೆ ಮಾಡಿದೆ.ಇದರಿಂದಾಗಿ ಇಲ್ಲಿ ಪೆಟ್ರೋಲ್‌ ದರ ಲೀ.ಗೆ 2.93 ಪೈಸೆ, ಡೀಸೆಲ್‌ ದರ 2.72 ಪೈಸೆ ಇಳಿಕೆ ಯಾಗಲಿದೆ. ಮಹಾರಾಷ್ಟ್ರ ಸರ್ಕಾರ ಕೂಡ ವ್ಯಾಟ್‌ ಇಳಿಕೆ ಮಾಡಿದ್ದರಿಂದ ಪೆಟ್ರೋಲ್‌ 2 ರೂ., ಡೀಸೆಲ್‌ ದರ 1 ರೂ. ಕಡಿಮೆಯಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ವಕ್ತಾರ ಶಕ್ತಿಸಿನ್ಹ ಗೋಹಿಲ್‌, ಚುನಾವಣೆ ಹಿನ್ನೆಲೆಯಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next